Asianet Suvarna News Asianet Suvarna News

ಪೆಂಗ್ವಿನ್ ಜೊತೆ ವಾಸ, ವಾರಕ್ಕೊಮ್ಮೆ ಸ್ನಾನ.. ಇಲ್ಲಿದೆ ಉದ್ಯೋಗವಕಾಶ,ಕೆಲಸ ಖಾಲಿ ಇದೆ!

ಜಗತ್ತಿನಲ್ಲಿ ಕೆಲಸ ಮಾಡಲು ಸಾಕಷ್ಟು ಅವಕಾಶವಿದೆ. ಕೆಲ ಉದ್ಯೋಗ ಸುಲಭವಾಗಿದ್ದರೆ ಮತ್ತೆ ಕೆಲಸ ಸವಾಲಿನಿಂದ ಕೂಡಿರುತ್ತದೆ. ಎಷ್ಟೇ ಹಣ ಸಿಗಲಿದೆ ವಿಶ್ವದ ಈ ಜಾಗದಲ್ಲಿ ಕೆಲಸ ಮಾಡೋದು ಸುಲಭವಲ್ಲ. 

Job Openings In Antarctica Penguin Post Office roo
Author
First Published Mar 18, 2024, 11:34 AM IST

ಹಣದುಬ್ಬರ ಸೇರಿದಂತೆ ನಾನಾ ಕಾರಣಕ್ಕೆ ಐಟಿ ಕಂಪನಿ ಜೊತೆ ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಹೊರದಬ್ಬುತ್ತಿವೆ. ಮತ್ತೆ ಕೆಲ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಕೊರತೆ ಇದ್ರೂ ಅದಕ್ಕೆ ಜನರು ಬರ್ತಿಲ್ಲ. ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ ಸಿಗ್ತಿಲ್ಲ ಎನ್ನುವ ಕೂಗು ಸಾಮಾನ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿ ಒಳ್ಳೆ ಸಂಬಳ ಇರುವ, ಉತ್ತಮ ಸೌಲಭ್ಯವಿರುವ ಕೆಲಸವನ್ನು ಹುಡುಕ್ತಾನೆ. ಎಲ್ಲ ವ್ಯವಸ್ಥೆ ಇದ್ದು, ವರ್ಷ ವರ್ಷಕ್ಕೆ ಸಂಬಳ ಹೆಚ್ಚಾಗ್ತಿದ್ದರೆ ನಿವೃತ್ತಿಯವರೆಗೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುವ ಜನರಿದ್ದಾರೆ. ಹಳ್ಳಿಗಳಲ್ಲಿ, ಯಾವುದೇ ಸೌಲಭ್ಯ ಇಲ್ಲದ, ಇಂಟರ್ನೆಟ್, ಫೋನ್ ಸಂಪರ್ಕ ಸಿಗದ ಪ್ರದೇಶದಲ್ಲಿ ಕೆಲಸ ಮಾಡಲು ಯಾರೂ ಮನಸ್ಸು ಮಾಡೋದಿಲ್ಲ. ಕೆಲಸಕ್ಕೆ ಸೇರುವ ಜನರು ಕೂಡ ಕೆಲವೇ ದಿನಗಳಲ್ಲಿ ಕೆಲಸಬಿಟ್ಟು ಬಂದಿರ್ತಾರೆ. ನೀವೂ ಸಾಹಸಿಯಾಗಿದ್ದು, ಕೆಲಸ ಮುಖ್ಯ, ಜಾಗ ಯಾವುದಾದ್ರೂ ಓಕೆ ಎನ್ನುತ್ತಿದ್ದರೆ ಇಲ್ಲೊಂದು ಉದ್ಯೋಗದ ಮಾಹಿತಿ ಇದೆ.

ಮನುಷ್ಯ ಬದುಕಲು ಸಾಧ್ಯವಾಗದ ಜಾಗಗಳು ಜಗತ್ತಿನಲ್ಲಿ ಸಾಕಷ್ಟಿವೆ. ಕೆಲವೊಂದು ಪ್ರದೇಶಕ್ಕೆ ಮಾನವ ಕಾಲಿಡಲು ಸಾಧ್ಯವೇ ಇಲ್ಲ. ಇದ್ರಲ್ಲಿ ಅಂಟಾರ್ಟಿಕಾ (Antarctica) ಕೂಡ ಸೇರಿದೆ. ಇಲ್ಲಿ ಸುತ್ತಲೂ ಹಿಮವಿದೆ. ಜೀವನಕ್ಕೆ ಸಂಬಂಧಿಸಿದ ಇತರೆ ಸೌಲಭ್ಯಗಳೂ ಇಲ್ಲಿ ಲಭ್ಯವಿಲ್ಲ. ಆದ್ರೀಗ ಆ ಪ್ರದೇಶದಲ್ಲಿ ಕೆಲಸಕ್ಕೆ ಅರ್ಜಿ (Application) ಆಹ್ವಾನಿಸಲಾಗಿದೆ. 

ವಿಶ್ವದ ವಿಷಪೂರಿತ ಗಾರ್ಡನ್ ಇದು.. ಗಿಡ ಮುಟ್ಟಿದ್ರೂ ಸಾಕು, ಸತ್ತೇ ಹೋಗುತ್ತಾರೆ! ಅದ್ರೂ ಯಾಕಿದೆ?

