Asianet Suvarna News Asianet Suvarna News

ಮೋದಿ ಪ್ರಧಾನಿಯಾಗಿ 3 ತಿಂಗಳಲ್ಲಿ ಕಾಂಗ್ರೆಸ್ ವಿಭಜನೆ: ಬೊಮ್ಮಾಯಿ

ದೇಶದ ಸಮಗ್ರ ಅಭಿವೃದ್ಧಿ, ನೆಮ್ಮದಿಯ ಬದುಕಿಗಾಗಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಾರೆ: ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ 

Congress Will be Split in 3 Months after Narendra Modi became PM says Basavaraj Bommai grg
Author
First Published Mar 19, 2024, 11:16 AM IST

ಗಜೇಂದ್ರಗಡ(ಮಾ.19): ಮೋದಿ ಅವರು ಮತ್ತೆ ಪ್ರಧಾನಿಯಾಗಿ ಆಯ್ಕೆಯಾಗ್ತಾರೆ. ಮೂರು ತಿಂಗಳ ಬಳಿಕ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ವಿಭಜನೆಯಾಗಲಿದೆ. ಪರಿಣಾಮ ಸಂಸದನಾಗಿ ನಾನು ಮತ್ತೆ ರೋಣಕ್ಕೆ ಬರುವುದು ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. 

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಿಗುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯದ ಜನತೆ ಕುಡಿವ ನೀರಿನ ಗ್ಯಾರಂಟಿ ಕೇಳುತ್ತಿದ್ದಾರೆ: ಮಾಜಿ ಸಿಎಂ ಬೊಮ್ಮಾಯಿ

ದೇಶದ ಅಭಿವೃದ್ಧಿ, ನೆಮ್ಮದಿ ಬದುಕಿಗಾಗಿ ಮೋದಿಗೆ ಜನಬೆಂಬಲ: ಬಸವರಾಜ ಬೊಮ್ಮಾಯಿ

ಗದಗ: ದೇಶದ ಸಮಗ್ರ ಅಭಿವೃದ್ಧಿ, ನೆಮ್ಮದಿಯ ಬದುಕಿಗಾಗಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಾರೆ ಎಂದು ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಸೋಮವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬೇರೆ ಕ್ಷೇತ್ರದಲ್ಲಿ ಅಧಿಕಾರಕ್ಕೆ ರಾಜಕಾರಣ ಇದ್ದರೆ, ಗದಗ ಕ್ಷೇತ್ರದಲ್ಲಿ ಸಂಘರ್ಷದ ರಾಜಕಾರಣ ಇದೆ. ಬಿಜೆಪಿ ಕಾರ್ಯಕರ್ತರು ತತ್ವ-ಸಿದ್ಧಾಂತಗಳನ್ನು ಬಿಡದೆ, ಪಕ್ಷದ ಬಲವರ್ಧನೆ ದುಡಿಯುತ್ತಾರೆ ಎಂದು ಮಾಜಿ ಸಿಎಂ, ಲೋಕಸಭೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಒಬಿಸಿ ವೋಟ್‌ಬ್ಯಾಂಕ್ ಮಾಡಿಕೊಳ್ಳುವ ಕಾಂಗ್ರೆಸ್‌ ಹುನ್ನಾರ ಫಲಿಸುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಅಮೃತ ಯೋಜನೆಯಡಿ ₹191 ಕೋಟಿ ಅನುದಾನ ಬಂದಿದೆ. ಕಿಸಾನ್ ಸಮ್ಮಾನ ಯೋಜನೆಯಿಂದ 1.24 ಲಕ್ಷ ರೈತರಿಗೆ ₹347 ಕೋಟಿ ಅನುದಾನ ವಿತರಣೆ ಆಗಿದೆ‌. ಬಡವರಿಗೆ ಉಜ್ವಲ ಗ್ಯಾಸ್ ವಿತರಣೆ ಆಗಿದೆ. ಕೇಂದ್ರದಿಂದಲೇ ಬಡವರಿಗೆ ಅಕ್ಕಿ ವಿತರಣೆ ಆಗುತ್ತಿದೆ ಎಂದು ಅವರು ಹೇಳಿದರು. ಪ್ರಧಾನಿ ಅವರ ಅಭಿವೃದ್ಧಿ ಕಾರ್ಯಗಳು ದೇಶದ ಭದ್ರತೆ ಕುರಿತು ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಗದಗ ಅಭಿವೃದ್ಧಿ ಕಾಣುತ್ತದೆ ಎಂದರು.

ರಸ್ತೆ, ರೈಲ್ವೆ, ನೀರು ಯೋಜನೆಗಳಲ್ಲಿ ಬಿಜೆಪಿಯ ಪಾಲು ಅಧಿಕ. ತೀವ್ರಗತಿಯಲ್ಲಿ ಅಭಿವೃದ್ಧಿ ಆಗಬೇಕಾದರೆ ಹೋರಾಟ, ತಿಕ್ಕಾಟ ಸಾಮಾನ್ಯ. ಗದಗ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಗಮನವಿಟ್ಟು ಕೆಲಸ ಮಾಡುವುದಾಗಿ ಭರವಸೆ ನೀಡಿದರು.

Follow Us:
Download App:
  • android
  • ios