Asianet Suvarna News Asianet Suvarna News

ಮಂಡ್ಯ ಸ್ಪರ್ಧೆ ಬಿಟ್ಟು ಬಿಜೆಪಿ ಬೆಂಬಲಿಸುತ್ತಿರುವ ಸುಮಲತಾಗೆ ಇಡಿ, ಐಡಿ ಭಯವೇ?: ಈಶ್ವರ್ ಖಂಡ್ರೆ

ಮಂಡ್ಯ ಲೋಕಸಭಾ ಕ್ಷೇತದಿಂದ ಚುನಾವಣೆ ಸ್ಪರ್ಧೆಗೆ ಹಿಂದೆ ಸರಿದು ಬಿಜೆಪಿಗೆ ಬೆಂಬಲಿಸುವುದಾಗಿ ಸುಮಲತಾ ಘೋಷಣೆ ವಿಚಾರಕ್ಕೆ  ಇಡಿ, ಐಟಿ ಒತ್ತಡ ಏನಾದರೂ ಮಾಡಿದಾರೊ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ ಸಚಿವ ಈಶ್ವರ್ ಖಂಡ್ರೆ.

Lok sabha election Eshwar Khandre reaction about Sumalatha supporting BJP after leaving Mandya  gow
Author
First Published Apr 3, 2024, 5:50 PM IST

ವರದಿ: ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್

ಬೀದರ್ (ಏ.3):  ಮಂಡ್ಯ ಲೋಕಸಭಾ ಕ್ಷೇತದಿಂದ ಚುನಾವಣೆ ಸ್ಪರ್ಧೆಗೆ ಹಿಂದೆ ಸರಿದು ಬಿಜೆಪಿಗೆ ಬೆಂಬಲಿಸುವುದಾಗಿ ಸುಮಲತಾ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಬೀದರ್ ನಲ್ಲಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅದೆಲ್ಲ ಸುಮಲತಾ ಅವರಿಗೆ ಬಿಟ್ಟ ವಿಚಾರ ಜೆಡಿಎಸ್ ಪಕ್ಷದವರು ಸುಮಲತಾಗೆ ಯಾವ ರೀತಿ ಹೀಯಾಳಿಸಿದ್ದಾರೆ, ಕಷ್ಟ ಕೊಟ್ಟಿದ್ದಾರೆ, ತೊಂದರೆ ಕೊಟ್ಟಿದ್ದಾರೆ ಅದೆಲ್ಲ ಅವರ ಗಮನಕ್ಕಿದೆ, ಅದೆಲ್ಲ ಇಟ್ಟುಕೊಂಡು ಮತ್ತೆ ಬಿಜೆಪಿಗೆ ಹೋಗುತ್ತೇನೆಂದು ಹೇಳುತ್ತಿದ್ದಾರೆ ಅಂದ್ರೆ ಅವರಿಗೆ ಯಾವ ಒತ್ತಡ ಇದೆ ಗೊತ್ತಿಲ್ಲ. ಇಡಿ, ಐಟಿ ಒತ್ತಡ ಏನಾದರೂ ಮಾಡಿದಾರೊ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಯಾರಿಗೂ ಮೋಸ ಮಾಡಿಲ್ಲ, ಅಂಬರೀಶ್ ಅವರಿಗೆ ಕಾಂಗ್ರೆಸ್ ಏನು ಕೊಡುಗೆ ಕೊಟ್ಟಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ, ಕಾಂಗ್ರೆಸ್ ಗೆ ಬಹಳಷ್ಟು ಜನ ಮೋಸ, ವಂಚನೆ ಮಾಡಿದ್ದಾರೆ, ಬೆನ್ನಿಗೆ ಚೂರಿ ಹಾಕಿದ್ದಾರೆ ಯಾವತ್ತಿಗೂ ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಎಂದು ಹೇಳಿದ್ದಾರೆ.

ಸುಮಲತಾ ಸಭೆ ನಡೆಸಿದ ಬೆನ್ನಲ್ಲೇ, ಮಂಡ್ಯ ಪ್ರವಾಸ ಹೊರಟ ಹೆಚ್‌ಡಿಕೆ

ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಬಿದ್ದು ಹೋಗುತ್ತದೆ ಎಂದು ಖೂಬಾ ಹೇಳಿಕೆ ವಿಚಾರ:
ಖೂಬಾ ಹತಾಶೆಯಂತಹ ಹೇಳಿಕೆ ಕೊಡುತ್ತಿದ್ದಾರೆ, ಮಾನಸಿಕ ಸಮತೋಲನ ಕಳೆದುಕೊಂಡಿದಾರೆ. 138 ಜನ ಇದ್ದೇವೆ ಈಗ, 138 ಜನರಿಗೆ ಏನು ಮಾಡುತ್ತಾರೆ ಇವರು, ಔರಾದ್ ಶಾಸಕ ಪ್ರಭು ಚವ್ಹಾಣ್ಗೆ ಹೇಗಾದರು ಮಾಡಿ ಉಪಚುನಾವಣೆ ಮಾಡಿ ಶಾಸಕ ಸ್ಥಾನದಿಂದ ಕೇಳಗಿಳಿಸಲು ಹೊರಟಿದ್ದವರು ಇವರು ಅದೇ ರೀತಿ ಏನಾದರೂ ನಿರೀಕ್ಷೆ ಮಾಡುತ್ತಾರಾ,..?, ಇವರು ನಿರೀಕ್ಷೆ ಮಾಡಿದ್ದು ಏನೂ ಆಗಲ್ಲ, ಐದು ವರ್ಷ ಒಳ್ಳೆಯ ಆಡಳಿತ ಕೊಡುತ್ತೇವೆ. ಭದ್ರವಾಗಿದೆ, ಸುಭದ್ರವಾಗಿರುವ ಸರ್ಕಾರ ಯಾರಿಂದಲೂ ಅಳ್ಳಾಡಿಸಲು ಸಾಧ್ಯವಿಲ್ಲ ಎಂದು ಚವ್ಹಾಣ್ ಮತ್ತು ಖೂಬಾ ನಡುವಿನ ಭಿನ್ನಮತದ ವಿಚಾರ ಪ್ರಸ್ತಾಪಿಸಿ ಖಂಡ್ರೆ ಖೂಬಾಗೆ ಟಾಂಗ್ ಕೊಟ್ಟಿದಾರೆ.

ಯುಗಾದಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಇರುವಾಗ ಮಾಂಸಹಾರಿಗಳಿಗೆ ಶಾಕಿಂಗ್ ...

ಇನ್ನು ಸಿದ್ದರಾಮಯ್ಯ ಕಾರ್ಯಕ್ರಮಯೊಂದರಲ್ಲಿ ನಾನು ಮುಂದುವರಿಬೇಕಾದರೆ ಮೆಜಾರಟಿ ಕೊಡಬೇಕೆಂದು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಖಂಡ್ರೆ ಇಷ್ಟೊಂದು ಕಾರ್ಯಕ್ರಮ ಕೊಟ್ಟಿದ್ದೇವೆ. ನಮಗೆ ಉಳಿಸಿ, ಮತಷ್ಟು ಕಾರ್ಯಕ್ರಮ ಕೊಡುತ್ತೇವೆಂದು ಸಿದ್ದರಾಮಯ್ಯ ಹೇಳಿದಾರೆ ಎಂದರು.

Follow Us:
Download App:
  • android
  • ios