ಈ ಕೆಲಸಕ್ಕೆ ಸೇರುವ ಅಭ್ಯರ್ಥಿಗಳು ಪೆಂಗ್ವಿನ್ (Penguin) ಗಳ ನಡುವೆ ಬದುಕಬೇಕು. ಅಂಟಾರ್ಟಿಕಾದ ಪ್ರಸಿದ್ಧ ಪೆಂಗ್ವಿನ್ ಅಂಚೆ ಕಚೇರಿಯಲ್ಲಿ ಈ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕೆಲಸ ಮಾಡುವ ವ್ಯಕ್ತಿ ಎರಡು ವಾರಕ್ಕೊಮ್ಮೆ ಸ್ನಾನ ಮಾಡಬೇಕು. ಪ್ರತಿ ವರ್ಷ ಅಂಟಾರ್ಕ್ಟಿಕ್ ಹೆರಿಟೇಜ್ ಟ್ರಸ್ಟ್‌ನಲ್ಲಿ ಉದ್ಯೋಗಗಳಿಗಾಗಿ ಅರ್ಜಿ ಆಹ್ವಾನಿಸಲಾಗುತ್ತದೆ. ಈ ಬಾರಿ ಮೂರು ಪೋಸ್ಟ್ ಗೆ ಅರ್ಜಿ ಆಹ್ವಾನಿಸಲಾಗಿದೆ. 

ಬೇಸಿಕ್ ಲೀಡರ್, ಶಾಪ್ ಮ್ಯಾನೇಜರ್ ಹಾಗೂ ಜನರಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಕೆಲವೊಂದು ಷರತ್ತಿದೆ. ಈ ಕೆಲಸಕ್ಕೆ ಬ್ರಿಟನ್ ನಿವಾಸಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳು 80,000 ಪತ್ರಗಳು ಮತ್ತು ಪೋಸ್ಟ್‌ಕಾರ್ಡ್‌ಗಳಿಗೆ ಪ್ರತಿಕ್ರಿಯಿಸಬೇಕು. ಅಲ್ಲದೆ ಇಲ್ಲಿ ತಂಗಿರುವ ಸುಮಾರು 18,000 ಕ್ರೂಸ್ ಪ್ರಯಾಣಿಕರನ್ನು ಅವರು ಸ್ವಾಗತಿಸಬೇಕಾಗುತ್ತದೆ.

ಮ್ಯಾಂಚೆಸ್ಟರ್‌ನಲ್ಲಿ ಚಾರಿಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕೇಟೀ ಶಾ ಇದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅವರು ಕೆಲಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಒಂದು ಕಡೆ ಅಂಟಾರ್ಕ್ಟಿಕಾದ ನಕ್ಷೆ ಮತ್ತು ಇನ್ನೊಂದರಲ್ಲಿ ಪರಿಶೋಧಕ ಅರ್ನೆಸ್ಟ್ ಶಾಕಲ್ಟನ್ ಅವರ ಫೋಟೋ ಇದೆ. 

ಮತ್ತೆ ಸಮುದ್ರಕ್ಕೆ ಧಮುಕಲು ಸಿದ್ಧವಾದ ಟೈಟಾನಿಕ್‌!

ಬಾಲ್ಯದಿಂದಲೂ ಅಂಟಾರ್ಕ್ಟಿಕಾದಲ್ಲಿ ಸಮುದ್ರ ಜೀವಶಾಸ್ತ್ರಜ್ಞನಾಗಿ ಕೆಲಸ ಮಾಡಲು ನಾನು ಬಯಸಿದ್ದೆ. ಆ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ನನಗೆ ಸಾಧ್ಯವಾಗಿರಲಿಲ್ಲ. ಸದಾ ಅಲ್ಲಿನ ವನ್ಯಜೀವಿಗಳು, ದೃಶ್ಯಾವಳಿಗಳು ಮತ್ತು ಸ್ಥಳ ನನಗೆ ಆಕರ್ಷಕವಾಗಿ ಕಾಣುತ್ತಿತ್ತು. ಈ ಜಾಗ ಪರಿಸರಕ್ಕೆ ಬಹಳ ಮುಖ್ಯ. ಈ ಖಂಡವು ಪರಿಸರಕ್ಕೆ ಬಹಳ ಮುಖ್ಯವಾಗಿದೆ. ಇಲ್ಲಿ ಕೆಲಸಕ್ಕೆ ಆಯ್ಕೆ ಆಗುವ ಉದ್ಯೋಗಿಗಳು ಟಿಕೆಟ್‌ಗಳನ್ನು ಮಾರಬೇಕು, ಕಟ್ಟಡಗಳನ್ನು ನಿರ್ವಹಿಸಬೇಕು ಮತ್ತು ಗಿಫ್ಟ್ ಶಾಪ್ ನಡೆಸಬೇಕು ಎಂದು ಅವರು ಹೇಳಿದ್ದಾರೆ. 

ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳು  ಹಡಗುಗಳಲ್ಲಿ ಬರುವ ಕ್ಯಾನ್‌ಗಳಿಂದ ನೀರು ತೆಗೆದುಕೊಳ್ಳಬೇಕಾಗುತ್ತದೆ. ಹಡಗು ಒಂದು ವಾರಕ್ಕೊಮ್ಮೆ ಕೆಲವೊಮ್ಮೆ ಎರಡು ವಾರಕ್ಕೊಮ್ಮೆ ಬರುತ್ತದೆ. ಇದೇ ಕಾರಣಕ್ಕೆ ಅವರು ವಾರಕ್ಕೊಮ್ಮೆ ಸ್ನಾನ ಮಾಡಬೇಕಾಗುತ್ತದೆ. ನೀರಿನ ಕೊರತೆ ಇದ್ರೂ ಉದ್ಯೋಗಿಗಳು ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios