Asianet Suvarna News Asianet Suvarna News

ಕಲ್ಯಾಣ ಕರ್ನಾಟಕ ನನಗೆ ಪ್ರೀತಿ ವಿಶ್ವಾಸದ ತವರೂರು: ಕುಮಾರಸ್ವಾಮಿ

ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ. ಯಾವುದು ಸರಿ ಇಲ್ಲದ ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಆರಿಸಿ ಬರುವುದು ಕಷ್ಟ ಸಾಧ್ಯ ಎಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 

Former CM HD Kumaraswamy Talks Over Kalyana Karnataka grg
Author
First Published May 5, 2024, 11:46 AM IST

ಜೇವರ್ಗಿ(ಮೇ.05):  ಕಲ್ಯಾಣ ಕರ್ನಾಟಕ ನನಗೆ ಪ್ರೀತಿ ವಿಶ್ವಾಸದ ತವರುರಾಗಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ಕೃಷ್ಣಾ ಮೇಲ್ದಡ್ಡೆ ಯೋಜನೆ ಜಾರಿಗೆ ತರುವ ಮೂಲಕ ಈ ಭಾಗಕ್ಕೆ ನೀರಾವರಿ ಒದಗಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಅವರು ಪಟ್ಟಣದ ಡಾ.ಅಂಬೇಡ್ಕರ್‌ ಭವನದ ಆವರಣದಲ್ಲಿ ಕಲಬುರಗಿ ಲೋಕಸಭಾ ಚುನಾವಣೆ ನಿಮಿತ್ತ ಅಭ್ಯರ್ಥಿ ಡಾ.ಉಮೇಶ ಜಾಧವ್ ಪರ ಜೆಡಿಎಸ್‌ ಜೇವರ್ಗಿ ಮತಕ್ಷೇತ್ರ ಚುನಾವಣಾ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿ ಇಲ್ಲ. ಯಾವುದು ಸರಿ ಇಲ್ಲದ ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಆರಿಸಿ ಬರುವುದು ಕಷ್ಟ ಸಾಧ್ಯ ಎಂದು ಹೇಳಿದರು.

ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ದಾರಿ ತಪ್ಪುತ್ತಿದೆ: ಕುಮಾರಸ್ವಾಮಿ

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾದವ್ ಅವರು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿ ಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಡಾ.ಉಮೇಶ ಜಾದವ್ ಅವರನ್ನು ನಾವೆಲ್ಲರೂ ಭಾರಿ ಬಹುಮತದಿಂದ ಗೆಲ್ಲಿಸಬೇಕಾಗಿದೆ. ಕೇಂದ್ರದಲ್ಲಿ 30 ಲಕ್ಷ ಉದ್ಯೋಗ ಕೂಡುವ ಭರವಸೆ ನೀಡಿದ ಕಾಂಗ್ರೆಸ್ ರಾಜ್ಯದಲ್ಲಿ ಖಾಲಿ ಇರುವ 2.75 ಲಕ್ಷ ಉದ್ಯೋಗ ತುಂಬಲಾಗಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಜೆಡಿಎಸ್ ರಾಜ್ಯ ಕಾರ‍್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರ ಜೊತೆಗೂಡಿ ಈ ಬಾರಿ ಜೇವರ್ಗಿ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಉಮೇಶ ಜಾದವ ಅವರಿಗೆ 30 ಸಾವಿರ ಲೀಡ್ ಕೊಡುವ ಮೂಲಕ ಅವರ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಮೋದಿ ಉದ್ರಿ ಭಾಷಣದಿಂದ ಬಡವರ ಹೊಟ್ಟೆ ತುಂಬೊಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾದವ್ ಮಾತನಾಡಿ, ಮಾಜಿ ಪ್ರಧಾನಿ ದೇವೆಗೌಡ ಅವರು ಮೋದಿ ಅವರ ಜೊತೆಗೂಡಿ ಬಲಿಷ್ಟ ಹಾಗೂ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದು, ತಾವೆಲ್ಲರು ತಮ್ಮನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಭಾರತ ಮಾಲಾ ರಸ್ತೆ, ಜಲ ಜೀವನ ಮಷಿನ್ ಯೋಜನೆಯಡಿ ಕುಡಿಯುವ ನೀರು ಸೇರಿದಂತೆ ಹತ್ತು ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ 70 ವರ್ಷ ಮಾಡದ ಕರ‍್ಯಗಳನ್ನು ಕೇಂದ್ರ ಬಿಜೆಪಿ ಸರ್ಕಾರ 10 ವರ್ಷದಲ್ಲಿ ಮಾಡಿದೆ ಎಂದರು.

ಕಾರ‍್ಯಕ್ರಮದಲ್ಲಿ ಶಾಸಕ ಶಶಿಲ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಕೃಷ್ಣ ರಡ್ಡಿ, ಶಿವಾನಂದ ನಾಟಿಕಾರ, ರಮೇಶಬಾಬು ವಕೀಲ್, ದಂಡಪ್ಪ ಸಾಹು ಕುರಳಗೇರಾ, ನಾನಾಗೌಡ ಅಲ್ಲಾಪುರ, ದೇವಿಂದ್ರಪ್ಪಗೌಡ ಮಾಗಣಗೇರಾ, ರೌಫ್ ಹವಾಲ್ದಾರ್, ಗೋಲ್ಲಾಳಪ್ಪ ಕಡಿ, ವೀಜಯಲಕ್ಷ್ಮೀ ಆಂದೋಲಾ, ಹಳ್ಳೆಮ್ಮಗೌಡತಿ ಮಲ್ಲಾಬಾದ, ಧರ್ಮಣ್ಣ ದೊಡ್ಡಮನಿ, ಸಿದ್ದಣ್ಣ ಹೂಗಾರ, ಬಸವರಾಜ ಕಂದಗಲ್, ಬಸವರಾಜ ಪಾಟೀಲ್ ನರಿಬೋಳ, ಎಸ್.ಎಸ್.ಸಲಗರ, ಪುಂಡಲಿಕ್ ಗಾಯಕವಾಡ, ಧರ್ಮರಾಯ ಜೋಗೂರ, ಮಹಾದೇವಪ್ಪ ಕೊಡಚಿ, ಶಿವಾನಂದ ದ್ಯಾಮಗೊಂಡ, ಶರಣಗೌಡ ಯಲಗೋಡ, ಪ್ರಭು ಜಾದವ, ರೇವಣಸಿದ್ದ ಸಂಕಾಲಿ, ಸಿದ್ದಣ್ಣ ಗಡ್ಡದ, ಶಿವಾನಂದ ಮಾಕಾ, ಶಿವಾನಂದ ಮುದೋಳ, ಗುಂಡಣ್ಣ ಜಾನಕಿ, ಬಸವರಾಜ ಜಮಶೆಟ್ಟಿ, ಭೀಮರಾವ ಗುಜಗೊಂಡ, ವಿಜಯಕುಮಾರ ಹಂದನೂರ, ಅಬ್ದುಲ್ ಖಯುಮ್ ಸೇರಿದಂತೆ ಜಾತ್ಯಾತೀತ ಜನತಾ ದಳದ ಸ್ವಾಭಿಮಾನಿ ಸಾವಿರಾರು ಕರ‍್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
 

Follow Us:
Download App:
  • android
  • ios