Asianet Suvarna News Asianet Suvarna News

ಓವೈಸಿ ವಿರುದ್ಧ ಮಹಿಳಾಸ್ತ್ರ..ಯಾರು ಆ ಬೆಂಕಿ ಚೆಂಡು..? ಓವೈಸಿ ಭದ್ರಕೋಟೆ ಭೇದಿಸ್ತಾರಾ ಆ ಬೆಂಕಿಯಂಥಾ ನಾಯಕಿ..?

ಮಹಾಭಾರತ ಮಹಾಯುದ್ಧಕ್ಕೆ ಮೊಳಗಿತು ಮೋದಿ ಶಂಖನಾದ..!
ಮದಗಜ ಮೋದಿ..ಶಾನ್‌ದಾರ್ ಶಾ.. ಅತಿರಥ.. ಮಹಾರಥಿ..!
ಕುರುಕ್ಷೇತ್ರ ರಣಕಣಕ್ಕೆ ಹೊರಟು ನಿಂತ ಕೇಸರಿ ಯಜ್ಞಾಶ್ವಗಳು..!

ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ 400ರ ಮಹಾಯಜ್ಞದ ಮಹಾಶಪಥ. ಲೋಕಸಭೆಯ(Loksabha) ಒಡ್ಡೋಲಗದಲ್ಲೇ ನಿಂತು ಮೋದಿ ಮಾಡಿರೋ ಮಹಾಪ್ರತಿಜ್ಞೆ. ಇಲ್ಲಿಯವರೆಗಿನದ್ದು ಒಂದು ಲೆಕ್ಕ, ಮುಂದಿನದ್ದು ಮತ್ತೊಂದು ಲೆಕ್ಕ. ಹೀಗಂತ ಶಪಥ ಮಾಡಿ ಮಹಾಭಾರತ ಯುದ್ಧಕ್ಕೆ ಮೋದಿ ರಣಕಹಳೆ ಮೊಳಗಿಸಿ ಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲ ದಿನಗಳಲ್ಲಿ ಮುಹೂರ್ತ ಫಿಕ್ಸ್ ಆಗಲಿದೆ. ಚುನಾವಣೆ ಘೋಷಣೆಗೆ ಮೊದಲೇ ಮೋದಿ(Narendra Modi) ಪಾಳೆಯದ ಯಜ್ಞಾಶ್ವಗಳು ಅಶ್ವಮೇಧಕ್ಕೆ ಹೊರಟು ನಿಂತಿವೆ. ಲೋಕಸಂಗ್ರಾಮದಲ್ಲಿ ಸೆಣಸಾಡಲಿರೋ 195 ದಂಡನಾಯಕರ ಹೆಸರನ್ನು ಬಿಜೆಪಿ ಪ್ರಕಟಿಸಿದೆ. 543 ಲೋಕಸಭಾ ಸ್ಥಾನಗಳ ಪೈಕಿ, 195 ಕ್ಷೇತ್ರಗಳಿಗೆ ಬಿಜೆಪಿ(BJP) ತನ್ನ ಅಭ್ಯರ್ಥಿಗಳನ್ನು ಘೋಷಿಸಿಯೇ ಬಿಟ್ಟಿದೆ. ಕೇಸರಿ ಪಾಳೆಯದ ಮೊದಲ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹಿತ ಅತಿರಥ ಮಹಾರಥಿಗಳೇ ಸ್ಥಾನ ಪಡೆದಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಹ್ಯಾಟ್ರಿಕ್ ಭವಿಷ್ಯವನ್ನು ನಿರ್ಧರಿಸಲಿರೋ ಚುನಾವಣೆ. ಈಗಾಗ್ಲೇ ಎರಡು ಬಾರಿ ಪ್ರಧಾನಿ ಪಟ್ಟಕ್ಕೇರಿರೋ ಮೋದಿ, ಸತತ 3ನೇ ಬಾರಿ ದೆಹಲಿ ಗದ್ದುಗೆಯ ಮೇಲೆ ಕಣ್ಣಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ: Somanna meets Yediyurappa: ತುಮಕೂರು ‘ಲೋಕ’ ಟಿಕೆಟ್ ಮೇಲೆ ಸೋಮಣ್ಣ ಕಣ್ಣು: ಮುನಿಸು ಮರೆತು ಬಿಎಸ್‌ವೈ ಭೇಟಿ !