Asianet Suvarna News Asianet Suvarna News

ವಿರಾಟ್ ದಾಖಲೆ ಬರೆದರೂ ಟೀಂ ಇಂಡಿಯಾ ಗೆಲ್ಲಲಿಲ್ಲ

ವೆಸ್ಟ್ ಇಂಡೀಸ್ ನಿಡಿದ್ದ 283 ರನ್ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ ಪಡೆ 47.4 ಓವರ್ ಗಳಲ್ಲಿ 240 ರನ್ ಗಳಿಗೆ  ಆಲ್ ಔಟ್ ಆಯಿತು. ಕೊಹ್ಲಿ ಹ್ಯಾಟ್ರಿಕ್ ಶತಕದೊಂದಿಗೆ ವೃತ್ತಿ ಜೀವನದ 38ನೇ ಶತಕ ಬಾರಿಸಿದರೂ ಪ್ರಯೋಜನವಾಗಲಿಲ್ಲ.

ODI Cricket: West indies won By 43 runs
Author
Bengaluru, First Published Oct 27, 2018, 9:40 PM IST

ಪುಣೆ[ಅ.27]: ಭಾರತ ತಂಡ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ  ವೆಸ್ಟ್ ಇಂಡೀಸ್ ವಿರುದ್ಧ  43 ರನ್ ಗಳ ಸೋಲು ಅನುಭವಿಸಿದೆ.

ಇದರೊಂದಿಗೆ 5 ಪಂದ್ಯಗಳ ಏಕದಿನ ಸರಣಿ 1-1 ರೊಂದಿಗೆ ಸಮಾಬಲವಾಗಿದೆ. ವೆಸ್ಟ್ ಇಂಡೀಸ್ ನಿಡಿದ್ದ 283 ರನ್  ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ ಪಡೆ 47.4 ಓವರ್ ಗಳಲ್ಲಿ 240 ರನ್ ಗಳಿಗೆ ಆಲ್ ಔಟ್ ಆಯಿತು. ಕೊಹ್ಲಿ ಹ್ಯಾಟ್ರಿಕ್ ಶತಕದೊಂದಿಗೆ ವೃತ್ತಿ ಜೀವನದ 38ನೇ ಶತಕ ಬಾರಿಸಿದರೂ ಪ್ರಯೋಜನವಾಗಲಿಲ್ಲ.

ಭಾರತದ ಪರ ಧವನ್ [35], ರಾಯುಡು[22], ಪಂಥ್[24] ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಆಟಗಾರರು 20ರ ಗಡಿ ದಾಟಲಿಲ್ಲ.ವಿಂಡೀಸ್ ಪರ ಸ್ಯಾಮ್ಯಯಲ್ 12/3 ಹಾಗೂ ಹೋಲ್ಡರ್, ಮೆಕ್ಕೇ, ನರ್ಸ್ ತಲಾ 2 ವಿಕೇಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹೋಪ್ ಅರ್ಧ ಶತಕ 
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಆರಂಭದಲ್ಲೇ ಬುಮ್ರಾ ದಾಳಿಗೆ 13.1 ಓವರ್ ಗಳಲ್ಲಿ 55/3 ವಿಕೇಟ್ ಕಳೆದುಕೊಂಡಿತು. ವಿಕೇಟ್ ಕೀಪರ್ ಹೋಪ್  ಹಾಗೂ ಮಧ್ಯಮ ಕ್ರಮಾಂಕದ ಆಟಗಾರ  ಹೇಟ್ಮೆಯಾರ್ 4ನೇ ವಿಕೇಟ್ ನಷ್ಟಕ್ಕೆ 19.3 ಓವರ್ ಗಳಲ್ಲಿ 111 ರನ್ ದಾಖಲಿಸಿದರು. ಕುಲ್ದೀಪ್ ಯಾದವ್ ಬೌಲಿಂಗ್ ನಲ್ಲಿ ಹೇಟ್ಮೆಯಾರ್ [37] ಪೆವಿಲಿಯನ್ ಗೆ ತೆರಳಿದ ನಂತರ ಹೋಪ್ ಗೆ ಜೊತೆಯಾದವರು ನಾಯಕ ಜಾಸೆನ್ ಹೋಲ್ಡರ್[32]. 

95 ರನ್ ಗಳಿಸಿದ್ದಾಗ  ಬುಮ್ರಾ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ 5 ರನ್ ಗಳಿಂದ ಶತಕ  ವಂಚಿತರಾದರು. ಕೊನೆಯ 8 ಓವರ್ ಗಳಲ್ಲಿ 9ನೇ ವಿಕೇಟ್ ಜೊತೆಯಾಟಕ್ಕೆ  ನರ್ಸ್ [40] ಹಾಗೂ ರೋಚ್ [15] 45 ರನ್ ಗಳಿಸಿ ತಂಡದ ಮೊತ್ತವನ್ನು 283/9 ದಾಖಲಿಸಿದರು. ಭಾರತದ  ಪರ ಬುಮ್ರಾ  35/4 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್
ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 283/9
[ಹೋಪ್ 95, ಬುಮ್ರಾ 35/4 ]

ಭಾರತ 47.4 ಓವರ್ ಗಳಲ್ಲಿ 240/10
[ಕೊಹ್ಲಿ 107, ಸ್ಯಾಮುಯೆಲ್ಸ್ 12/3 ]

ಫಲಿತಾಂಶ : ವೆಸ್ಟ್ ಇಂಡೀಸ್ ತಂಡಕ್ಕೆ 43 ರನ್ ಜಯ

4ನೇ ಏಕದಿನ ಪಂದ್ಯ: ಅ.29 - ಸ್ಥಳ: ಮುಂಬೈ
 

 

Follow Us:
Download App:
  • android
  • ios