Asianet Suvarna News Asianet Suvarna News

ಭಾರತ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ಸಂಭವನೀಯ ತಂಡ ಪ್ರಕಟ!

ಏಷ್ಯಾಕಪ್ ಸೂಪರ್ 4 ಹಂತದ  ಪಂದ್ಯಕ್ಕೆ ಪಾಕಿಸ್ತಾನ ಸಜ್ಜಾಗಿದೆ. ಭಾರತ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಲು ಪಾಕಿಸ್ತಾನ ಕೆಲ ಬದಲಾವಣೆ ಮಾಡೋ ಸಾಧ್ಯತೆ ಇದೆ. ಇಲ್ಲಿದೆ ಪಾಕಿಸ್ತಾನ ಸಂಭವನೀಯ ತಂಡ.

Asia cup cricket Pakistan predicted team for India clash
Author
Bengaluru, First Published Sep 22, 2018, 8:18 PM IST


ದುಬೈ(ಸೆ.22): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಆಫ್ಘಾನಿಸ್ತಾನ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದ ಪಾಕಿಸ್ತಾನ ಇದೀಗ ಮಹತ್ವದ ಪಂದ್ಯದ ಮೇಲೆ ಕಣ್ಣಿಟ್ಟಿದೆ. ನಾಳೆ(ಸೆ.23) ನಡೆಯಲಿರುವ ಭಾರತ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ವಿಶೇಷ ತಯಾರಿ ನಡೆಸಿದೆ.

ಲೀಗ್ ಹಂತದಲ್ಲಿ ಭಾರತ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ಇದೀಗ ಗೆಲುವಿಗಾಗಿ ಹಾತೊರೆಯುತ್ತಿದೆ. ಇಷ್ಟೇ ಅಲ್ಲ ಲೀಗ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಾಕ್ ಸಜ್ಜಾಗಿದೆ. ಭಾರತ ವಿರುದ್ಧದ ನಾಳಿನ ಪಂದ್ಯಕ್ಕೆ ಪಾಕಿಸ್ತಾನ ಸಂಭವನೀಯ ತಂಡ ಈ ರೀತಿ ಇದೆ.
 

ಪಾಕಿಸ್ತಾನ ಸಂಭವನೀಯ ತಂಡ:
ಫಕರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ಹ್ಯಾರಿಸ್ ಸೊಹೈಲ್, ಶೋಯಿಬ್ ಮಲ್ಲಿಕ್, ಸರ್ಫರಾಜ್ ಅಹಮ್ಮದ್(ನಾಯಕ), ಆಸಿಫ್ ಆಲಿ, ಶದಬ್ ಖಾನ್, ಹಸನ್ ಆಲಿ, ಉಸ್ಮಾನ್ ಖಾನ್, ಶಾಹೀನ್ ಆಫ್ರಿದಿ
 

Follow Us:
Download App:
  • android
  • ios