Asianet Suvarna News Asianet Suvarna News

ಎಚ್ಚರ! ನಿಮ್ಮ ವಾಟ್ಸಪ್ ಚಟುವಟಿಕೆ ನೋಡ್ತಿದ್ದಾನೆ ಒಬ್ಬ!

ಡಿಜಿಟಲ್ ಲೋಕದಲ್ಲಿ ಪ್ರೈವೆಸಿ ಬಗ್ಗೆ ಚರ್ಚೆ ಹೊಸದೇನಲ್ಲ. ಬಳಕೆದಾರರ ಮಾಹಿತಿ, ಖಾಸಗಿ ಆಯ್ಕೆಗಳು, ಹಾಗೂ ಇನ್ನಿತರ ವಿಷಯಗಳಿಗೆ ಡಿಜಿಟಲ್ ಮಾರುಕಟ್ಟೆಯಲ್ಲಿ ಬಹಳ ಡಿಮ್ಯಾಂಡ್ ಇದೆ. ಪ್ರಬಲವಾದ ಎನ್ಕ್ರಿಪ್ಷನ್ ತಂತ್ರಜ್ಞಾನದ ಬಳಕೆಯಿಂದ ವಾಟ್ಸಪ್ ಚಾಟ್‌ಗಳು ಸುರಕ್ಷಿತವಾಗಿವೆ. ಆದರೆ....

Google knows it records it every time when you open WhatsApp on your phone
Author
Bengaluru, First Published Jan 26, 2019, 7:24 PM IST

ಗೂಗಲ್ ಡಿಜಿಟಲ್ ಲೋಕದ ಸರ್ವಜ್ಞನಿದ್ದಂತೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ ಅಂದ ಮಾತ್ರಕ್ಕೆ ಅದು ಸರ್ವಜ್ಞ ಅಂದುಕೊಂಡರೆ ತಪ್ಪಾದೀತು. ಅದರ ಹೊರತಾಗಿಯೂ, ನಿಮ್ಮ ಬಗ್ಗೆ ಬಹಳಷ್ಟು ವಿಚಾರಗಳು ಗೂಗಲ್ ಮಹಾಶಯನಿಗೆ ಗೊತ್ತು. ಅದಕ್ಕೆ ನಿಮ್ಮ ವಾಟ್ಸಪ್ ಚಟುವಟಿಕೆಗಳು ಹೊರತಲ್ಲ! ಆದುದರಿಂದ, ನೀವು ಯಾವ್ಯಾವಾಗ? ಎಷ್ಟು ಸಲ ವಾಟ್ಸಪ್ ಬಳಸಿದ್ದೀರಿ? ಎಂಬೆಲ್ಲಾ ಮಾಹಿತಿ ಗೂಗಲ್‌ಗೆ ತಿಳಿಯುತ್ತದೆ ಮಾತ್ರವಲ್ಲ, ಅದನ್ನು ದಾಖಲಿಸುತ್ತದೆ ಕೂಡಾ!

ಅಂದರೆ, ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ವೆಬ್ ಮತ್ತು ಆ್ಯಕ್ಟಿವಿಟಿ ಟ್ರಾಕಿಂಗ್ ನಿಯಮದ ಪ್ರಕಾರ ನಿಮ್ಮ ಆನ್‌ಲೈನ್ ಚಟುವಟಿಕೆಗಳ ಮೆಲೆ ಗೂಗಲ್ ಕಣ್ಣಿಡುತ್ತದೆ. ಅದರರ್ಥ, ವಾಟ್ಸಪ್ ಸೇರಿದಂತೆ ನೀವ್ಯಾವ್ಯಾವ ಆ್ಯಪ್‌ಗಳನ್ನು ಬಳಸುತ್ತೀರಿ, ದಿನಕ್ಕೆ ಎಷ್ಟೆಷ್ಟು ಬಾರಿ ಬಳಸುತ್ತೀರಿ, ಎಂಬುವುದನ್ನು ಗೂಗಲ್ ದಾಖಲಿಸುತ್ತದೆ.

ಇದನ್ನೂ ಓದಿ: ಫೇಸ್‌ಬುಕ್‌ ಬಳಕೆದಾರರೇ ಗಮನಿಸಿ : ನಿಮ್ಮ ಅಕೌಂಟ್ ರದ್ದಾಗಬಹುದು

ಗಮನಿಸಬೇಕಾದ ಮತ್ತೊಂದು ವಿಷಯ ಏನೆಂದರೆ, ಇದು ಆ್ಯಂಡ್ರಾಯಿಡ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. iOS ತಂತ್ರಜ್ಞಾನಾಧಾರಿತ ಆ್ಯಪಲ್ ಅಥವಾ ಐಪ್ಯಾಡ್‌ಗಳಿಗೆ ಈ ರೀತಿ ಮಾಡುವುದು ಸಾಧ್ಯವಿಲ್ಲ. ವಾಟ್ಸಪ್ ಚಾಟ್‌ಗಳ ಬ್ಯಾಕಪ್‌ಗಾಗಿ ನೀವು ಗೂಗಲ್ ಡ್ರೈವ್ ಬಳಸದೇ ಇದ್ದರೂ ಟ್ರ್ಯಾಕಿಂಗ್ ನಡೆಯುತ್ತದೆ ಎಂಬುವುದು ನೆನಪಿರಲಿ.

