Asianet Suvarna News Asianet Suvarna News

ಕಿಡ್ನ್ಯಾಪ್‌ ಕೇಸ್‌ನಲ್ಲಿ ರೇವಣ್ಣ ಅರೆಸ್ಟ್‌: ಯಾವ ರೀತಿ ಇರುತ್ತೆ ಕಾನೂನು ಹೋರಾಟ? ಮುಂದಿನ ನಡೆಯೇನು?

ನಾಳೆ ರೆಗ್ಯೂಲರ್ ಜಾಮೀನಿಗೆ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಬಹುದು. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಕೆ.ಆರ್‌.ನಗರದ ಮಹಿಳೆ ಕಿಡ್ನ್ಯಾಪ್‌ ಕೇಸ್‌ನಲ್ಲಿ(HD Revanna Rape Case) ಮಾಜಿ ಸಚಿವ ಹೆಚ್‌.ಡಿ. ರೇವಣ್ಣ(HD Revanna) ಬಂಧನವಾಗಿದೆ. ಅಲ್ಲದೇ ನಿನ್ನೆಯೇ ಅವರ ಮಧ್ಯಂತರ ಜಾಮೀನು(Bail) ಅರ್ಜಿ ಸಹ ವಜಾ ಆಗಿದೆ. ನಾಳೆ ರೆಗ್ಯೂಲರ್ ಜಾಮೀನಿಗೆ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಬಹುದು. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಸಂತ್ರಸ್ತೆ ಪತ್ತೆಯಾಗಿದ್ದು, ರೇವಣ್ಣಗೆ ಸಂಬಂಧವಿಲ್ಲ ಎಂದು ವಾದ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಜಾಮೀನು ರದ್ದಾದ್ರೆ, ಹೈಕೋರ್ಟ್‌ಗೆ ಹೋಗುವ ಸಾಧ್ಯತೆ ಇದೆ. ಸಂತ್ರಸ್ತೆ ಹೇಳಿಕೆ ಮೇಲೆ ರೇವಣ್ಣ ಜಾಮೀನು ಭವಿಷ್ಯ ನಿರ್ಧಾರವಾಗಿದೆ.

ಇದನ್ನೂ ವೀಕ್ಷಿಸಿ:  HD Revanna: ರಾತ್ರಿಯಿಡಿ ಎಸ್‌ಐಟಿ ಕಚೇರಿಯಲ್ಲಿ ಕಳೆದ ರೇವಣ್ಣ: ಸಿಐಡಿ ಕಚೇರಿಗೆ ಎಂಟ್ರಿ ಆಗುತ್ತಿದ್ದಂತೆ ಕಣ್ಣೀರು !

Video Top Stories