Asianet Suvarna News Asianet Suvarna News

ಸೂರ್ಯನ ಸುತ್ತುವ ಬುಧ ನೋಡಿ: ಹಿಂಗಿದೆ ದೈತ್ಯನ ಮುಂದೆ ಕುಬ್ಜನ ಮೋಡಿ!

ಸೂರ್ಯನ ಸುತ್ತುವ ಬುಧ ಗ್ರಹದ ವಿಡಿಯೋ ಸೆರೆ| ಅಲ್ಟ್ರಾವೈಲೆಟ್ ಲೈಟ್'ನಲ್ಲಿ ಬುಧ ಗ್ರಹದ ಪ್ರದಕ್ಷಿಣೆ ಸೆರೆ| ಸೌರಮಂಡಲದ ಅತ್ಯಂತ ಚಿಕ್ಕ ಹಾಗೂ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಬುಧ ಗ್ರಹ| ಬುಧ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ| ಸೂರ್ಯನಿಂದ ಕೇವಲ 57.91 ಮಿಲಿಯನ್ ಕಿ.ಮೀ ದೂರದಲ್ಲಿರುವ ಬುಧ ಗ್ರಹ|

NASA SDO Captures Mercury Transit Time-lapse
Author
Bengaluru, First Published Oct 21, 2019, 7:38 PM IST

ವಾಷಿಂಗ್ಟನ್(ಅ.21): ನಮ್ಮ ಸೌರಮಂಡಲದ ಅತ್ಯಂತ ಚಿಕ್ಕ ಹಾಗೂ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಬುಧ ಗ್ರಹದ ಕುರಿತು ಮಾನವನ ತಿಳುವಳಿಕೆ ಕಡಿಮೆ. ಇದಕ್ಕೆ ಕಾರಣ ಈ ಪುಟ್ಟ ಗ್ರಹದ ಕುರಿತು ಮಾನವನಿಗೆ ಅಷ್ಟೇನೂ ಕುತೂಹಲ ಇಲ್ಲದಿರುವುದು.

ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?

ಆದರೆ ಗಾತ್ರದಲ್ಲಿ ಚಿಕ್ಕದಾದರೂ ದೈತ್ಯ ಭಾಸ್ಕರನನ್ನು ಅತ್ಯಂತ ನಿರ್ಭಿಡೆಯಿಂದ ಎದುರು ಹಾಕಿಕೊಂಡಿರುವ ಬುಧ ಗ್ರಹ, ಸೂರ್ಯನನ್ನು ಒಂದು ಸುತ್ತು ಸುತ್ತಲು ಕೇವಲ 87.97 ದಿನಗಳನ್ನು ತೆಗೆದುಕೊಳ್ಳುತ್ತದೆ.

ಮಂಗಳನ ಅಂಗಳದಲ್ಲಿ ಜೀವಿಗಳಿವೆ: ನಾಸಾ ವಿಜ್ಞಾನಿಯ ಅಚ್ಚರಿಯ ಘೋಷಣೆ!

ರೋಮನ್ನರ ದೇವತೆ ಮರ್ಕ್ಯೂರಿ (ದೇವರ ಸಂದೇಶವಾಹಕ)ಹೆಸರಲ್ಲಿ ಖ್ಯಾತವಾಗಿರುವ ಬುಧ ಗ್ರಹ, ಸೂರ್ಯನಿಂದ ಕೇವಲ 57.91 ಮಿಲಿಯನ್ ಕಿ.ಮೀ ದೂರದಲ್ಲಿದೆ.

ಇನ್ನು ಬುಧ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಈ ಗ್ರಹ ಸೂರ್ಯನನ್ನು ಸುತ್ತುವ ಸಮಯ ಮತ್ತು ವಿಧಾನವನ್ನು ಸೆರೆ ಹಿಡಿದಿದೆ.

ಬುಧ ಗ್ರಹಕ್ಕೆ ಜಪಾನ್ ನೌಕೆ: ಸುಡುವ ಗ್ರಹದತ್ತ ಚಿತ್ತ ಯಾಕೆ?

ನಾಸಾದ ಸೋಲಾರ್ ಡೈನಾಮಿಕ್ ಆಬ್ಸರ್ವೇಟರಿ ಮೂಲಕ ಸೂರ್ಯನನ್ನು ಸುತ್ತುತ್ತಿರುವ ಬುಧ ಗ್ರಹದ ಚಲನೆಯನ್ನು ಸೆರೆ ಹಿಡಿಯಲಾಗಿದೆ. ವೀಕ್ಷಣಾಲಯದ ಅಲ್ಟ್ರಾವೈಲೆಟ್ ಲೈಟ್'ಗಳ ಮೂಲಕ ವಿವಿಧ ಸಮಯದಲ್ಲಿ ಸೂರ್ಯನನ್ನು ಪರಿಭ್ರಮಿಸುತ್ತಿರುವ  ಬುಧ ಗ್ರಹದ ಅವಧಿಯನ್ನು ಸೆರೆ ಹಿಡಿಯಲಾಗಿದೆ.

Follow Us:
Download App:
  • android
  • ios