Asianet Suvarna News Asianet Suvarna News

ಸಯ್ಯದ್ ಮೋದಿ ಟೂರ್ನಿ:ಸೈನಾ, ಕಶ್ಯಪ್ 2ನೇ ಸುತ್ತಿಗೆ ಪ್ರವೇಶ

ಸಯ್ಯದ್ ಮೋದಿ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಹಾಗೂ ಪಿ ಕಶ್ಯಪ್ ಗೆಲುವಿನ ಓಟ ಮುಂದುವರಿಸಿದ್ದಾರೆ. ಆದರೆ ಸಿಕ್ಕಿ ರೆಡ್ಡಿ ಹಾಗೂ ಪ್ರಣಯ್ ಜೋಡಿ ಮುಗ್ಗರಿಸಿದೆ. ಇಲ್ಲಿದೆ ಸಯ್ಯದ್ ಮೋದಿ ಟೂರ್ನಿ ಹೈಲೈಟ್ಸ್.

Syed Modi tournament Saina Nehwal and Parupalli Kashyap enter 2nd round
Author
Bengaluru, First Published Nov 22, 2018, 10:28 AM IST

ಲಖನೌ(ನ.22): ಹಾಲಿ ಚಾಂಪಿಯನ್ ಭಾರತದ ಪ್ರಣಯ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಜೋಡಿ, ಇಲ್ಲಿ ನಡೆಯುತ್ತಿರುವ ಸಯ್ಯದ್ ಮೋದಿ ವಿಶ್ವ ಬ್ಯಾಡ್ಮಿಂಟನ್
ಟೂರ್ನಿಯ ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಸೋಲುಂಡು ನಿರ್ಗಮಿಸಿದೆ. ಉಳಿದಂತೆ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್, ಪಿ. ಕಶ್ಯಪ್, ಪ್ರಣೀತ್, ಶುಭಾಂಕರ್
ಡೇ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಿಶ್ರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತ ಪ್ರಣವ್ ಮತ್ತು ಸಿಕ್ಕಿ ರೆಡ್ಡಿ ಜೋಡಿ, ಚೀನಾದ ರೆನ್ ಕ್ಸಿಯಾಂಗು ಮತ್ತು ಜ್ಹೊ ಚೊಮನ್ ಜೋಡಿ ವಿರುದ್ಧ 14-21, 11-21 ಗೇಮ್ ಗಳಲ್ಲಿ ಸೋಲುಂಡಿತು. ಭಾರತದ ಜೋಡಿ ಕೇವಲ 31 ನಿಮಿಷಗಳ ಆಟದಲ್ಲಿ ಪರಾಭವ ಹೊಂದಿತು. 

3 ಬಾರಿ ಚಾಂಪಿಯನ್ ಆಗಿರುವ ತಾರಾ ಶಟ್ಲರ್ ಸೈನಾ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಮಾರಿಷಸ್‌ನ ಕೇಟ್ ಫೂ ಕುನೆ ಎದುರು 21-10, 21-10 ಗೇಮ್‌ಗಳಲ್ಲಿ ಗೆದ್ದರು. ಸೈನಾ ಮುಂದಿನ ಸುತ್ತನಲ್ಲಿ ಭಾರತದವರೆ ಆದ ಅಮೋಲಿಕಾರನ್ನು ಎದುರಿಸಲಿದ್ದಾರೆ. ರಿತುಪರ್ಣಾ ದಾಸ್, ಪರ್ಶಿ ಜೋಶಿ, ಸೈಲಿ ರಾಣೆ, ರಿಯಾ ಮುಖರ್ಜಿ, ರೇಷ್ಮಾ, ಶ್ರೇಯಾನ್ಶಿ, ಸಾಯಿ ಉತ್ತೇಜಿತ ರಾವ್ ಚುಕ್ಕಾ 2ನೇ ಸುತ್ತು ಪ್ರವೇಶಿಸಿದರು. 

ಪುರುಷರ ಸಿಂಗಲ್ಸ್‌ನಲ್ಲಿ ಕಶ್ಯಪ್, ಥಾಯ್ಲೆಂಡ್‌ನ ತನೊಂಗ್ಸಕ್ 21-14, 21-12 ಗೇಮ್ ಗಳಲ್ಲಿ ಜಯಿಸಿದರು. 2ನೇ ಸುತ್ತಿನಲ್ಲಿ ಕಶ್ಯಪ್ ಇಂಡೋನೇಷ್ಯಾದ  ಫಿರ್ಮನ್ ಅಬ್ದುಲ್ ಎದುರು ಸೆಣಸಲಿದ್ದಾರೆ. ಬಿ. ಸಾಯಿ ಪ್ರಣೀತ್, ರಷ್ಯಾದ ಸರ್ಗಿ ಸೈರಂಟ್ ವಿರುದ್ಧ 21-12, 21-10 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಶುಭಾಂಕರ್ ಡೇ, ಸ್ವೀಡನ್‌ನ ಫೆಲಿಕ್ಸ್ ಬುರೆಸ್ಟೆಡ್ಟ್ ವಿರುದ್ಧ 21-15, 21-13 ಗೇಮ್‌ಗಳಲ್ಲಿ ಜಯ ಸಾಧಿಸಿದರು.
 

Follow Us:
Download App:
  • android
  • ios