Asianet Suvarna News Asianet Suvarna News

ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡುವಾಗ ಶೋಕಿಗಾಗಿ ಆಟಿಕೆ ಪಿಸ್ತೂಲ್ ತೋರಿಸಿದ ಯುವಕರು; ಲಾಠಿ ರುಚಿ ತೋರಿಸಿದ ಪೊಲೀಸರು

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮಾಡುವಾಗ ಶೋಕಿಗಾಗಿ ಆಟಿಕೆ ಪಿಸ್ತೂಲ್ ತೋರಿಸಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

Youngsters show toy pistol on social media for mourning then Kalaburagi police registered case sat
Author
First Published Mar 29, 2024, 4:56 PM IST

ಕಲಬುರಗಿ (ಮಾ.29): ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಂಚಿಕೊಳ್ಳುವ ಮುನ್ನ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ, ಪೊಲೀಸ್ ಠಾಣೆಯಲ್ಲಿ ಲಾಠಿ ರುಚಿ ಅನುಭವಿಸುವ ಅವಕಾಶವೂ ಕೂಡ ತಂತಾನೆ ಒದಗಿ ಬರುತ್ತದೆ. ಕಲಬುರಗಿಯಲ್ಲಿ ಆಟಿಕೆ ಪಿಸ್ತೂಲ್ ಹಿಡಿದು ವಿಡಿಯೋ ಮಾಡಿ ಪೇಚಿಗೆ ಸಿಲುಕಿದ ಯವಕರೇ ಇದಕ್ಕೆ ಒಂದು ತಾಜಾ ಉದಾಹರಣೆ ಆಗಿದ್ದಾರೆ...

ಹೌದು, ಆಟಿಕೆ ಪಿಸ್ತೂಲ್ ಕೈಯಲ್ಲಿ ಹಿಡಿದು ಫೋಸ್ ಕೊಟ್ಟಿರಾ ಹುಷಾರ್..! ಹೀಗೆ ನಕಲಿ ಪಿಸ್ತೂಲ್ ಕೈಯಲ್ಲಿ ಹಿಡಿದು ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಯುವಕರಿಬ್ಬರ ಮೇಲೆ ಕೇಸ್ ದಾಖಲಿಸಲಾಗಿದೆ. ಪಿಸ್ತೂಲ್ ಮಾದರಿಯ ಆಟಿಗೆ ಗನ್ ಹಿಡಿದು ಸಾಮಾಜಿಕ ಜಾಲತಣದಲ್ಲಿ ವಿಡಿಯೋ ಹಾಗೂ ಪೋಟೋ ಹರಿಬಿಟ್ಟವರ ಮೇಲೆ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸಿದ ಆರೋಪದ ಮೇಲೆ ದೂರು ದಾಖಲು ಮಾಡಿ ವಶಕ್ಕೆ ಪಡೆಯಲಾಗಿದೆ.

ಲಂಕೆಗೆ ಹಾರಿದ ಡಾ.ಬ್ರೋ: ವಿಶ್ವದ ಎಂಟನೇ ಅದ್ಭುತ ಎನಿಸಿರುವ ರಾವಣನ ಚಿನ್ನದ ಅರಮನೆ ದರುಶನ...

ಇನ್ನು ಈ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನಡೆದಿದೆ. ಸೇಡಂ ಪಟ್ಟಣದ ಇಂದಿರಾನಗರದ ನಿವಾಸಿಗಳಾದ ಮಹೇಶ ಹಾಗೂ ಬಸವರಾಜ ಎನ್ನುವವರು ಈ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಪೊಲೀಸರು ಅವರ ವಿರುದ್ದ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದರು.  ನಂತರ, ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಹರಿಬಿಡುವ ಮೂಲಕ ಅಶಾಂತಿ ಸೃಷ್ಠಿಸುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ವ್ಯಾಪ್ತಿಯನ್ನು ನೀವು ಮೀರದಂತೆ ನಡೆದುಕೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ಪೊಲೀಸರು ಯುವಕರಿಬ್ಬರಿಗೆ ಖಡಕ್ ವಾರ್ನಿಂಗ್‌ ಮಾಡಿದ್ದಾರೆ.

ಬಂದೂಕು ತೋರಿಸಿ ವಿಡಿಯೋ ಮಾಡುವಾಗ 'ನನ್ನ ವಾರ್ ಭಾರಿ ಡೇಂಜರ್ ಇದೆ.. ನನ್ನ ನೆಕ್ಸ್ಟ್ ಟಾರ್ಗೆಟ್‌ ನಿಂದು ಇದೆಲೇ...' ಎಂದು ಡೈಲಾಗ್ ಹೊಡೆದಿದ್ದಾನೆ. ಇನ್ನು ಈ ವಿಡಿಯೋವನ್ನು ಬೇರೊಬ್ಬರು ಹಂಚಿಕೊಂಡು ಇವನನ್ನು ಹಿಡಿದು ಜೈಲಿಗೆ ಹಾಕಿ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಕೇಸ್ ದಾಖಲಿಸಿಕೊಂಡ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕೈಬಿಟ್ಟಿದ್ದಾರೆ. 

ದಾರಿ ತಪ್ಪಿದ ಹೆಂಡತಿ ಮಾಡಿದ್ದೇನು..!ಮಗನ ಸಾವಿಗೆ ರಸ್ತೆಯಲ್ಲಿ ನಿಂತು ನ್ಯಾಯ ಕೇಳುತ್ತಿರುವ ತಾಯಿ..!

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಾಂಬ್ ತಯಾರಿಸಿದ್ದವನ ಬಂಧನ: ಬೆಂಗಳೂರು (ಮಾ.29): ರಾಜ್ಯ ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸುವಂತೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ ಆರೋಪಿಗಳ ಪೈಕಿ, ಬಾಂಬ್ ತಯಾರಿಕೆ ಮಾಡಿದ ಆರೋಪಿ ಮುಜಾಮಿಲ್ ಶರೀಫ್‌ನನ್ನು 7 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿದೆ. ರಾಮೇಶ್ವರಂ ಕೆಫೆಗೆ ಮಾ.1ರಂದು ಬಾಂಬ್‌ ಇಟ್ಟು ಸ್ಫೋಟ ಮಾಡಲಾಗಿತ್ತು. ಇದರಿಂದ ಇಡೀ ಬೆಂಗಳೂರು ನಗರವೇ ಬೆಚ್ಚಿ ಬಿದ್ದಿತ್ತು. ಆದರೆ, ಈ ಪ್ರಕರಣವನ್ನು ರಾಜ್ಯ ಸರ್ಕಾರದಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸಲಾಗಿದೆ. ಎನ್‌ಐಎನಿಂದ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಾಂಬ್ ತಯಾರಿಸಿದ ವ್ಯಕ್ತಿಯನ್ನು ಬಂಧಿಸಿ ಶುಕ್ರವಾರ ಬೆಳಗ್ಗೆ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈತನನ್ನು ಇನ್ನಷ್ಟು ವಿಚಾರಣೆ ಮಾಡುವುದು ಅಗತ್ಯವಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ 7 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಿಲಾಗಿದೆ.

Follow Us:
Download App:
  • android
  • ios