Asianet Suvarna News Asianet Suvarna News

ಬಾಲ್ಟಿಮೋರ್ ದುರಂತ, ಭಾರತೀಯ ಸಿಬ್ಬಂದಿ ಗುರಿಯಾಗಿಸಿ ಜನಾಂಗೀಯ ನಿಂದನೆ ಕಾರ್ಟೂನ್!

ಬಾಲ್ಟಿಮೋರ್ ಬಳಿಯ ಸೇತುವಗೆ ಹಡಗು ಡಿಕ್ಕಿಯಾಗಿ ಸೇತುವೆ ಕುಸಿದ ಘಟನೆ ಇತ್ತೀಚೆಗೆ ನಡೆದಿದೆ. ಹಡಗಿನ ಸಿಬ್ಬಂದಿಗಳು ಸೇಫ್ ಆಗಿದ್ದರೆ, ಸೇತುವೆ ಕಾಮಾಗಾರಿಯಲ್ಲಿದ್ದ ಸಿಬ್ಬಂದಿಗಳು ಮೃತಪಟ್ಟಿದ್ದರು. ಆದರೆ ಈ ಘಟನೆ ಬಳಿಕ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಗಳ ಗುರಿಯಾಗಿಸಿ ಜನಾಂಗೀಯ ನಿಂದನೆಯ ಕಾರ್ಟೂನ್ ಪ್ರಕಟಿಸಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ.
 

Racist cartoon published against Indian crew on ship after baltimore bridge collapse ckm
Author
First Published Mar 29, 2024, 6:28 PM IST

ಬಾಲ್ಟಿಮೋರ್(ಮಾ.29) ಭಾರತೀಯ ಸಿಬ್ಬಂದಿಗಳಿದ್ದ ಸರಕು ಹಡಗು ಅಮೆರಿಕದ ಬಾಲ್ಟಿಮೋರ್ ಬಳಿಯ ನದಿಯಗೆ ಕಟ್ಟಲಾಗಿದ್ದ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ನಡೆದಿದೆ. ಈ ದುರಂತದಲ್ಲಿ ಸಂಪೂರ್ಣ ಸೇತುವೆ ಕುಸಿದು ಬಿದ್ದಿತ್ತು. ಕೆಲ ಭಾಗ ಹಡಗಿನ ಮೇಲೆ ಬಿದ್ದರೆ, ಉಳಿದ ಭಾಗ ನದಿಗೆ ಕುಸಿದಿತ್ತು. ಈ ಹಡಗಿನಲ್ಲಿ 22 ಭಾರತೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದರು. ಈ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿತ್ತು. ಆದರೆ ಸೇತುವೆ ಕಾಮಗಾರಿಯಲ್ಲಿದ್ದ 6 ಸಿಬ್ಬಂದಿಗಳು ಮೃತಪಟ್ಟಿದ್ದರು. ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಆದರೆ ಇದರ ನಡುವೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಗಳ ಗುರಿಯಾಗಿಸಿ ಜನಾಂಗೀಯ ನಿಂದನೆ ಕಾರ್ಟೂನ್ ಪ್ರಕಟಿಸಲಾಗಿದೆ.

ಹಡಗು ದುರಂತದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾರತೀಯ ಸಿಬ್ಬಂದಿಗಳನ್ನು ಶ್ಲಾಘಿಸಿದ್ದರು. ಮೇರಿಲ್ಯಾಂಡ್ ಗವರ್ನರ್ ಕೂಡ ಭಾರತೀಯ ಸಿಬ್ಬಂದಿಗಳನ್ನು ಶ್ಲಾಘಿಸಿದ್ದರು. ಆದರೆ ಅಮೆರಿಕದ ವೆಬ್ ಕಾಮಿಕ್ ಮಾಧ್ಯಮ ಕಾರ್ಟೂನ್ ಪ್ರಕಟಿಸಿದೆ. ಭಾರತೀಯ ಸಿಬ್ಬಂದಿಗಳನ್ನು ಗುರಿಯಾಸಿಗಿ ಈ ಕಾರ್ಟೂನ್ ಪ್ರಕಟಿಸಲಾಗಿದೆ. ಜನಾಂಗೀಯ ನಿಂದನೆ ಮಾಡಿರುವ ಈ ಕಾರ್ಟೂನ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿದ್ದರು 22 ಭಾರತೀಯ ಸಿಬ್ಬಂದಿ!

ಅಪಘಾತಕ್ಕೂ ಮನ್ನ ದಾಲಿ ಸರಕು ಹಡಗಿನೊಳಗಿನ ದೃಶ್ಯ ಎಂದು ಈ ಕಾರ್ಟೂನ್ ಪ್ರಕಟಿಸಲಾಗಿದೆ. ಈ ಕಾರ್ಟೂನ್‌ಗೆ ಧ್ವನಿ ನೀಡಲಾಗಿದೆ. ಭಾರತೀಯ ಇಂಗ್ಲೀಷ್ ಶೈಲಿಯಲ್ಲಿ ಆತಂಕದ ಸಂಭಾಷಣೆಯನ್ನೂ ನೀಡಲಾಗಿದೆ. ಈ ಮೂಲಕ ಭಾರತೀಯರನ್ನು ಜನಾಂಗೀಯ ನಿಂದನೆಗೆ ಗುರಿಯಾಗಿಸಲಾಗಿದೆ. ಈ ಕಾರ್ಟೂನ್ ಭಾರತೀಯರನ್ನು ಜನಾಂಗೀಯ ನಿಂದನೆ ಗುರಿಯಾಗಿಸಿದ್ದು ಮಾತ್ರವಲ್ಲ, ಹಡಗಿನ ಸಿಬ್ಬಂದಿಗಳ ಕುರಿತು ದುರ್ಬಲ ಚಿತ್ರಣ ನೀಡುತ್ತಿದೆ.

 

 

ಅಮರಿಕದ ಮೂಲದ ಇಬ್ಬರು ಈ ಹಡಗಿನ ಪೈಲೆಟ್ ಆಗಿದ್ದರು. ಇತ್ತ ಹಡಗಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ಭಾರತೀಯ ಸಿಬ್ಬಂದಿಗಳು ಅಲರಾಂ ಮೊಳಗಿಸಿದ್ದರು. ಇದರಿಂದ ಸಾವು ನೋವಿನ ಪ್ರಮಾಣ ಕಡಿಮೆಯಾಗಿದೆ ಎಂದು ಮೇರಿಲ್ಯಾಂಡ್ ಮೇಯರ್ ಹೇಳಿದ್ದರು. ಈ ಕಾರ್ಟೂನ್ ವಿರುದ್ದ ಭಾರತೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೆ ಸಮುದ್ರಕ್ಕೆ ಧಮುಕಲು ಸಿದ್ಧವಾದ ಟೈಟಾನಿಕ್‌!

ಅಮೆರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿರುವ ಕರಾವಳಿ ನಗರ ಬಾಲ್ಟಿಮೋರ್‌ನ ಪ್ಯಾಟಾಪ್ಸ್ಕೋ ನದಿಯ ಮೇಲೆ ಕಟ್ಟಲಾಗಿದ್ದ ಸೇತುವೆಗೆ ಸಿಂಗಾಪೂರ ಮೂಲದ ದಾಲಿ ಸರಕು ಹಡಗು ಡಿಕ್ಕಿ ಹೊಡೆದಿತ್ತು. ಫ್ರಾನ್ಸಿಸ್‌ ಸ್ಕಾಟ್‌ ಕೀ ಬ್ರಿಡ್ಜ್‌ 1977ರಿಂದ ಸಂಚಾರಕ್ಕೆ ಮುಕ್ತವಾಗಿದ್ದು, ಬಂದರಿಗೆ ಪ್ರಮುಖ ಸಂಪರ್ಕ ಸೇತುವಾಗಿ ಬಳಕೆಯಾಗುತ್ತಿತ್ತು. ಹಡಗು ಡಿಕ್ಕಿ ಹೊಡೆದ ಕೂಡಲೇ ಬೆಂಕಿ ಹೊತ್ತಿಕೊಂಡು ನೀರಿನಲ್ಲಿ ಮುಳುಗಿದೆ. ಡಾಲಿ ಹಡಗು ಅಮೆರಿಕದ ಬಾಲ್ಟಿಮೋರ್‌ನಿಂದ ಶ್ರೀಲಂಕಾದ ಕೊಲಂಬೋಗೆ ತನ್ನ ಪಯಣ ಆರಂಭಿಸಿತ್ತು. ಆಗ ಬಾಲ್ಟಿಮೋರ್‌ನಲ್ಲಿ ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದರೂ ಹಡಗಿನಲ್ಲಿದ್ದ ಇಬ್ಬರು ಪೈಲಟ್‌ ಸೇರಿ ಎಲ್ಲ 22 ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.


 

Follow Us:
Download App:
  • android
  • ios