Asianet Suvarna News Asianet Suvarna News

‘ನಾವಾಡಿದ್ದೇ ಆಟ’ದ ಕಾಲ ಮುಗೀತು; ಹೊಸ ವಾಹನಗಳಿಗೆ ಬಂತು ಹೊಸ ಸಿಸ್ಟಮ್!

  • ಬಸ್‌ಗಳಲ್ಲಿ ಪ್ಯಾನಿಕ್‌ ಬಟನ್‌; ಬಟನ್‌ ಒತ್ತಿದರೆ ಕಂಟ್ರೋಲ್‌ ರೂಂಗೆ ಸಂದೇಶ
  • ಹೊಸ ಸಾರಿಗೆ, ವಾಣಿಜ್ಯ ವಾಹನಗಳಿಗೆ ಪ್ಯಾನಿಕ್‌ ಬಟನ್‌, ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ಅಳವಡಿಕೆಗೆ ಚಾಲನೆ
Vehicle Tracking System Panic Buttons Must For New Public Transports
Author
Bengaluru, First Published Jan 3, 2019, 2:02 PM IST

ಪ್ರಯಾಣಿಕರ ಸುರಕ್ಷತೆ ಮತ್ತು ವಾಹನಗಳ ಮೇಲೆ ನಿಗಾ ವಹಿಸುವ ಉದ್ದೇಶದಿಂದ ಜ.1ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ಹೊಸದಾಗಿ ನೋಂದಣಿಯಾಗುವ ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಲ್ಲಿ ಪ್ಯಾನಿಕ್‌ ಬಟನ್‌ ಮತ್ತು ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ಉಪಕರಣ ಅಳವಡಿಕೆಗೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಚಾಲನೆ ನೀಡಿದರು.

ಇದನ್ನೂ ಓದಿ: ವಾಟ್ಸಪ್ ಅಪ್ಗ್ರೇಡ್ ಮಾಡಿಲ್ವಾ? ಈ ಸ್ಟೋರಿ ಓದಿದ ಬಳಿಕ ಮಾಡೇ ಮಾಡ್ತೀರಾ!

ನಗರದ ಯಶವಂತಪುರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪಕರಣ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ 2019ರ ಜ.1ರಿಂದ ದೇಶಾದ್ಯಂತ ನೋಂದಣಿಯಾಗುವ ಸಾರ್ವಜನಿಕ ಸಾರಿಗೆ ಹಾಗೂ ವಾಣಿಜ್ಯ ವಾಹನಗಳಲ್ಲಿ ಈ ಎರಡು ಉಪಕರಣ ಅಳವಡಿಕೆ ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ನೂತನ ಯೋಜನೆ ಅನುಷ್ಠಾನಕ್ಕೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ ಎಂದರು.

ಇದನ್ನೂ ಓದಿ: ALERT: ಪ್ಲೇಸ್ಟೋರ್‌ನಲ್ಲಿ ನಕಲಿ Appಗಳು! ಗುರುತಿಸುವುದು ಹೀಗೆ!

ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ತೊಂದರೆಗೆ ಸಿಲುಕಿದಾಗ ಈ ಪ್ಯಾನಿಕ್‌ ಬಟನ್‌ ಒತ್ತಿದರೆ ಕೇಂದ್ರ ನಿಯಂತ್ರಣ ಕೊಠಡಿಗೆ ಸಂದೇಶ ಬರುತ್ತದೆ. ಕೂಡಲೇ ಸಿಬ್ಬಂದಿ ಆ ವಾಹನದ ಮಾಹಿತಿ ಹಾಗೂ ವಾಹನ ಇರುವ ಸ್ಥಳದ ಮಾಹಿತಿಯನ್ನು ಸಮೀಪದ ಪೊಲೀಸ್‌ ಠಾಣೆ ಹಾಗೂ ಆರ್‌ಟಿಒ ಕಚೇರಿಗೆ ರವಾನಿಸಿ, ಪ್ರಯಾಣಿಕರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಂ ಉಪಕರಣ ಅಳವಡಿಕೆಯಿಂದ ವಾಹನದ ವೇಗ, ಕ್ರಮಿಸಿದ ದೂರದ ಮಾಹಿತಿ ಲಭ್ಯವಾಗುತ್ತದೆ. ನಿರ್ಲಕ್ಷ್ಯದ ಚಾಲನೆ, ಅತಿವೇಗ ಕಂಡು ಬಂದರೆ, ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗುತ್ತದೆ. ಈ ಮೂಲಕ ಅಪಘಾತ ಹಾಗೂ ಪ್ರಾಣಹಾನಿ ತಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios