Asianet Suvarna News Asianet Suvarna News

ಪಬ್ಲಿಕ್ ಟಾಯ್ಲೆಟ್‌ನಲ್ಲೇ ಸ್ವಯಂ ಮೂತ್ರ ಪರೀಕ್ಷೆ: ಏನಾದ್ರೂ ರೋಗವಿದ್ದರೆ ರಿಪೋರ್ಟ್ ತಕ್ಷಣವೇ ನಿಮ್ಮ ಕೈಗೆ!

ಆರೋಗ್ಯವಾಗಿದ್ದೇವೆ ಎಂಬ ಕಾರಣ ಹೇಳುವ ಜನರು ವರ್ಷಕ್ಕೊಮ್ಮೆಯೂ ತಮ್ಮ ಮೂತ್ರ ಪರೀಕ್ಷೆಗೆ ಒಳಗಾಗುವುದಿಲ್ಲ. ಯಾವುದಾದ್ರೂ ಸಮಸ್ಯೆ ಕಾಣಿಸಿಕೊಂಡಾಗ ಮಾತ್ರ ವೈದ್ಯರು ಸಲಹೆ ನೀಡಿದ್ರೆ ಈ ಪರೀಕ್ಷೆ ಮಾಡಿಸಿಕೊಳ್ತಾರೆ. ಆದ್ರೆ ವೈದ್ಯರ ಚೀಟಿ ಇಲ್ಲದೆ ನೀವು ಸಾರ್ವಜನಿಕ ಶೌಚಾಲಯದಲ್ಲಿ ಸ್ವಯಂ ಮೂತ್ರಪರೀಕ್ಷೆಗೆ ಒಳಗಾಗಬಹುದು. ಟೆಕ್ನಾಲಜಿ ಎಷ್ಟು ಮುಂದುವರೆದಿದೆ ನೀವೇ ನೋಡಿ.
 

This Futuristic Public Toilet In China Analyses Your Urine To Measure Health in china roo
Author
First Published Apr 30, 2024, 11:30 AM IST

ದೇಹ ಯಾವುದೇ ರೋಗಕ್ಕೆ ತುತ್ತಾಗಿದ್ರೆ ಅದನ್ನು ಪತ್ತೆ ಮಾಡಲು ರಕ್ತ ಮತ್ತು ಮೂತ್ರದ ಪರೀಕ್ಷೆ ಮಾಡಿಸ್ತೇವೆ. ಮೂತ್ರದ ಪರೀಕ್ಷೆಯಿಂದ ಅನೇಕ ರೋಗಗಳ ಲಕ್ಷಣ ಕಾಣಿಸುತ್ತೆ. ಮೂತ್ರ ಪರೀಕ್ಷೆಗೆ ಜನರು ಮೂತ್ರ – ರಕ್ತ ಪರೀಕ್ಷಾ ಕೇಂದ್ರಕ್ಕೆ ಹೋಗ್ತಾರೆ. ಆದ್ರೆ ಚೀನಾದಲ್ಲಿ ನೀವೇ ನಿಮ್ಮ ಮೂತ್ರ ಪರೀಕ್ಷೆ ಮಾಡಿಕೊಳ್ಬಹುದು. ನೀವು ಅದಕ್ಕೆ ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ. ನಿಮ್ಮ ಮೂತ್ರದಲ್ಲಿ ಏನಾದ್ರೂ ಸಮಸ್ಯೆ ಕಾಣಿಸಿದೆಯಾ ಎಂಬುದನ್ನು ನೀವು ಪತ್ತೆ ಮಾಡಬಹುದು. ಅದಕ್ಕೆ ನೀವು ಸಾರ್ವಜನಿಕ ಶೌಚಾಲಯಕ್ಕೆ ಹೋಗ್ಬೇಕು. ಸಾರ್ವಜನಿಕ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡೋದೆ ಹಿಂಸೆ. ಕೊಳಕು ವಾಸನೆಯಲ್ಲಿ ಅನಿವಾರ್ಯ ಅಂತ ಹೋದ್ರೂ ಸೋಂಕಿನ ಭಯ ಇರುತ್ತೆ. ಹೀಗಿರುವಾಗ ಅಲ್ಲಿ ಮೂತ್ರ ಪರೀಕ್ಷೆ ಹೇಗೆ ಅಂತಾ ನೀವು ಆಲೋಚನೆ ಮಾಡ್ತಿದ್ದೀರಾ, ಇಲ್ಲಿದೆ ವಿವರ. 

