Asianet Suvarna News Asianet Suvarna News

ನಿರ್ಣಾಯಕ ಟಿ20: ಭಾರತಕ್ಕೆ 165 ರನ್ ಟಾರ್ಗೆಟ್ ನೀಡಿದ ಆಸಿಸ್!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಅಂತಿಮ ಹಾಗೂ ನಿರ್ಣಾಯಕ ಟಿ20 ಪಂದ್ಯ ರೋಟಕ ಘಟ್ಟ ತಲುಪಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಟೀಂ ಇಂಡಿಯಾ ಗೆಲುವಿಗೆ 165 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯ ಅಪ್‌ಡೇಟ್ಸ್.
 

India vs Australia T20 Team India require 165 runs to level the series
Author
Bengaluru, First Published Nov 25, 2018, 3:02 PM IST

ಸಿಡ್ನಿ(ನ.25): ಭಾರತ ವಿರುದ್ದದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿದೆ. ಈ ಮೂಲಕ ಭಾರತದ ಗೆಲುವಿಗೆ 165 ರನ್ ಟಾರ್ಗೆಟ್ ನೀಡಿದೆ. ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಇದೀಗ ಭಾರತವನ್ನ ಅಲ್ವಮೊತ್ತಕ್ಕೆ ಕಟ್ಟಿ ಹಾಕಿ ಸರಣಿ ಗೆಲುವಿನ ವಿಶ್ವಾಸದಲ್ಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು. ನಾಯಕ ಆ್ಯರೋನ್ ಫಿಂಚ್ ಹಾಗೂ ಡಾರ್ಕಿ ಶಾರ್ಟ್ ಅರ್ಧಶತಕದ ಜೊತೆಯಾಟ ನೀಡಿದರು. ಫಿಂಚ್ 28 ರನ್ ಸಿಡಿಸಿ ಔಟಾದರೆ, ಶಾರ್ಟ್ 33 ರನ್‌ಗಳಿಸಿ ಪೆವಿಲಿಯನ್ ಸೇರಿದರು.

ಬೆನ್ ಮೆಕ್‌ಡೆಮೊರ್ಟ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್  ಆಸರೆಯಾಗಲಿಲ್ಲ. ಆದರೆ ಆಲೆಕ್ಸ್ ಕ್ಯಾರಿ 27 ರನ್ ಸಿಡಿಸಿದರು. ಕ್ರಿಸ್ ಲಿನ್ 13 ರನ್‌ಗಳಿಸಿ ಔಟಾದರು. ಮಾರ್ಕಸ್ ಸ್ಟೊಯಿನಿಸ್ ಅಜೇಯ 25 ಹಾಗೂ ನತನ್ ಕೌಲ್ಟರ್ ನೈಲ್ ಅಜೇಯ 13 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿತು.

ಸರಣಿಯಲ್ಲಿ ದುಬಾರಿಯಾಗಿದ್ದ ಕ್ರುನಾಲ್ ಪಾಂಡ್ಯ ನಿರ್ಣಾಯಕ ಪಂದ್ಯದಲ್ಲಿ ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಕುಲ್ದೀಪ್ ಯಾದವ್ 1 ವಿಕೆಟ್ ಕಬಳಿಸಿದರು. ಭಾರತ ಈ ಪಂದ್ಯ ಗೆದ್ದರೆ ಸರಣಿ ಸಮಭಲವಾಗಲಿದೆ.

Follow Us:
Download App:
  • android
  • ios