Asianet Suvarna News Asianet Suvarna News

ಜೆಸಿಬಿ ಮೂಲಕ ರಾತ್ರೋರಾತ್ರಿ ದೈವಸ್ಥಾನ ಧ್ವಂಸ: ನೂತನವಾಗಿ ನಿರ್ಮಿಸುತ್ತಿದ್ದ ಭಂಡಾರಮನೆ ನಾಶ

ದೈವಸ್ಥಾನದ ಆಡಳಿತ ಮಂಡಳಿ ವಿವಾದದ ಸಂಘರ್ಷದಲ್ಲಿ ಕಟ್ಟಡ ಧ್ವಂಸ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಕೊಂಡಾಣ ದೈವಸ್ಥಾನ ಸೇರಿದೆ.

ಮಂಗಳೂರು: ತುಳುನಾಡಿನ ಪುರಾಣ ಪ್ರಸಿದ್ಧ ದೈವಸ್ಥಾನವನ್ನು(Daivasthana) ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸ ಮಾಡಿರುವ ಶಂಕೆ ವ್ಯಕ್ತವಾಗಿದೆ. ಉಳ್ಳಾಲದ(Ullala) ಕೊಂಡಾಣ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಜೆಸಿಬಿ ಮೂಲಕ ರಾತ್ರೋರಾತ್ರಿ ದೈವಸ್ಥಾನ ಧ್ವಂಸ ಮಾಡಲಾಗಿದೆ. ದೈವಸ್ಥಾನ ಧ್ವಂಸ ಮಾಡಿರುವುದಕ್ಕೆ ಭಕ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ವೈದ್ಯನಾಥ ದೇವಸ್ಥಾನಕ್ಕೆ ಸೇರಿದ ಕಟ್ಟಡವನ್ನು ಧ್ವಂಸ ಮಾಡಲಾಗಿದೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು(Police)  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ದೈವಸ್ಥಾನದ ಭಕ್ತರ ಜಮಾವಣೆಗೊಂಡಿದ್ದು, ಘಟನಾ ಸ್ಥಳದಲ್ಲಿ ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ಬಾಂಬ್‌ ಸ್ಫೋಟ ಪ್ರಕರಣ ಭೇದಿಸುತ್ತೇವೆ, ಆರೋಪಿಯನ್ನು ಅರೆಸ್ಟ್‌ ಮಾಡ್ತೇವೆ: ಗೃಹ ಸಚಿವ ಪರಮೇಶ್ವರ್‌

Video Top Stories