ನಾನು ನಂದಿನಿ, ಬ್ಲ್ಯಾಕ್ಮೇಲ್ ಮಾಡ್ತೀನಿ... ಎನ್ನುತ್ತಲೇ ಭಾಗ್ಯಳ ಭರ್ಜರಿ ಎಂಟ್ರಿ! 'ಕಳ್ಳಿ' ಕನ್ನಿಕಾ ಮಿಸ್ ಸುಸ್ತೋ ಸುಸ್ತು..
ಕನ್ನಿಕಾ ಮಿಸ್ ಕಳ್ಳತನ ಹಿಡಿದು ಹಾಕಿರೋ ಭಾಗ್ಯ, ಹೀರೋ ರೀತಿ ಭರ್ಜರಿ ಎಂಟ್ರಿ ಕೊಟ್ಟಿದ್ದಾಳೆ. ಕನ್ನಿಕಾ ಸುಸ್ತಾಗಿದ್ದಾಳೆ. ಮುಂದೇನು?
ಭಾಗ್ಯ ಮತ್ತು ಮಗಳು ತನ್ವಿ ಇಬ್ಬರ ಡೆಸ್ಕ್, ಡಸ್ಟ್ಬಿನ್ ಮೇಲೆ ಗಣಿತದ ಫಾರ್ಮುಲಾ ಬರೆಯಲಾಗಿದೆ. ಇದನ್ನು ನೋಡಿದ ಟೀಚರ್ ಇಬ್ಬರನ್ನೂ ಪರೀಕ್ಷೆಯಿಂದ ಡಿಬಾರ್ ಮಾಡಿದ್ದಾರೆ. ತಾವು ಕಾಪಿ ಬರೆದಿಲ್ಲ, ತಾವು ಹೀಗೆಲ್ಲಾ ಮಾಡುವುದಿಲ್ಲ ಎಂದು ಹೇಳಿದರೂ ಕೇಳದೇ ಇಬ್ಬರನ್ನೂ ಡಿಬಾರ್ ಮಾಡಲಾಗಿದೆ. ಈ ಬಾರಿ ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕು ಎಂದುಕೊಂಡ ತನ್ವಿ ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾಳೆ. ಇನ್ನು ಭಾಗ್ಯಳ ಮಾತಂತೂ ಹೇಳುವುದೇ ಬೇಡ... ಅವಳು ಚೆನ್ನಾಗಿ ತಯಾರಿ ನಡೆಸಿದ್ದಾಳೆ. ಆದರೆ ಕಾಪಿ ಬರೆದು ಇಟ್ಟಿದ್ದರಿಂದ ಇಬ್ಬರನ್ನೂ ಡಿಬಾರ್ ಮಾಡಲಾಗಿದ್ದು, ಪರೀಕ್ಷೆ ಬರೆಯುವುದರಿಂದ ತಡೆ ಹಿಡಿಯಲಾಗಿದೆ. ಇದಕ್ಕಾಗಿ ಭಾಗ್ಯ ಕನ್ನಿಕಾ ಮೇಲೆ ಕಿಡಿ ಕಾರುತ್ತಿದ್ದಾಳೆ. ಆದರೆ ಭಾಗ್ಯ ಏನೇ ಆರೋಪ ಮಾಡಿದರೂ ಇದ್ಯಾವುದಕ್ಕೂ ಕನ್ನಿಕಾ ಜಗ್ಗುತ್ತಿಲ್ಲ. ನಾನೇ ಮಾಡಿಸಿದ್ದು ಎಂದು ಹೇಗೆ ಹೇಳುತ್ತಿಯಾ ಎಂದು ಕೇಳಿದ್ದಾಳೆ.
