Asianet Suvarna News Asianet Suvarna News

ಕೇಂದ್ರ ಸರ್ಕಾರ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ: ಚಲುವರಾಯಸ್ವಾಮಿ

ಬ್ಯಾಲೆನ್ಸ್ ಮಾಡಿ ಮಾತಾಡೋಕೆ ನನಗೆ ಬರೋದಿಲ್ಲ. ಏನಿದ್ರೂ ನೇರವಾಗಿ ವಿಚಾರವನ್ನು ಹೇಳ್ತಿನಿ ಎಂದು ಸಚಿವ ಚಲುವರಾಯಸ್ವಾಮಿ ನುಡಿದರು. ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಒಕ್ಕಲಿಗರ ಉದ್ಯಮಿ ಸಭೆಯಲ್ಲಿ ಮಾತನಾಡಿದ ಸಚಿವರು ಕೇಂದ್ರ ಸರ್ಕಾರ, ಎಚ್‌ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

Lok sabha election 2024 minister chaluvarayaswamy outraged against union government rav
Author
First Published Apr 19, 2024, 11:06 PM IST

ಬೆಂಗಳೂರು (ಏ.19): ಬ್ಯಾಲೆನ್ಸ್ ಮಾಡಿ ಮಾತಾಡೋಕೆ ನನಗೆ ಬರೋದಿಲ್ಲ. ಏನಿದ್ರೂ ನೇರವಾಗಿ ವಿಚಾರವನ್ನು ಹೇಳ್ತಿನಿ ಎಂದು ಸಚಿವ ಚಲುವರಾಯಸ್ವಾಮಿ ನುಡಿದರು. 

ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಒಕ್ಕಲಿಗರ ಉದ್ಯಮಿ ಸಭೆಯಲ್ಲಿ ಮಾತನಾಡಿದ ಸಚಿವರು, ಜಯರಾಂ ಅವರ ಬೇಡಿಕೆಗಳಿಗೆ ನಾವು ಬದ್ಧರಾಗಿದ್ದೇವೆ. ಕಾನೂನು, ಸಂವಿಧಾನ ವ್ಯಾಪ್ತಿಯಲ್ಲಿ ನಾವು ನಿಮ್ಮ ಜೊತೆ ಇದ್ದೇವೆ. ಎಲೆಕ್ಷನ್ ಮುಗಿದ ಬಳಿಕ ನೀವು ಮಾಹಿತಿ ಕೊಟ್ರೆ ನಾವು ಅದನ್ನ ನೂರಕ್ಕೆ ನೂರು ಪೂರೈಸ್ತಿವಿ ಎಂದು ಭರವಸೆ ನೀಡಿದರು.

ಕೇಂದ್ರ ಬಿಜೆಪಿ ಸರ್ಕಾರದಿಂದ ಅನ್ಯಾಯವಾಗಿರೋ ಬಗ್ಗೆ ನಮ್ಮ ಬಳಿ ಅಂಕಿ ಅಂಶವಿದೆ. ಕರ್ನಾಟಕದ ಯಾವುದೇ ಹಕ್ಕನ್ನ ಕೇಳೋಕೆ ಕೈಕಟ್ಟಿ ನಿಂತ್ಕೊಬೇಕು, ಹೆದರಬೇಕಾದ ಪರಿಸ್ಥಿತಿ ಇದೆ. ಮೋದಿ ಅವ್ರಿಗೆ ಅವಕಾಶ ನೀಡಿದ್ದ ಎಲ್ ಕೆ ಅಡ್ವಾಣಿಯವರನ್ನೇ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಮೋದಿ, ರಾಜನಾಥ್ ಸಿಂಗ್, ಅಮಿತಾ ಶಾ ಬಳಿ ಕರ್ನಾಟಕ ಸಂಸದರು ಮಾತಾಡೋ ಧೈರ್ಯವಿಲ್ಲ. ಇಂಥ ವ್ಯವಸ್ಥೆ ಬದಲಾಗಬೇಕಾಗಿದೆ. ರಾಷ್ಟ್ರದಲ್ಲಿ ಬದಲಾವಣೆ ಆಗೋದಿಲ್ಲ ಅನ್ನೋ ಭ್ರಮೆಯಲ್ಲಿ ಯಾರೂ ಇರೋ ಅವಶ್ಯಕತೆ ಇಲ್ಲ. ನಾವು ಬದಲಾವಣೆಗಾಗಿ ಒಂದು ಹೆಜ್ಜೆ ಇಡೋಣ. ಇವತ್ತು ರಾಷ್ಟ್ರದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತು ವರ್ಷ, ದೇಶ ಅಭಿವೃದ್ಧಿಗೆ ಮುನ್ನುಡಿ ಆಗ್ಬೇಕಿತ್ತು. ಹತ್ತು ವರ್ಷ ಸಿಕ್ಕಿದರೂ ಏನು ಮಾಡದೇ ಇವಾಗ ಅವಕಾಶ ಸಿಕ್ರೆ ಮಾಡ್ ತೋರ್ಸ್ತಿವಿ ಅಂತಾ ಮೋದಿ ಹೇಳಿದ್ದಾರೆ ಎಂದು ಕಿಡಿಕಾರಿದರು.

