Asianet Suvarna News Asianet Suvarna News

ಅತ್ಯಾಚಾರಿಯನ್ನೇ ಸಂತ್ರಸ್ತೆ ಮದುವೆಯಾಗಬೇಕು: ಜನವರಿ ಅಂತ್ಯಕ್ಕೆ ಹೊಸ ಮಸೂದೆ!

ಅತ್ಯಾಚಾರಿಯನ್ನೇ ಸಂತ್ರಸ್ತೆ ಮದುವೆಯಾಗುವ ಘೋರ ಮಸೂದೆ| ಜನವರಿ ಅಂತ್ಯಕ್ಕೆ ಘೋರ ಮಸೂದೆ ಮಂಡಿಸಲು ಸಜ್ಜಾದ ಟರ್ಕಿ|  ಅತ್ಯಾಚಾರ ಮಾಡಿದಾತ ಸಂತ್ರಸ್ತೆಯನ್ನೇ ಮದುವೆಯಾಗಬೇಕು ಎಂಬ ಮಸೂದೆ| ಮಸೂದೆಗೆ ಟರ್ಕಿ ಮಹಿಳಾ ಸಂಘಟನೆಗಳ ಭಾರೀ ವಿರೋಧ| ಸಂಸತ್ತಿನಲ್ಲಿ ಮಸೂದೆ ಮಂಡಿಸಲು ಮುಂದಾದ ಟರ್ಕಿ ಸರ್ಕಾರ| 

Turkey To Introduce Marry Your Rapist Bill In Parliament By This Month End
Author
Bengaluru, First Published Jan 23, 2020, 4:22 PM IST

ಇಸ್ತಾಂಬುಲ್(ಜ.23): ಅತ್ಯಾಚಾರ ಇಡೀ ವಿಶ್ವವನ್ನು ಕಾಡುತ್ತಿರುವ ಸಾಮಾಜಿಕ ಪಿಡುಗು. ಹೆಣ್ಣನ್ನು ಭೋಗದ ವಸ್ತುವನ್ನಾಗಿ ನೋಡುವ ಮನೋಸ್ಥಿತಿ ಬದಲಾಗುವವರೆಗೂ ಈ ಪಿಡುಗು ಸಾಯುವುದಿಲ್ಲ.

ಅದರಂತೆ ಅತ್ಯಾಚಾರಕ್ಕೆ ವಿಶ್ವದ ವಿವಿಧ ದೇಶಗಳಲ್ಲಿ ಕಠಿಣ ಶಿಕ್ಷೆಗಳಿದ್ದು, ಪ್ರಮುಖವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅತ್ಯಾಚಾರಕ್ಕೆ ಮರಣ ದಂಡನೆ ಕಟ್ಟಿಟ್ಟ ಬುತ್ತಿ.

ಡೆತ್‌ ವಾರಂಟ್‌ ಜಾರಿ ಬಳಿಕ 7 ದಿನದಲ್ಲಿ ಶಿಕ್ಷೆ ಜಾರಿ ಆಗಲಿ: ಸುಪ್ರೀಂಗೆ ಸರ್ಕಾರದ ಮೊರೆ!

ಮರಣ ದಂಡನೆಯ ವಿವಿಧ ಪ್ರಕಾರಗಳು ಕಾನೂನಿನ ರೂಪದಲ್ಲಿ ಅಸ್ತಿತ್ವದಲ್ಲಿದ್ದು, ಸಾರ್ವಜನಿಕವಾಗಿ ಗಲ್ಲುಶಿಕ್ಷೆ ನೀಡುವುದೂ ಸೇರಿದಂತೆ ಹಲವು ಪ್ರಕಾರಗಳು ಚಾಲ್ತಿಯಲ್ಲಿವೆ.

ಆದರೆ ಟರ್ಕಿ ಅತ್ಯಾಚಾರ ಪಿಡುಗಿಗೆ ವಿನೂತನ ಮಾರ್ಗವೊಂದರ ಮೊರೆ ಹೋಗಿದ್ದು, ಅತ್ಯಾಚಾರ ಮಾಡಿದಾತ ಸಂತ್ರಸ್ತೆಯನ್ನೇ ಮದುವೆಯಾಗಬೇಕು ಎಂಬ ಹೊಸ ಮಸೂದೆ ಮಂಡಿಸಲು ಸಜ್ಜಾಗಿದೆ.

ಹೌದು, ಮ್ಯಾರಿ ಯುವರ್ ರೇಪಿಸ್ಟ್(ಅತ್ಯಾಚಾರಿಯನ್ನೇ ಮದುವೆಯಾಗಿ) ಎಂಬ ಮಸೂದೆಯನ್ನು ಟರ್ಕಿ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ.

ಈ ಮಸೂದೆ ಪ್ರಕಾರ ವ್ಯಕ್ತಿಯಿಂದ ಅತ್ಯಾಚಾರಕ್ಕೊಳಪಟ್ಟ ಸಂತ್ರಸ್ತೆ ಆತನನ್ನೇ ಮದುವೆಯಾಗಬೇಕು. ಅತ್ಯಾಚಾರಿ ಕೂಡ ಸಂತ್ರಸ್ತೆಯನ್ನು ಮದುವೆಯಾಗುವ ಮೂಲಕ ತನ್ನ ಪಾಪಕೃತ್ಯಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಬೇಕು.

ಯೋಗ್ಯರಲ್ಲ ನೀವು ಬದುಕಲು: ಫೆ.1ರಂದು ಹತ್ಯಾಚಾರಿಗಳಿಗೆ ಗಲ್ಲು!

ಇದೇ ಜನವರಿ ಅಂತ್ಯಕ್ಕೆ ಟರ್ಕಿ ಸಂಸತ್ತಿನಲ್ಲಿ ಈ ಮಸೂದೆ ಮಂಡನೆಗೆ ಸಿದ್ಧತೆ ನಡೆದಿದ್ದು, ಈ ಮಸೂದೆಗೆ ಮಹಿಳಾ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಈ ಮಸೂದೆ ಸಂತ್ರಸ್ತ ಮಹಿಳೆಯನ್ನು ಮಾನಸಿಕವಾಗಿ ಕುಗ್ಗಿಸಲಿದ್ದು, ಅತ್ಯಾಚಾರಿಗೆ ಕಠಿಣ ಶಿಕ್ಷೆಯೇ ನೀಡಬೇಕೆಂದು ಮಹಿಳಾ ಸಂಘಟನೆಗಳು ಆಗ್ರಹಿಸಿವೆ.

ಈ ಹಿಂದೆ 2016ರಲ್ಲೂ ಇಂತದ್ದೇ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತಾದರೂ, ಸೂಕ್ತ ಬೆಂಬಲ ಸಿಗದೇ ಮಸೂದೆಯನ್ನು ಹಿಂಪಡೆಯಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios