Asianet Suvarna News Asianet Suvarna News

ತರಬೇತಿ ವೇಳೆ ಎರಡು ಮಿಲಿಟರಿ ಹೆಲಿಕಾಪ್ಟರ್‌ಗಳ ನಡುವೆ ಅಪಘಾತ: 10 ಬಲಿ

ರಬೇತಿ ವೇಳೆ ಎರಡು ಮಲೇಷ್ಯಾ ಮಿಲಿಟರಿ ಹೆಲಿಕಾಪ್ಟರ್‌ಗಳ ಮಧ್ಯೆ ಅಪಘಾತ ನಡೆದಿದ್ದು, 10 ಜನ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತರಬೇತಿ ವೇಳೆ ಈ ದುರಂತ ನಡೆದಿದೆ ಎಂದು ಮಲೇಷ್ಯಾದ ನೇವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

two Malaysian military helicopters crashed while preparing for Navy Day anniversary 10 killed akb
Author
First Published Apr 23, 2024, 11:40 AM IST

ತರಬೇತಿ ವೇಳೆ ಎರಡು ಮಲೇಷ್ಯಾ ಮಿಲಿಟರಿ ಹೆಲಿಕಾಪ್ಟರ್‌ಗಳ ಮಧ್ಯೆ ಅಪಘಾತ ನಡೆದಿದ್ದು, 10 ಜನ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ತರಬೇತಿ ವೇಳೆ ಈ ದುರಂತ ನಡೆದಿದೆ ಎಂದು ಮಲೇಷ್ಯಾದ ನೇವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ತಿಂಗಳು ಮಲೇಷ್ಯಾ ನೌಕಾಪಡೆಯ 90 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಸಾಹಸ ಪ್ರದರ್ಶನ ನೀಡಲು ಎರಡು ಹೆಲಿಕಾಪ್ಟರ್‌ನಲ್ಲಿ ತರಬೇತಿ ನೀಡಲಾಗುತ್ತಿತ್ತು. ಉತ್ತರ ಪೆರಾಕ್ ರಾಜ್ಯದ ನೌಕಾ ನೆಲೆಯಲ್ಲಿ ಹೆಲಿಕಾಪ್ಟರ್‌ಗಳು ಪೂರ್ವಾಭ್ಯಾಸ ಮಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ನೌಕಾಪಡೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಹೆಲಿಕಾಪ್ಟರ್‌ನಲ್ಲಿದ್ದ 10 ಜನರು ಕೂಡ ದುರಂತ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪಾರ್ಥಿವ ಶರೀರಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗುರುತನ್ನು ಇನ್ನಷ್ಟೇ ಪತ್ತೆ ಮಾಡಬೇಕಿದೆ. AW139 ಹೆಸರಿನ ಸಾಗರ ಕಾರ್ಯಾಚರಣೆ ಹೆಲಿಕಾಪ್ಟರ್‌ (maritime operation helicopter) ನಲ್ಲಿ ಏಳು ಸಿಬ್ಬಂದಿ ಇದ್ದರು ಹಾಗೂ ಇತರ ಮೂವರು ಸಿಬ್ಬಂದಿ ಮತ್ತೊಂದು  ಹಗುರವಾದ ಫೆನೆಕ್ ಹೆಲಿಕಾಪ್ಟರ್‌ನಲ್ಲಿದ್ದರು. AW139 ಹೆಲಿಕಾಪ್ಟರ್‌ನ್ನು ಇಟಾಲಿಯನ್ ರಕ್ಷಣಾ ಗುತ್ತಿಗೆದಾರ ಲಿಯೊನಾರ್ಡೊ ಅವರಿಗೆ ಸೇರಿದ ಅಗಸ್ಟಾ ವೆಸ್ಟ್‌ಲ್ಯಾಂಡ್  ನಿರ್ಮಿಸಿದೆ.  ಹಾಗೆಯೇ ಪೆನಕ ಹೆಲಿಕಾಪ್ಟರ್‌ನ್ನು ಯುರೋಪಿಯನ್ ಬಹುರಾಷ್ಟ್ರೀಯ ರಕ್ಷಣಾ ಸಂಸ್ಥೆಗೆ ಸೇರಿದ ಏರ್‌ಬಸ್ ನಿರ್ಮಿಸಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಅಪಘಾತಕ್ಕೀಡಾದ AW139 ಹೆಲಿಕಾಪ್ಟರ್ ನೌಕಾ ನೆಲೆಯಲ್ಲಿನ ಕ್ರೀಡಾ ಸಂಕೀರ್ಣದ ಮೇಲೆ ಬಿದ್ದರೆ, ಫೆನಕ ಹೆಲಿಕಾಪ್ಟರ್ ಹತ್ತಿರದ ಈಜುಕೊಳದ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ. ಅಪಘಾತಕ್ಕೆ ಕಾರಣವೇನೆಂದು ತಿಳಿಯಲು ತನಿಖೆ ನಡೆಸುವುದಾಗಿ ನೌಕಾಪಡೆ ತಿಳಿಸಿದೆ.

ಚುನಾವಣೆ ಎಫೆಕ್ಟ್‌: ಬಾಡಿಗೆ ವಿಮಾನ, ಕಾಪ್ಟರ್‌ಗೆ ಭಾರಿ ಬೇಡಿಕೆ

ಎಲೆಕ್ಷನ್‌ಗೆ ಪಕ್ಷಗಳಿಂದ ಬಹುತೇಕ ಕಾಪ್ಟರ್‌ಗಳು ಬುಕ್‌: ಗಂಟೆಗೆ ಲಕ್ಷ ಲಕ್ಷ ಬಾಡಿಗೆ..!

Follow Us:
Download App:
  • android
  • ios