Asianet Suvarna News Asianet Suvarna News

ಕೊಹ್ಲಿ ಸಾಧನೆಗೆ ಮತ್ತೊಂದು ಗರಿ; ಕೋಟ್ಲಾ ಮೈದಾನದಲ್ಲಿ ಕೊಹ್ಲಿ ಹೆಸರು..!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಪೂರೈಸಿದ್ದಾರೆ. ಈ ಹಾದಿಯಲ್ಲಿ ಹತ್ತು-ಹಲವು ದಾಖಲೆಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಇದೀಗ ಡೆಲ್ಲಿ ಕ್ರಿಕೆಟ್ ಸಂಸ್ಥೆ ಕೊಹ್ಲಿಗೆ ಮಯತ್ತೊಂದು ಗೌರವ ನೀಡಲು ಸಜ್ಜಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Feroz Shah Kotla to have Virat Kohli stand soon says DDCA
Author
New Delhi, First Published Aug 19, 2019, 12:34 PM IST

ನವದೆಹಲಿ(ಆ.19): ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅಭೂತಪೂರ್ವ ಯಶಸ್ಸು ಗುರುತಿಸಿ ಇಲ್ಲಿನ ಫಿರೋಜ್‌ ಷಾ ಕೋಟ್ಲಾ ಮೈದಾನದ ಸ್ಟಾಂಡ್‌ವೊಂದಕ್ಕೆ ಭಾರತ ಕ್ರಿಕೆಟ್‌ ತಂಡದ ನಾಯಕನ ಹೆಸರನ್ನಿಡಲು ದೆಹಲಿ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ನಿರ್ಧರಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11 ವರ್ಷ ಪೂರೈಸಿದ ಕೊಹ್ಲಿ!

‘ಕೊಹ್ಲಿ ಕೋಟ್ಲಾ ಮೈದಾನದಲ್ಲೇ ಆಡಿ ಬೆಳೆದ ಆಟಗಾರ. ವಿಶ್ವ ಕ್ರಿಕೆಟ್‌ಗೆ ಅವರ ಕೊಡುಗೆ ಅಪಾರ. ಕೊಹ್ಲಿಯ ಯಶಸ್ಸು ಪ್ರತಿಯೊಬ್ಬರಿಗೂ ಸ್ಫೂರ್ತಿ. ಅವರ ಸಾಧನೆ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ’ ಎಂದು ಡಿಡಿಸಿಎ ಅಧ್ಯಕ್ಷ ರಜತ್‌ ಶರ್ಮಾ ಹೇಳಿದ್ದಾರೆ. ಸೆ.12ರಂದು ಕೊಹ್ಲಿ ಹಾಗೂ ಭಾರತ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.

ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

ಆಗಸ್ಟ್ 18, 2008ರಲ್ಲಿ ಕೊಹ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಪದಾರ್ಪಣೆಯ ಬಳಿಕ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಗರಿಷ್ಠ ರನ್[20,502*], ಗರಿಷ್ಠ ಶತಕ[68], ಗರಿಷ್ಠ ಅರ್ಧಶತಕ[95], ಅತಿಹೆಚ್ಚು ದ್ವಿಶತಕ[6], ಗರಿಷ್ಠ ಬೌಂಡರಿ[2047], ಹಾಗೂ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿ[53] ಗಳಿಸಿದ ಕ್ರಿಕೆಟಿಗ ಎನ್ನುವ ದಾಖಲೆ ಬರೆದಿದ್ದಾರೆ.
 

Follow Us:
Download App:
  • android
  • ios