Asianet Suvarna News Asianet Suvarna News

ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಂಸದೆ ಸುಮಲತಾ ಕಳವಳ

ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ತಪ್ಪು ಅನ್ನೋದು ಸರಿಯಲ್ಲ. ಅದೇ ರೀತಿ ಒಂದು ಸಮುದಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಕೂಡ ತಪ್ಪು. ಯುವತಿ ಹತ್ಯೆ ಬಳಿಕ ಕಾಂಗ್ರೆಸ್ ನಾಯಕರ ಹೇಳಿಕೆ ನೀಡುತ್ತಿರುವ ರೀತಿಗೆ ಸಂಸದೆ ಕಳವಳ ವ್ಯಕ್ತಪಡಿಸಿದರು.

Karnataka MP Sumalathaambareesh reacts about hubballi neha hiremath murder case at mysuru rav
Author
First Published Apr 20, 2024, 5:29 PM IST

ಮೈಸೂರು (ಏ.20): ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಕೇಸ್ ವಿಚಾರವನ್ನು ನಾನು ಗಮನಿಸಿದ್ದೇನೆ. ಹಾಡಹಗಲೇ ಯುವತಿಯ ಹತ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಫೋಟೊ, ವಿಡಿಯೋಗಳು ಹರಿದಾಡುತ್ತಿವೆ. ಈಗಾಗಲೇ ಆಕೆ ಹತ್ಯೆ ನಡೆದುಹೋಗಿದೆ. ಇಂತ ಸಂದರ್ಭದಲ್ಲಿ ಯುವತಿಯ ಕ್ಯಾರೆಕ್ಟರ್ ಬಗ್ಗೆ ಮಾತನಾಡೋದು ಬಹಳ ನೋವಿನ ವಿಚಾರ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.

ಇಂದು ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ತಪ್ಪು ಅನ್ನೋದು ಸರಿಯಲ್ಲ. ಅದೇ ರೀತಿ ಒಂದು ಸಮುದಾಯವನ್ನು ಸಮರ್ಥನೆ ಮಾಡಿಕೊಳ್ಳುವುದು ಕೂಡ ತಪ್ಪು. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದ ಆರೋಪಿಯ ಎಫ್ಎಸ್ಎಲ್ ವರದಿ ಬರುವ ಮುನ್ನವೇ ಸಮರ್ಥನೆ ಮಾಡಿಕೊಂಡಿದ್ರಿ. ಈಗ ಇದು ಲವ್ ಜಿಹಾದ್ ಅಲ್ಲ ಲವ್, ವೈಯಕ್ತಿಕ ಕಾರಣಕ್ಕೆ ಆಗಿರೋ ಕೊಲೆ ಅಂತಾ ಹೇಳಿಕೆ ನೀಡಿರೋದು ತಪ್ಪು. ಸರ್ಕಾರ ಹೇಳಿಕೆ ಕೊಡುವ ಮೊದಲು ತಕ್ಷಣ ತಪ್ಪಿಸ್ಥನ ವಿರುದ್ಧ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು.

ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯವರಿಗೆ ಸಿಕ್ಕ ಪ್ರಬಲ ಅಸ್ತ್ರಗಳೆಷ್ಟು? ಮುಸ್ಲಿಮರ ತುಷ್ಟೀಕರಣ ಆರೋಪಕ್ಕೆ ಸಿಕ್ಕ ಸಾಕ್ಷಿಗಳೆಷ್ಟು?

 ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮಳವಳ್ಳಿಯಲ್ಲಿ ದರ್ಶನ್ ಪ್ರಚಾರ ನಡೆಸುತ್ತಿರುವ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದೆ, ದರ್ಶನ್ ಈಗಾಗಲೇ ಈ ವಿಚಾರವನ್ನ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಅವರು ಯಾವುದೇ ಪಕ್ಷದ ಪರ ಪ್ರಚಾರ ಮಾಡಿಲ್ಲ. ಅವರಿಗೆ ಯಾರು ಇಷ್ಟವೋ ಅವರ ಪರ ಪ್ರಚಾರ ಮಾಡುತ್ತಾರೆ. ನಾನು ಸ್ಪರ್ಧೆ ಮಾಡಿದ್ದರೆ ನಮ್ಮ ಪರ ನಿಲ್ಲುತ್ತೇನೆ ಎಂದಿದ್ದರು. ಅದೇ ರೀತಿ ಅವರು ಪ್ರಚಾರ ಮಾಡಿದರು. ಅವರೇನೂ ಸಣ್ಣ ಮಗುವಲ್ಲ. ಅವರಿಗೆ ಯಾರು ಸಹಾಯಕ್ಕೆ ಬಂದಿದ್ದಾರೋ ಅವರ ಪರವಾಗಿ ಪ್ರಚಾರ ಮಾಡ್ತಿದ್ದಾರೆ. ಇದನ್ನು ಮೊದಲಿಂದಲೂ ಹೇಳುತ್ತಿದ್ದಾರೆ. ಈ ವಿಚಾರಕ್ಕೆ ನಾನು ಅವರಿಗೆ ಏನನ್ನೂ ಹೇಳುವುದಿಲ್ಲ. ಮಂಡ್ಯದಲ್ಲಿ ನಾವು ತಟಸ್ಥವಾಗಿಲ್ಲ. ನಮ್ಮ ಅಭಿಮಾನಿಗಳು ಕೆಲಸ ಮಾಡುತ್ತಿದ್ದಾರೆ. ನಾನೇ ಕಾರಲ್ಲಿ‌ ಹೋಗಿ ಮೈಕ್‌ಹಿಡಿದು ಪ್ರಚಾರ ಮಾಡೊಲ್ಲ. ಎನ್‌ಡಿಎ ಅಥವಾ ಪಕ್ಷ ತೀರ್ಮಾನ ಮಾಡಬೇಕು. ಅವರು ಆಹ್ವಾನಿಸಿದರೆ ನಾನು ಹೋಗುತ್ತೇನೆ ಎಂದರು.

ನಾನು ಕಾಂಟ್ರವರ್ಸಿ ಮಾಡಲು ಇಲ್ಲಿಗೆ ಬಂದಿಲ್ಲ. ಕುಮಾರಸ್ವಾಮಿ - ಸುಮಲತಾ ಕಾಂಟ್ರವರ್ಸಿ ಮಾಡಲೇಬೇಕೆಂದರೆ ನಾನು ಮಾತನಾಡಲ್ಲ. ಬಿಜೆಪಿ ಪಕ್ಷ ತೀರ್ಮಾಸಿದಂತೆ ನಾನು ಕೆಲಸ ಮಾಡುತ್ತೇನೆ. ನನ್ನನ್ನ ಪಕ್ಷ ಮಂಡ್ಯದಿಂದ ಹೊರಗೆ ಇಟ್ಟಿಲ್ಲ. ಆ ರೀತಿ ಇದ್ದಿದ್ದರೆ ನಾನ್ಯಾಕೆ ಬಿಜೆಪಿ‌ ಸೇರಬೇಕಿತ್ತು? ನಾನು ಎನ್ ಡಿಎಗೆ ಯಾಕೆ ಸಪೋರ್ಟ್ ಮಾಡಬೇಕಿತ್ತು. ಕೆಲವರು ಕಾಂಟ್ರವರ್ಸಿ ಮಾಡಲು ಮಾತನಾಡುತ್ತಿರಬಹುದು. ನಾನು ಆ ರೀತಿ ನಡೆದುಕೊಳ್ತಾ ಇಲ್ಲ ಎಂದರು.

ನಾನು ಪೊಲಿಟಿಕಲ್ ಅನಾಲಿಸ್ಟ್ ಅಲ್ಲ. ಕೇವಲ ಸಂಸದೆ ಆಗಿದ್ದೇನೆ. ಕುಮಾರಸ್ವಾಮಿ ಅವರ ಪರ ವಾತಾವರಣ ಹೇಗಿದೆ ಎಂಬುದನ್ನ ನೀವೇ ಹೇಳಬೇಕು. ನಾನು ಸೀಟು ಬಿಟ್ಟು ಕೊಟ್ಟು‌ ಬಿಜೆಪಿ‌ ಸೇರಿದ್ದೇನೆ ಎಂದರೆ ಬೆಂಬಲ ಇದೆ ಅಂತ ಅರ್ಥ. ಪ್ರೈಮ್ ಮಿನಿಸ್ಟರ್ ಬಂದ ಕಡೆ ನನ್ನ ಅವಶ್ಯಕತೆ ಏನಿದೆ? ಅವರೇ ಬಂದಿದ್ದಾರೆ ಅಂದ ಮೇಲೆ ನಾನ್ಯಾಕೆ?
ಎಂದು ಮಂಡ್ಯ ಪ್ರಚಾರದ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ ಸುಮಲತಾ.

ಓಟು ಹಾಕೊಲ್ಲ ಹಾಕಿಸೊಲ್ಲ ಬರೀ ಘೋಷಣೆ ಕೂಗ್ತೀರಿ: ಕೈ ಕಾರ್ಯಕರ್ತರ ಮೇಲೆ ಡಿಕೆಶಿ ಗರಂ

Follow Us:
Download App:
  • android
  • ios