Asianet Suvarna News Asianet Suvarna News

ಇಬ್ಬರು ಪ್ಯಾರಾ ಅಥ್ಲೀಟ್‌ಗಳು ಆಫ್ಘನ್‌ನಿಂದ ಸ್ಥಳಾಂತರ

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದ ಆಫ್ಘಾನ್ ಅಥ್ಲೀಟ್‌ಗಳು

* ಆಫ್ಘನ್‌ನಲ್ಲಿ ಸಿಲುಕಿದ್ದ ಇಬ್ಬರು ಅಥ್ಲೀಟ್‌ಗಳನ್ನು ಸುರಕ್ಷಿತವಾಗಿ ಸ್ಥಳಾಂತರ

* ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲೀಬಾನಿಗಳು

Afghanistan Crisis 2 Paralympians safely evacuated says International Paralympic Committee kvn
Author
Tokyo, First Published Aug 27, 2021, 5:16 PM IST

ಟೋಕಿಯೋ(ಆ.27): ಅಫ್ಘಾನಿಸ್ತಾನದಲ್ಲಿ ಆಡಳಿತ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಲ್ಲಿನ ಇಬ್ಬರು ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಿಂದ ಈಗಾಗಲೇ ಹೊರಗುಳಿದಿದ್ದಾರೆ. ಆದರೆ ಅವರನ್ನು ಸುರಕ್ಷಿತವಾಗಿ ಆಫ್ಘನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಐಪಿಸಿ) ತಿಳಿಸಿದೆ. 

ಅಫ್ಘಾನ್‌ನ ಇಬ್ಬರು ಟೆಕ್ವಾಂಡೋ ಅಥ್ಲೀಟ್‌ಗಳಾದ ಝಾಕಿಯಾ ಖುದಾದದಿ ಮತ್ತು ಹೊಸೈನ್‌ ರಸೌಲಿ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕಿತ್ತು, ಕ್ರೀಡಾಕೂಟ ಆರಂಭಕ್ಕೆ ಕೆಲದಿನಗಳು ಬಾಕಿ ಇರುವಾಗಲೇ ತಾಲೀಬಾನಿಗಳು ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ ಈ ಇಬ್ಬರು ಪ್ಯಾರಾ ಅಥ್ಲೀಟ್‌ಗಳು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಆಫ್ಘಾನ್ ರಾಜಧಾನಿ ಕಾಬೂಲ್ ನಗರ ಹಾಗೂ ಏರ್‌ಪೋರ್ಟ್‌ ಅನ್ನು ತಾಲೀಬಾನಿಗಳು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಆಫ್ಘಾನ್ ಅಥ್ಲೀಟ್‌ಗಳು ಪ್ಯಾರಾಲಿಂಪಿಕ್ಸ್‌ನಿಂದ ಹೊರಗುಳಿಯಬೇಕಾಯಿತು.

ಪ್ಯಾರಾಲಿಂಪಿಕ್ಸ್‌ ಟಿಟಿ: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಭವಿನಾ ಪಟೇಲ್‌

‘ಒಗ್ಗಟ್ಟಿನ ಸಂಕೇತವಾಗಿ ಉದ್ಘಾಟನಾ ಸಮಾರಂಭದಲ್ಲಿ ಆಫ್ಘನ್‌ ಧ್ವಜ ಪ್ರದರ್ಶಿಸಿದ್ದೇವೆ. ಅಲ್ಲಿನ ಇಬ್ಬರು ಕ್ರೀಡಾಳುಗಳನ್ನು ದೇಶದಿಂದ ಸ್ಥಳಾಂತರಿಸಿದ್ದೇವೆ. ಕ್ರೀಡೆಗಿಂತಲೂ ಅವರ ರಕ್ಷಣೆ ನಮಗೆ ಮುಖ್ಯ. ಅವರು ಸುರಕ್ಷಿತವಾಗಿದ್ದಾರೆ ಎಂದು ಐಪಿಸಿ ತಿಳಿಸಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಆಫ್ಘಾನಿಸ್ತಾನದ ಕ್ರೀಡಾಪಟುಗಳು ಪಾಲ್ಗೊಳ್ಳದಿದ್ದರೂ, ಕ್ರೀಡಾಸ್ಪೂರ್ತಿಯ ಉದ್ದೇಶದಿಂದ ಸ್ವಯಂ ಸೇವಕರು ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಆಫ್ಘನ್‌ ಧ್ವಜ ಪ್ರದರ್ಶಿಸಿದ್ದರು.
 

Follow Us:
Download App:
  • android
  • ios