ನಾಳೆ ಬೆಂಗಳೂರಿಗೆ ಮೋದಿ ಆಗಮನ; ಈ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧ

. ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರದ ತುಂಬಾ ಕೆಟ್ಟದಾಗಿ ನಡೆಸಿಕೊಳ್ತಾ ಇದ್ದಾರೆ. ಬರಗಾಲ, ನೀರಿನ ವಿಚಾರದಲ್ಲಿ ಅಸ್ಪೃಶ್ಯ ರೀತಿಯಲ್ಲಿ ಕರ್ನಾಟಕವನ್ನು ನಡೆಸಿಕೊಂಡಿದ್ದಾರೆ. ನೀವೆಲ್ಲಾ ಈ ವಿಚಾರ ಸರಿ ಅನ್ಸಿದ್ರೆ ನೀವು ಪ್ರಭಾವ ಬೀರಬೇಕು. ನಮ್ಮನೆಲ್ಲಾ ಕೇಂದ್ರ ಸರ್ಕಾರ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನಾನು ಪಾರ್ಟಿ ಬಿಟ್ಟು ಹೋದಾಗ ಎಲ್ಲ ಒಕ್ಕಲಿಗರು ಕೆಟ್ಟದಾಗಿ ನಡೆಸಿಕೊಂಡಿದ್ರು. ನೀವು ಯಾರನ್ನ ಇವತ್ತೂ ನಾಯಕ ಅಂತಾ ಹೇಳ್ತೀರೋ ಅವರು ಅಷ್ಟೇ ಕೆಟ್ಟದಾಗಿ ನಡೆಸಿಕೊಂಡಿದ್ರು ಎಂದು ಪರೋಕ್ಷವಾಗಿ ಎಚ್‌ಡಿ ದೇವೇಗೌಡ ಕುಮಾರಸ್ವಾಮಿ ವಿರುದ್ಧ ಆರೋಪಿಸಿದರು.

ದೇವೇಗೌಡರಿಗಿಂತ ಎಚ್‌.ಡಿ.ಕುಮಾರಸ್ವಾಮಿ ದೊಡ್ಡವರಾ?: ಸಚಿವ ಚಲುವರಾಯಸ್ವಾಮಿ

ಮೊನ್ನೆ ದೇವೇಗೌಡ್ರು ಹೇಳಿದ್ರು, ನನ್ನ‌ ಮಗನನ್ನ ಮುಖ್ಯಮಂತ್ರಿ ಮಾಡೋಕೆ ಚಲುವರಾಯಸ್ವಾಮಿ ಬಿಟ್ಟಿಲ್ಲ ಅಂತಾ. ಎರಡನೇ ಬಾರಿ ಎಸ್‌ಎಂ ಕೃಷ್ಣ ಮುಖ್ಯಮಂತ್ರಿ ಮಾಡೋ ಅವಕಾಶ ಇವ್ರ ಬಳಿ ಇತ್ತು. ಆದರೆ ಕೃಷ್ಣ ಗೆದ್ರೆ ಇನ್ನೊಂದು ಪ್ಯಾನಲ್‌ನಲ್ಲಿ ಉಳ್ಕೋಬೇಕಪ್ಪಾ ಅಂತಾ ಹೇಳಿದ್ದು ಅವ್ರೇ. ಟಿವಿಯಲ್ಲಿ ಎಲ್ಲ ರೆಕಾರ್ಡ್ ಆಗುತ್ತೆ, ಆಗ್ಲಿ ಪರವಾಗಿಲ್ಲ ಒಕ್ಕಲಿಗ ಮುಖ್ಯಮಂತ್ರಿ ಇದ್ಕೊಂಡು, ಒಕ್ಕಲಿಗ ಐಎಎಸ್ ಆಫೀಸರ್ಸ್‌ನ ಸಸ್ಪೆಂಡ್ ಮಾಡಿದ್ರೆ ಇಮೇಜ್ ಬರುತ್ತೆ ಅಂದಿದ್ರು. ಇದು ನೀವು ಒಪ್ಪೋ ನಾಯಕತ್ವ. ನೀವು ಕಾಲಲ್ಲಿ ತುಳಿತೀರಿ ಮತ್ತೆ ಕೈಮುಗಿತೀರಿ. ಇನ್ನೊಂದು ವಿಚಾರ ಹೇಳ್ತೇನೆ. ಶಿರಾ ಸ್ವಾಮೀಜಿ ವಿಚಾರದಲ್ಲಿ ಕೇಸ್ ಹಾಕೋ ವಿಷಯ. ಅದನ್ನ‌ ನಿಲ್ಲಿಸಿ ಅಂತಾ ನಾನು ಡಿಸಿಎಂ‌ ಜೊತೆ ಹೋಗಿ ಸಿಎಂ ಬಳಿ ನಿಲ್ಲಿಸಲು ಹೇಳಿದ್ದೆ. ಆದಿಚುಂಚನಗಿರಿ ಬಾಲಗಂಗಾಧರ ಮೇಲೆ ಕೇಸ್ ಆಯ್ತು.. ಅವ್ರು ಮಾಜಿ ಪ್ರಧಾನಿಗಳು, ಹಿರಿಯರು ಆ ವಿಚಾರ ಮಾತಾಡೋಕೆ ಹೋದ್ರೆ ತುಂಬಾ ಇದೆ ಎಂದರು.

ಡಿಕೆ ಶಿವಕುಮಾರ್ ಏನ್ ಕಳ್ಳತನ ಮಾಡಿದ್ರಾ? ಅವ್ರು ಬ್ಯುಸಿನೆಸ್ ಮಾಡಿದ್ದಾರೆ. ಆರ್ಥಿಕವಾಗಿ ಸದೃಢರಾಗಿದ್ದಾರೆ. ಅವ್ರ ಬಗ್ಗೆ ಯಾಕ್ರೀ ಅಷ್ಟು ಕೆಟ್ಟದಾಗಿ ಮಾತಾಡೋ ಅವಶ್ಯಕತೆ ಏನೀದೆ? ಜೆಡಿಎಸ್ ನಾಯಕರಿಗೆ ಸಚಿವ ಚೆಲುವರಾಯಸ್ವಾಮಿ ಪ್ರಶ್ನಿಸಿದರು.

Follow Us:
Download App:
  • android
  • ios