ಅದಕ್ಕೆ ಭಾಗ್ಯ ಡೆಸ್ಕ್ ಮೇಲೆ ಕಾಪಿ ಬರೆದಿರುವ ಹುಡುಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆತ ಬಾಯಿ ಬಿಟ್ಟರೆ ನಿನ್ನ ಬಂಡವಾಳ ಬಯಲಾಗುತ್ತದೆ ಎಂದಿದ್ದಾಳೆ. ಆದರೆ ಆ ಹುಡುಗ ಬಾಯಿಯೇ ಬಿಡದಿದ್ದರೆ ಎಂದು ಕನ್ನಿಕಾ ಕೇಳಿದ್ದಾಳೆ. ಅಲ್ಲಿಗೆ ಅವಳು ಏನೋ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತದೆ. ಅಷ್ಟೊತ್ತಿಗಾಗಲೇ ಭಾಗ್ಯಳಿಗೆ ಫೋನ್ ಬರುತ್ತದೆ. ಕನ್ನಿಕಾ ಕುಹಕದಿಂದ ನಗುತ್ತಾಳೆ. ಅಷ್ಟಕ್ಕೂ ಆ ಹುಡುಗ ಕನ್ನಿಕಾ ಹೆಸರು ಹೇಳಿರುವುದೇ ಇಲ್ಲ. ಪೊಲೀಸರು ಭಾಗ್ಯಳ ಬಳಿ, ನೀವು ದೂರು ಕೊಟ್ಟ ವ್ಯಕ್ತಿಯನ್ನು ನಾವು ವಿಚಾರಿಸಿದೆವು. ಆದರೆ ಆತ ಬಾಯಿ ಬಿಡುತ್ತಿಲ್ಲ. ನನಗೇನೂ ಗೊತ್ತಿಲ್ಲ ಎಂದೇ ಹೇಳುತ್ತಿದ್ದಾನೆ. ನಿಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಹೀಗೆ ಸುಳ್ಳು ಹೇಳುತ್ತಿಲ್ಲ ತಾನೇ ಎಂದು ಭಾಗ್ಯಳನ್ನೇ ಪ್ರಶ್ನಿಸುತ್ತಾರೆ. ಆಗ ಭಾಗ್ಯ, ಕನ್ನಿಕಾ, ಆ ವ್ಯಕ್ತಿಯ ಬಳಿ ಮಾತನಾಡಿದ್ದನ್ನು ನಾನೇ ಕೇಳಿಸಿಕೊಂಡಿದ್ದೇನೆ ಎಂದರೂ ಸಾಕ್ಷಿಯಿಲ್ಲದೇ ಆ್ಯಕ್ಷನ್ ಅಸಾಧ್ಯ ಎಂದುಬಿಡುತ್ತಾರೆ ಇನ್ಸ್‌ಪೆಕ್ಟರ್.
ಅಳುಮುಂಜಿಯಿಂದ ಸಿಡಿದೇಳುವವರೆಗೆ... ಬದಲಾಗ್ತಿವೆ ಇಂದಿನ ಧಾರಾವಾಹಿಗಳ ಕಾನ್ಸೆಪ್ಟ್...
ಭಾಗ್ಯಾಗೆ ಏನು ಮಾಡುವುದು ತೋಚುವುದಿಲ್ಲ. ನನ್ನ ತಪ್ಪು ಯಾರಿಗೂ ತಿಳಿಯುವುದಿಲ್ಲ ಎಂಬ ಅಹಂಕಾರದಿಂದ ಕನ್ನಿಕಾ ಭಾಗ್ಯಾಳನ್ನು ಹೊರಗೆ ತಳ್ಳುತ್ತಾಳೆ. ಈ ವರ್ಷ ನಾನು ನನ್ನ ಮಗಳು ಪರೀಕ್ಷೆ ಬರೆಯುತ್ತೇವೆ. ಹಾಗೇ ನೀನು ಎಂದಿಗೂ ಪಾಸ್ ಆಗದ ಪರೀಕ್ಷೆ ಬರೆಸುತ್ತೇನೆ ಎಂದು ಭಾಗ್ಯಾ, ಕನ್ನಿಕಾಗೆ ಸವಾಲು ಹಾಕುತ್ತಾಳೆ. ಅದೇ ವೇಳೆ ಕನ್ನಿಕಾ ಮಿಸ್ ಪಾರ್ಟಿಯಲ್ಲಿ ನೆಕ್ಲೆಸ್ ಕದಿಯುವ ವಿಡಿಯೋ ಒಂದನ್ನು ಭಾಗ್ಯ ರಿಕಾರ್ಡ್ ಮಾಡಿಕೊಳ್ಳುತ್ತಾಳೆ. ಬೇರೆ ನಂಬರ್ನಿಂದ ಅದು ಕನ್ನಿಕಾ ಮೊಬೈಲ್ಗೆ ಹೋಗುತ್ತದೆ. ಅದನ್ನು ನೋಡಿ ಕನ್ನಿಕಾ ಶಾಕ್ ಆಗುತ್ತಾಳೆ. ಅಷ್ಟೊತ್ತಿಗೆ ಅವಳಿಗೆ ಕಾಲ್ ಬರುತ್ತದೆ. ನಾನು ಹೇಳಿದ್ದಲ್ಲಿಗೆ ಬರುವಂತೆ ಅದರಲ್ಲಿ ಹೇಳಿ ಲೊಕೇಷನ್ ಕಳಿಸಲಾಗುತ್ತದೆ.
