Asianet Suvarna News Asianet Suvarna News

ಡಾ ರಾಜ್‌ಕುಮಾರ್ ನಟನೆಯ 'ಮೇಯರ್ ಮುತ್ತಣ್ಣ' ನಿರ್ಮಿಸಿದಾಗ ದ್ವಾರಕೀಶ್ ವಯಸ್ಸೆಷ್ಟು?

ದ್ವಾರಕೀಶ್ ಹಾಗು ವಿಷ್ಣುವರ್ಧನ್ ಅವರಿಬ್ಬರೂ ತುಂಬಾ ಅಪ್ತರಾಗಿದ್ದರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಕಿಟ್ಟು-ಪುಟ್ಟು, ಸಿಂಗಾಪುರದಲ್ಲಿ ರಾಜಾಕುಳ್ಳ ಮುಂತಾದ ಚಿತ್ರಗಳ ಮೂಲಕ ಶುರುವಾದ ದ್ವಾರಕೀಶ್-ವಿಷ್ಣುವರ್ಧನ್ ಸ್ನೇಹ, ಸೂಪರ್ ಹಿಟ್...

Actor and producer Dwarakish produced Dr Rajkumar Movie Mayor Muthanna in his 27th age itself srb
Author
First Published Apr 17, 2024, 3:11 PM IST

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕರಾದ ದ್ವಾರಕೀಶ್ (Dwarakish) ಅವರು 16 ಏಪ್ರಿಲ್ 2024ರಂದು ಇಹಲೋಕ ತ್ಯಜಿಸಿರುವುದು ಗೊತ್ತೇ ಇದೆ. ಇಂದು ದ್ವಾರಕೀಶ್‌ ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ಮೂಲಕ ನಟ, ನಿರ್ಮಾಪಕರಾದ ದ್ವಾರಕೀಶ್ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು. ಸ್ಯಾಂಡಲ್‌ವುಡ್‌ ಚಿತ್ರರಂಗದಕ್ಕೆ ತಮ್ಮ 23ನೇ ವಯಸ್ಸಿಗೇ ಬಂದು ಸಾಕಷ್ಟು ಏಳುಬೀಳುಗಳನ್ನು ನೋಡಿರುವ ದ್ವಾರಕೀಶ್ ಹೆಸರನ್ನು ಎಂದೂ ಯಾರೂ ಮರೆಯಲು ಸಾಧ್ಯವೇ ಇಲ್ಲ. 

ದ್ವಾರಕೀಶ್ ಅವರು ತಮ್ಮ 23ನೇ ವಯಸ್ಸಿಗೇ 'ಮಮತೆಯ ಬಂಧನ' ಸಿನಿಮಾ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕ ಪಟ್ಟಕ್ಕೆ ಲಗ್ಗೆಯಿಟ್ಟರು. ಬಳಿಕ, ತಮ್ಮ 27ನೇ ವಯಸ್ಸಿಗೇ ಡಾ ರಾಜ್‌ಕುಮಾರ್ ಕಾಲ್‌ಶೀಟ್ ಪಡೆದು 'ಮೇಯರ್ ಮುತ್ತಣ್ಣ' ಸಿನಿಮಾ (Mayor Muthanna)ವನ್ನು ನಿರ್ಮಾಣ ಮಾಡಿದರು. ಆ ವೇಳೆ ಡಾ ರಾಜ್‌ಕುಮಾರ್ ಕನ್ನಡದ ಸೂಪರ್ ಸ್ಟಾರ್ ಆಗಿದ್ದರು. ಹಾಗಿದ್ದರೂ ದ್ವಾರಕೀಶ್ ಡಾ ರಾಜ್‌ಕುಮಾರ್ ಕಾಲ್‌ಶೀಟ್ ಪಡೆಯುವಲ್ಲಿ ಸಫಲರಾಗಿದ್ದು ಸಣ್ಣ ವಿಷಯವೇನೂ ಅಲ್ಲ. ಜತೆಗೆ, ಅಂದು ಸಿನಿಮಾ ರಂಗದಲ್ಲಿ ಚಾಲ್ತಿಯಲ್ಲಿದ್ದ ಸಿದ್ದಲಿಂಗಯ್ಯ ಹಾಗು ಭಾರ್ಗವ ಅವರಿಗೆ ಮೊದಲು ಅವಕಾಶ ಕೊಟ್ಟವರೇ ದ್ವಾರಕೀಶ್. 