ಚೀನಾ (China) ದ ಶೌಚಾಲಯಗಳು ಹೈಟೆಕ್ ಆಗ್ತಿವೆ. ಚೀನಾದಲ್ಲಿ ಫ್ಯೂಚರಿಸ್ಟಿಕ್ ಶೌಚಾಲಯ (Toilet) ನಿರ್ಮಿಸಲಾಗುತ್ತಿದೆ. ಅಲ್ಲಿ ಮೂತ್ರ ಸ್ವಯಂಚಾಲಿತ ಮೇಲ್ವಿಚಾರಣೆ ಮತ್ತು ವಿಶ್ಲೇಷಣೆಯ ಮೂಲಕ ಜನರು ತಮ್ಮ ಆರೋಗ್ಯ (Health) ವನ್ನು ಉತ್ತಮವಾಗಿ ನಿರ್ವಹಿಸಬಹುದು.  ಚೀನಾದ ಪ್ರಮುಖ ನಗರಗಳಾದ ಬೀಜಿಂಗ್ ಮತ್ತು ಶಾಂಘೈನಲ್ಲಿರುವ ಸಾರ್ವಜನಿಕ ಪುರುಷರ ಶೌಚಾಲಯಗಳಲ್ಲಿ ಈ ಸ್ಮಾರ್ಟ್ ಶೌಚಾಲಯಗಳನ್ನು ತೆರೆಯಲಾಗಿದೆ. 

BREAKING: ಕೋವಿಶೀಲ್ಡ್‌ ಲಸಿಕೆಯಿಂದ ಅಡ್ಡಪರಿಣಾಮ ಒಪ್ಪಿಕೊಂಡ ಆಸ್ಟ್ರಾಜೆನಿಕಾ ಕಂಪನಿ!

ಈ ಶೌಚಾಲಯ ಕೇವಲ 20 ಯುವಾನ್‌ಗೆ ತ್ವರಿತ ಮತ್ತು ನಿಖರವಾದ ಮೂತ್ರ ಪರೀಕ್ಷೆಯನ್ನು ಒದಗಿಸುತ್ತದೆ. ಅಂದ್ರೆ ಸರಿಸುಮಾರು 230  ರೂಪಾಯಿಗೆ ಈ ಸೇವೆ ಸಿಗಲಿದೆ.

ವಿಟಮಿನ್ ಸಿ, ಕ್ರಿಯೇಟಿನೈನ್, ಗ್ಲೂಕೋಸ್ ಸೇರಿದಂತೆ ಕೆಲ ಅಂಶಗಳನ್ನು ಈ ಯಂತ್ರ ಗುರುತಿಸುತ್ತದೆ. ಆದ್ರೆ ಈ ಫಲಿತಾಂಶಗಳು ರೋಗನಿರ್ಣಯ ಮಾಡುವುದಿಲ್ಲ. ಉಲ್ಲೇಖವಾಗಿ ಮಾತ್ರ ನೀವು ಅದನ್ನು ಪರಿಗಣಿಸಬಹುದು.  ನಿಮ್ಮ ಮೂತ್ರದಲ್ಲಿ ಯಾವುದಾದ್ರೂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡ್ರೆ ನೀವು ಜಾಗೃತರಾಗಿ ಹೆಚ್ಚಿನ ಪರೀಕ್ಷೆಗೆ ಒಳಗಾಗಬಹುದು. 

ಶಾಂಘೈ ಮೂಲದ ಸಾಕ್ಷ್ಯಚಿತ್ರ ನಿರ್ದೇಶಕ ಕ್ರಿಶ್ಚಿಯನ್ ಪೀಟರ್ಸನ್  ಈ ಶೌಚಾಲಯದ ಫೋಟೋವನ್ನು ಹಂಚಿಕೊಂಡಿದ್ದಾರೆ.  ಇತ್ತೀಚೆಗೆ, ಶಾಂಘೈನಾದ್ಯಂತ ಪುರುಷರ ವಿಶ್ರಾಂತಿ ಕೊಠಡಿಗಳಲ್ಲಿ ಆರೋಗ್ಯ ತಪಾಸಣೆ ಮೂತ್ರಾಲಯಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ ಎಂದು ಅವರು ಬರೆದಿದ್ದಾರೆ. ಖಾಸಗಿ ಕಂಪನಿಯು RMB 20  ಇದನ್ನು ತಯಾರಿಸುತ್ತಿದೆ.   