ಆ ಲೊಕೇಶನ್ಗೆ ಕನ್ನಿಕಾ ಹೋದಾಗ, ನೀನು ಯಾರು ಎಂದು ಗದರುತ್ತಾಳೆ ಕನ್ನಿಕಾ. ಅಲ್ಲಿಂದ ನಾನು ನಂದಿನಿ... ಬೆಂಗ್ಳೂರ್ಗೆ ಬಂದೀನಿ... ನಿನಗೆ ಬ್ಲ್ಯಾಕ್ಮೇಲ್ ಮಾಡ್ತೀನಿ... ಎನ್ನುವ ದನಿ ಬರುತ್ತದೆ. ಇದರ ಹಿಂದೆಯೇ ಸಿನಿಮೀಯ ರೀತಿಯಲ್ಲಿ ಭಾಗ್ಯಳ ಎಂಟ್ರಿ ಆಗುತ್ತದೆ. ಕತ್ತಲ ಕೋಣೆಯಲ್ಲಿ ಭಾಗ್ಯ ಹೀರೋ ರೀತಿ ಭರ್ಜರಿ ಎಂಟ್ರಿ ಕೊಡುತ್ತಾಳೆ. ಇದನ್ನು ನೋಡಿ ಕನ್ನಿಕಾ ಮಿಸ್ ಸುಸ್ತು ಹೊಡೆಯುತ್ತಾರೆ. ಮುಂದೇನಾಗುತ್ತದೆ ಎನ್ನುವುದು ಈಗಿರುವ ಕುತೂಹಲ. ಆದರೆ ಇಲ್ಲಿಯವರೆಗೆ ಸುಮ್ಮನಿದ್ದ ಭಾಗ್ಯ ಸಿಡಿದೆದ್ದಿರುವುದನ್ನು ನೋಡಿರುವ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಭಾಗ್ಯಳಿಗೆ ಭೇಷ್ ಭೇಷ್ ಎನ್ನುತ್ತಿದ್ದಾರೆ. ಇದೀಗ ಮಗಳು ತನ್ವಿಗೆ ಪರೀಕ್ಷೆ ಬರೆಯುವಂತೆ ಮಾಡುವ ಜವಾಬ್ದಾರಿ ಭಾಗ್ಯ ಮೇಲಿದೆ. ಆಕೆ ಸಕ್ಸಸ್ ಆಗ್ತಾಳಾ? ಮಗಳು ಕಾಪಿ ಮಾಡಲು ಭಾಗ್ಯಳೇ ಕಾರಣ ಎಂದು ತಾಂಡವ್ ಕೂಡ ಕಿಡಿ ಕಾರಿದ್ದಾನೆ. ತನ್ವಿ ಕಾಪಿ ಮಾಡಿದ್ದಾಳೆ ಎಂದು ನಂಬಿರೋ ಈತ, ಇದಕ್ಕೆಲ್ಲಾ ಭಾಗ್ಯಳೇ ಕಾರಣ ಎಂದಿದ್ದಾನೆ. ಅಲ್ಲಿಂದ ಹೊರಡಲು ರೆಡಿಯಾಗುವಷ್ಟರಲ್ಲಿ ಶ್ರೇಷ್ಠಾ ಅವನನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆದರೆ ಮಗಳು ಕಷ್ಟದಲ್ಲಿ ಇರುವಾಗ ಅವನು ಹೋಗದಿದ್ದರೆ ಹೇಗೆ? ಪರೀಕ್ಷಾ ಕೊಠಡಿ ಸಮೀಪ ಬಂದಿದ್ದಾನೆ. ಅದಾಗಲೇ ಅಮ್ಮ-ಮಗಳನ್ನು ಪರೀಕ್ಷಾ ಕೊಠಡಿಯಿಂದ ಹೊರಕ್ಕೆ ಹಾಕಲಾಗಿತ್ತು. ಅಪ್ಪನನ್ನು ನೋಡಿ ತನ್ವಿ ಕಣ್ಣೀರು ಹಾಕಿದ್ದಾಳೆ. ನಾನು ಕಾಪಿ ಮಾಡಲಿಲ್ಲ. ಇವೆಲ್ಲಾ ಹೇಗೆ ಆಯಿತು ಎಂದು ತಿಳಿದಿಲ್ಲ ಎಂದಿದ್ದಾಳೆ. ಆದರೆ ಆಗಲೂ ಪತ್ನಿಯ ಮೇಲೆ ಕಿಡಿ ಕಾರಿರುವ ತಾಂಡವ್, ಭಾಗ್ಯಳನ್ನು ಚೆನ್ನಾಗಿ ಬೈದಿದ್ದಾನೆ. ಹೇಗಾದರೂ ಮಾಡಿ ಮಗಳಿಗೆ ಪರೀಕ್ಷೆ ಬರೆಸಲೇಬೇಕು ಎನ್ನುವ ಪಣ ತೊಟ್ಟಿದ್ದಾಳೆ ಭಾಗ್ಯ. ಮುಂದೇನಾಗುತ್ತದೆ ಎಂದು ನೋಡಬೇಕಿದೆ.
ನಾನು ಮಹಾನಟಿಯಾಗಿದ್ದು ಹೇಗೆ? ಸೀರಿಯಲ್ ನಾಯಕಿಯರು ಏನೆಲ್ಲಾ ಹೇಳಿದ್ರು ಕೇಳಿ...