Asianet Suvarna News Asianet Suvarna News

ಕೊಹ್ಲಿ ವಿರುದ್ಧ ತಿರುಗಿಬಿದ್ಧ ಟೀಂ ಇಂಡಿಯಾ ಮಾಜಿ ನಾಯಕ..!

2ನೇ ಟೆಸ್ಟ್‌ನಲ್ಲಿ ಭಾರತ ತಂಡ ಸ್ಪಿನ್ನರ್‌ಗಳನ್ನು ಬದಿಗಿಟ್ಟು 4 ವೇಗಿಗಳೊಂದಿಗೆ ಕಣಕ್ಕಿಳಿದಿತ್ತು. ಆದರೆ ಪಂದ್ಯದಲ್ಲಿ ಆಸೀಸ್ ಸ್ಪಿನ್ನರ್ ನೇಥನ್ ಲಯನ್ ನಿರ್ಣಾಯಕ ಪಾತ್ರ ವಹಿಸಿದ್ದರು. 

Virat Kohli Selection Blunders In Perth Baffle Sunil Gavaskar
Author
Perth WA, First Published Dec 20, 2018, 2:17 PM IST

ಪರ್ತ್[ಡಿ.20]: ‘ನಾಯಕ ಕೊಹ್ಲಿಯ ತಪ್ಪು ಆಯ್ಕೆಗಳೇ, ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ತಂಡದ ಸೋಲಿಗೆ ಕಾರಣ’ ಎಂದು ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

#INDvAUS ಕೊನೆಯ 2 ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ!

2ನೇ ಟೆಸ್ಟ್‌ನಲ್ಲಿ ಭಾರತ ತಂಡ ಸ್ಪಿನ್ನರ್‌ಗಳನ್ನು ಬದಿಗಿಟ್ಟು 4 ವೇಗಿಗಳೊಂದಿಗೆ ಕಣಕ್ಕಿಳಿದಿತ್ತು. ಆದರೆ ಪಂದ್ಯದಲ್ಲಿ ಆಸೀಸ್ ಸ್ಪಿನ್ನರ್ ನೇಥನ್ ಲಯನ್ ನಿರ್ಣಾಯಕ ಪಾತ್ರ ವಹಿಸಿದ್ದರು. ‘ಮೆಲ್ಬರ್ನ್ ಮತ್ತು ಸಿಡ್ನಿ ಟೆಸ್ಟ್‌ಗಳಲ್ಲಿಯೂ ಭಾರತ ತಂಡ ಗೆಲುವು ಸಾಧಿಸುವಲ್ಲಿ ವಿಫಲವಾದರೆ, ಸದ್ಯ ಇರುವ ನಾಯಕ ಕೊಹ್ಲಿ, ಕೋಚ್ ರವಿಶಾಸ್ತ್ರಿ ಮತ್ತು ಸಹಾಯಕ ಸಿಬ್ಬಂದಿಯಿಂದ ಏನಾದರೂ ಲಾಭವಾಗುತ್ತಿದೆಯೇ ಎಂದು ಗವಾಸ್ಕರ್ ಹೇಳಿದ್ದಾರೆ.

ಪರ್ತ್ ಟೆಸ್ಟ್: ಆಸಿಸ್’ಗೆ ಶರಣಾದ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಅಡಿಲೇಡ್ ಟೆಸ್ಟ್ ಪಂದ್ಯ ಗೆದ್ದು ಶುಭಾರಂಭ ಮಾಡಿತ್ತು. ಬಳಿಕ ಪರ್ತ್’ನಲ್ಲಿ ನಡೆದ ಎರಡನೇ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾ 146 ರನ್’ಗಳಿಂದ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆ. ಪರ್ತ್ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯನ್ 8 ವಿಕೆಟ್ ಕಬಳಿಸಿ ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದಿಂದ ಡಿಸೆಂಬರ್ 26 ರಿಂದ ಆರಂಭಗೊಳ್ಳಲಿದೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಲಿದೆ.

ಭಾರತ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ

Follow Us:
Download App:
  • android
  • ios