ಹೆಣ್ಮಕ್ಳೇ ಸ್ಟ್ರಾಂಗು ಗುರೂ ಎಂದು ಹಲವು ವರ್ಷಗಳ ಹಿಂದೆ ಬರೆದಿದ್ದ ಭಟ್ಟರು ಈಗೇನಂದ್ರು ನೋಡ್ರೀ!

ದ್ವಾರಕೀಶ್ ಹಾಗು ವಿಷ್ಣುವರ್ಧನ್ ಅವರಿಬ್ಬರೂ ತುಂಬಾ ಅಪ್ತರಾಗಿದ್ದರು ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಕಿಟ್ಟು-ಪುಟ್ಟು, ಸಿಂಗಾಪುರದಲ್ಲಿ ರಾಜಾಕುಳ್ಳ ಮುಂತಾದ ಚಿತ್ರಗಳ ಮೂಲಕ ಶುರುವಾದ ದ್ವಾರಕೀಶ್-ವಿಷ್ಣುವರ್ಧನ್ ಸ್ನೇಹ, ಸೂಪರ್ ಹಿಟ್ ಸಿನಿಮಾ 'ಆಪ್ತಮಿತ್ರ' ನಿರ್ಮಾಣ ಮಾಡುವವರೆಗೂ ಮುಂದುವರೆದಿತ್ತು. ವಿಷ್ಣು-ದ್ವಾರ್ಕಿ ಸ್ನೇಹವು ಒಮ್ಮೆ ಹಳಸಿ ಮತ್ತೆ ಟ್ರಾಕ್‌ಗೆ ಬಂದಿತ್ತು ಅಂತಲೂ ಕೆಲವರು ಹೇಳುತ್ತಾರೆ. ಅದೇನೇ ಇದ್ದರೂ, ನಟ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ 'ಆಪ್ತ ಸ್ನೇಹಿತರು' ಎಂದೇ ಹೆಸರುವಾಸಿಯಾಗಿದ್ದವರು. 

ಮಹಿಳೆಯರು ಇನ್ನೂರು ಫೌಂಡ್ ಭಾರವನ್ನು ಇನ್ನೊಬ್ಬರ ಮೇಲೆ ಎಸೆಯಲಾರರು; ನಟಿ ಪ್ರಿಯಾಂಕಾ ಚೋಪ್ರಾ!

ಒಟ್ಟಿನಲ್ಲಿ, ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ-ನಿರ್ಮಾಪಕರಾದ ದ್ವಾರಕೀಶ್ ಅವರು ಇಂದು (17 ಏಪ್ರಿಲ್ 2024) ಪಂಚಭೂತಗಳಲ್ಲಿ ಲೀನವಾದರು. ದ್ವಾರಕೀಶ್ ಕುಟುಂಬ ಹಾಗೂ ಕನ್ನಡ ಚಿತ್ರರಂಗದ ಹಲವು ಗಣ್ಯರು ಸೇರಿದಂತೆ ಬಹಳಷ್ಟು ಜನರು ಅಂತಿಮ ದರ್ಶನ ಪಡೆದು ಅವರನ್ನು ಗೌರವಯುತವಾಗಿ ಕಳುಹಿಸಿಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ ಚಿತ್ರರಂಗಕ್ಕೆ ಆಲದಮರದಂತಿದ್ದ ದ್ವಾರಕೀಶ್ ಅವರನ್ನುಇಂದು ಚಿತ್ರರಂಗ ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಚಿತ್ರರಂಗ ಸೇರಿದಂತೆ ಇಡೀ ಕರುನಾಡು ಪ್ರಾರ್ಥಿಸುತ್ತಿದೆ.

ನಾನು ನಟಿಸುತ್ತಿಲ್ಲ, ಆ ಪಾತ್ರಕ್ಕೆ ಬೇರೆಯವರು ಬಂದಿದ್ದಾರೆ; ಶಾಕಿಂಗ್ ಹೇಳಿಕೆ ಕೊಟ್ರಾ ಸಪ್ತಮಿ ಗೌಡ?

Follow Us:
Download App:
  • android
  • ios