ಕ್ರಿಶ್ಚಿಯನ್ ಪೀಟರ್ಸನ್ ಇದ್ರ ಬಗ್ಗೆ ಮತ್ತಷ್ಟು ವಿಷ್ಯಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಬಳಸೋದು ಬಹಳ ಸುಲಭ. ನಾನು ವೀ ಚಾಟ್ ಮೂಲಕ ಶುಲ್ಕ ಪಾವತಿ ಮಾಡಿ ಇದನ್ನು ಬಳಕೆ ಮಾಡಿದೆ ಎಂದು ಅವರು ಹೇಳಿದ್ದಾರೆ. ಮೂತ್ರ ವಿಸರ್ಜನೆ ನಂತ್ರ ನನಗೆ ಸ್ಕ್ರೀನ್ ನಲ್ಲಿ ನನ್ನ ಫಲಿತಾಂಶ ಕಾಣಿಸಿತು ಎಂದು ಅವರು ಬರೆದಿದ್ದಲ್ಲದೆ ಅದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಾಂಘೈನ ಬಹುತೇಕ ಎಲ್ಲ ಪುರುಷರ ಶೌಚಾಲಯದಲ್ಲಿ ಈ ಯಂತ್ರ ಕಾಣಿಸಿಕೊಳ್ತಿದೆ. 

ಒಂದು ಬಾರಿ ಕ್ರಿಶ್ಚಿಯನ್ ಪೀಟರ್ಸನ್ ಪರೀಕ್ಷೆ ಮಾಡಿದಾಗ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುವುದು ಪತ್ತೆಯಾಗಿತ್ತಂತೆ. ಒಂದು ವಾರದ ನಂತ್ರ ಅತಿ ಹೆಚ್ಚು ಹಾಲು ಕುಡಿದಿದ್ದ ಕ್ರಿಶ್ಚಿಯನ್ ಪೀಟರ್ಸನ್ ಮತ್ತೆ ಟೆಸ್ಟ್ ಮಾಡಿದ್ದಾರೆ. ಈ ವೇಳೆ ಯಾವುದೇ ಸಮಸ್ಯೆ ಕಾಣಿಸಲಿಲ್ಲ ಎನ್ನುವ ಕ್ರಿಶ್ಚಿಯನ್ ಪೀಟರ್ಸನ್, ಇದು ತುಂಬಾ ಒಳ್ಳೆಯದು ಎಂದಿದ್ದಾರೆ. ರೋಗ ಗಂಭೀರವಾಗುವ ಮೊದಲೇ ಎಚ್ಚರಿಕೆ ತೆಗೆದುಕೊಳ್ಳು ಇದು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಈ ವಯಸ್ಸಲ್ಲೂ ಸೂಪರ್ಬ್ ಆಗಿ ಫಿಟ್ನೆಸ್ ಮೆಂಟೈನ್ ಮಾಡಿರೋ ಸುಧಾರಾಣಿಗೆ ಡಯಟ್ ಅಂದ್ರೆ ಆಗಿ ಬರೋಲ್ವಂತೆ!

ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋ, ಫೋಟೋ ವೈರಲ್ ಆಗಿದೆ. ಜನರು ಅನೇಕ ರೀತಿಯ ಕಮೆಂಟ್ ಮಾಡಿದ್ದಾರೆ. ಗೌಪ್ಯತೆ ಬಗ್ಗೆ ಕೆಲವರು ಪ್ರಶ್ನೆ ಮಾಡಿದ್ದರೆ ಮತ್ತೆ ಕೆಲವರು ಅಮೆಜಾನ್ ನಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಕಿಟ್ ಸಿಗಲಿದ್ದು, ಅದನ್ನು ಬಳಸಿ ಎಂಬ ಸಲಹೆ ನೀಡಿದ್ದಾರೆ. 

Follow Us:
Download App:
  • android
  • ios