Asianet Suvarna News Asianet Suvarna News

ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್ ಆಫರ್ ಮಾಡಿದರೂ ನಾನೇ ನಿರಾಕರಿಸಿದೆ; ಮಾಜಿ ಸಚಿವ ಸಿ.ಟಿ. ರವಿ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್‌ನಿಂದ ನನಗೆ ಆಫರ್ ಬಂದಿತ್ತು. ಆದರೆ, ನಾನೇ ಅದನ್ನು ತಿರಸ್ಕರಿಸಿ ಸ್ಥಳೀಯರಿಗೆ ನೀಡುವಂತೆ ತಿಳಿಸಿದ್ದೆನು ಎಂದು ಮಾಜಿ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.

BJP high command had offered Chikkaballapur Lok Sabha ticket to former minister CT Ravi sat
Author
First Published Mar 25, 2024, 4:08 PM IST

ಬೆಂಗಳೂರು (ಮಾ.25): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದ ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ಆದರೆ, ಅದಕ್ಕೂ ಮೊದಲು ಚಿಕ್ಕಮಗಳೂರಿನ ಮಾಜಿ ಶಾಸಕ ಸಿ.ಟಿ. ರವಿ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ಬಂದಿತ್ತಂತೆ. ಹೀಗೆಂದು ಸ್ವತಃ ಮಾಜಿ ಸಚಿವ ಸಿ.ಟಿ. ರವಿ ಅವರೇ ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ ಅವರಿಗೆ, ಚಿಕ್ಕಬಳ್ಳಾಪುರದಲ್ಲಿ ನಿಮ್ಮ ಹೆಸರು ಕೂಡ ಕೇಳಿಬಂದಿದ್ದು ನಿಜವೇ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನ ಚಿಕ್ಕಬಳ್ಳಾಪುರದಲ್ಲಿ ನಿಲ್ಲಿ ಅಂತ ಕೇಳಿದ್ದರು. ನಾನು ನಿಲ್ಲಲ್ಲ ಅಂತ ಹೇಳಿದ್ದೆನು. ಹಾಗಾಗಿ ಆ ಪ್ರಶ್ನೆಯೇ ಬರಲ್ಲ. ಸ್ಥಳೀಯರನ್ನ ಆರಿಸಿ ಅಂತ ಹೇಳಿದ್ದೆ. ಸುಧಾಕರ್ ಹಾಗೂ ಅಲೋಕ್ ವಿಶ್ವನಾಥ್ ಸೇರಿದಂತೆ ಅನೇಕರು ಇದ್ದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿರುವುದನ್ನು ಮಾಧ್ಯಮಗಳಿಗೆ ತಿಳಿಸಿದರು.

ಕೇಂದ್ರ ಸರ್ಕಾರವೇ ಚಿಕ್ಕಬಳ್ಳಾಪುರಕ್ಕೆ ಬಂದರೂ ಡಾ.ಸುಧಾಕರ್ ಪಾರ್ಲಿಮೆಂಟ್‌ಗೆ ಹೋಗಲು ಬಿಡಲ್ಲ; ಶಾಸಕ ಪ್ರದೀಪ್ ಈಶ್ವರ್

ಮುಂದುವರೆದು, ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. ಏನು ಮಾಡ್ತಿದ್ದೇವೆ ಅನ್ನೋ ಅರಿವೂ ಇಲ್ಲದೆ ಮಾತಾಡ್ತಿದ್ದಾರೆ. ಸೋಲಿನ ಹತಾಶೆಯಲ್ಲಿ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಬಿಜೆಪಿಯವರ ಮನೆ ಹಾಳಾಗ ಅಂತ ಹೇಳಿದ್ದಾರೆ. ಯಾರು ಮನೆ ಹಾಳು ಮಾಡುವ ಮನಸ್ಥಿತಿ ಇದೆ, ದೇಶವೂ ಹಾಳು ಮಾಡುವ ಮನಸ್ಥಿತಿಯವರೇ ಆಗಿರ್ತಾರೆ. ಸಿದ್ದರಾಮಯ್ಯ ಅವರ ಹೇಳಿಕೆ ದೇಶ ಹಾಳು ಮಾಡುವಂತದ್ದಾ.? ಮನೆ ಹಾಳು ಮಾಡುವ ಮನಸ್ಥಿತಿ ಇಂದ ಇವರು ಹೊರಗೆ ಬರಲಿ. ಮನೆ ಹಾಳು ಮಾಡುವವರು, ದೇಶ ಹಾಳು ಮಾಡುವವರ ಮನಸ್ಥಿತಿ ಒಂದೇ. ಇಂತವರು ಮನೆ ಹಾಳರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮಹಾರಾಜ ಯದುವೀರ್ ವಿರುದ್ಧ ನಟಿ ರಮ್ಯಾ ಪ್ರಚಾರ

ಮೋದಿ ಮೋದಿ ಅನ್ನೋರಿಗೆ ಕಪ್ಪಾಳಮೋಕ್ಷ ಮಾಡಿ ಅನ್ನೋ ಶಿವರಾಜ್ ತಂಗಡಗಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಸಂಸ್ಕೃತಿ ಏನು ಅನ್ನೋದೇ ಗೊತ್ತಿಲ್ಲ, ಆದರೂ ಅವರಿಗೆ ಕನ್ನಡ ಸಂಸ್ಕೃತಿ ಇಲಾಖೆ ಕೊಟ್ಟಿದ್ದಾರೆ. ಇದು ಕನ್ನಡ ಸಂಸ್ಕೃತಿ ಇಲಾಖೆಗೆ ಮಾಡಿದ ಅಪಚಾರವಾಗಿದೆ. ಶಿವರಾಜ್ ತಂಗಡಗಿಗೆ ಬಾರಪ್ಪ ನಿಮ್ಮಪ್ಪನಿಗೆ ಹುಟ್ಟಿದ್ರೆ ಹೊಡೀ ಅಂತ ಹೇಳೋಣ ಅಂತ ಇದ್ದೆ. ಆದ್ರೆ, ನಾನು ಅಷ್ಟು ಕೆಳಗೆ ಇಳಿದು ಮಾತನಾಡಲ್ಲ. ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಪಮಾನ. ಯೋಗ್ಯತೆ ಇದ್ದವರು ಇಂತವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಇಟ್ಟು ಕೊಳ್ಳಲ್ಲ ಎಂದು ಕಿಡಿಕಾರಿದರು.

Follow Us:
Download App:
  • android
  • ios