ಆದರೆ, ಮೆಸೇಜ್‌ಗಳ ಖಾಸಗಿತನದ ದೃಷ್ಟಿಯಿಂದ ವಾಟ್ಸಪ್ ಅತೀ ಸುರಕ್ಷಿತ ಹಾಗೂ ಅತೀ ಬಲಿಷ್ಠವಾದ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ತಂತ್ರಜ್ಞಾನವನ್ನು ಬಳಸುತ್ತದೆ. ಹಾಗಾಗಿ, ಗೂಗಲ್ ಬಿಡಿ, ವಾಟ್ಸಪ್ ಕೂಡಾ ನೀವು ಕಳುಹಿಸುವ/ಸ್ವೀಕರಿಸುವ ಸಂದೇಶಗಳನ್ನು ಓದಲು ಸಾಧ್ಯವಿಲ್ಲ.

ನಿಮ್ಮ ಯಾವ್ಯಾವ ಚಟುವಟಿಕೆಯನ್ನು ಗೂಗಲ್ ದಾಖಲಿಸಿದೆ ಎಂಬುವುದನ್ನು ತಿಳಿಯಬೇಕಾದರೆ,  ಗೂಗಲಿನ ಮೈ ಆ್ಯಕ್ಟಿವಿಟಿ ಪೇಜ್‌ನಲ್ಲಿ ನೋಡಬಹುದು.  ನೀವು ಮಾಡಿರುವ ಎಲ್ಲಾ ಆನ್‌ಲೈನ್ ಚಟುವಟಿಕೆಗಳು ಗೂಗಲ್ ಅಕೌಂಟ್ ಮೂಲಕ ನಡೆಯುವುದರಿಂದ ಸರಿಸುಮಾರು ಎಲ್ಲಾ ಮಾಹಿತಿ ಇಲ್ಲಿ ದಾಖಲಾಗಿರುತ್ತವೆ. 

ಇದನ್ನೂ ಓದಿ: ಇನ್ಮುಂದೆ ಯಾಮಾರಿಸುವುದು ಸುಲಭವಲ್ಲ! ಗೂಗಲ್ ನೋಡ್ತಿದ್ದಾನೆ ಎಲ್ಲಾ!!

ಅದನ್ನು ನೋಡಬೇಕಾದರೆ, ಗೂಗಲ್ ಅಕೌಂಟ್‌ಗೆ ಹೋಗಿ, ಅಲ್ಲಿ ಎಡಬದಿಯಲ್ಲಿರುವ Data & Personalization ಆಯ್ಕೆಯನ್ನು ಒತ್ತಿ.  ಗೂಗಲ್‌ಗೆ ನೀವು ಅನುಮತಿಸಿರುವ ಎಲ್ಲಾ ವಿಷಯಗಳನ್ನು ಅಲ್ಲಿ ನೋಡಬಹುದಾಗಿದೆ. "Web & App activity" ಆಯ್ಕೆಯ ಕೆಳಗೆ ನಿಮ್ಮ ಆ್ಯಪ್ ಮತ್ತು ವೆಬ್ ಚಟುವಟಿಕೆಗಳು ದಾಖಲಾಗಿರುತ್ತವೆ. ಅಲ್ಲಿ ಕ್ಲಿಕ್ ಮಾಡಿದಾಗ, ನಿಮ್ಮ  ಮೇಲೆ ತಿಳಿಸಿದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. 

ಈ ಟ್ರ್ಯಾಕಿಂಗನ್ನು ತಡೆಯುವ ಸೌಲಭ್ಯವೂ ಇದೆ.  Web & App activity ಆಯ್ಕೆಯ ಮುಂದಿರುವ ಬಟನನ್ನು ಆಫ್ ಮಾಡಿದರೆ ಸಾಕು.  ಹಾಗೇನೇ, ನಿಮ್ಮ ಹಳೆಯ ಹಿಸ್ಟರಿ, ಸರ್ಚ್ ವಿವರ ಹಾಗೂ ಇನ್ನಿತರ ಮಾಹಿತಿಗಳನ್ನು ಕೂಡಾ ತೆಗೆದು ಹಾಕಬಹುದು. ಗೂಗಲ್ ಇಷ್ಟೇ ಅಲ್ಲ,  ನಿಮ್ಮ ಲೊಕೇಶನ್ ಹಿಸ್ಟರಿ, ವಾಯ್ಸ್ ಮತ್ತು ಆಡಿಯೋ ಚಟುವಟಿಕೆ, ಡಿವೈಸ್ ಮಾಹಿತಿ, ಯೂಟ್ಯೂಬ್ ಸರ್ಚ್ ಮತ್ತು ವೀಕ್ಷಣೆ ಹಿಸ್ಟರಿಗಳನ್ನೂ ಗೂಗಲ್ ದಾಖಲಿಸುತ್ತದೆ.

Follow Us:
Download App:
  • android
  • ios