Asianet Suvarna News Asianet Suvarna News

ಬೆಂಗಳೂರಿನಲ್ಲಿ ‘ಸನ್ನಿ’ ನೈಟ್ ಗೆ ಫುಲ್ ಟೈಟು..!

ಬೆಂಗಳೂರಿನಲ್ಲಿ 'ಸನ್ನಿ ನೈಟ್' ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕಾಗಿ ಫುಲ್ ಟೈಟ್ ಸೆಕ್ಯೂರಿಟಿ ನೀಡಲಾಗಿದೆ. ಸನ್ನಿ ನೈಟ್ ಗೆ ಹೇಗಿದೆ ಸೆಕ್ಯೂರಿಟಿ? ಇಲ್ಲಿದೆ ವಿವರ 

More than 330 cops deployed for actor Sunny Leones event at Bengaluru
Author
Bengaluru, First Published Nov 3, 2018, 5:25 PM IST

ಬೆಂಗಳೂರು, [ನ.03]: ಹಲವು ದಿನಗಳಿಂದ ಭಾರಿ ಚರ್ಚೆಯಲ್ಲಿದ್ದ 'ಸನ್ನಿ ನೈಟ್' ಕಾರ್ಯಕ್ರಮಕ್ಕೆ  ಕ್ಷಣಗಣನೆ ಆರಂಭವಾಗಿದೆ. 

ಇಂದು (ನವೆಂಬರ್ 3) ಸಂಜೆ 6 ಗಂಟೆಯಿಂದ 10 ಗಂಟೆಯವರೆಗೂ ಬೆಂಗಳೂರಿನ ಮಾನ್ಯಾತಾ ಟೆಕ್ ಪಾರ್ಕ್ ನ ವೈಟ್ ಆರ್ಕೆಡ್ ನಲ್ಲಿ ಸನ್ನಿ ಲಿಯೋನ್, ಗಾಯಕ ರಘು ದೀಕ್ಷಿತ್ ಅವರ  ಹಾಡುಗಳಿಗೆ ಸ್ಟೆಪ್ಸ್‌ ಹಾಕೋ ಮೂಲಕ ಪಡ್ಡೆ ಹುಡುಗರ ಕಿಕ್‌ ಏರಿಸಲಿದ್ದಾಳೆ.

ಇಂದು ಸಂಜೆ ಬೆಂಗಳೂರಿನಲ್ಲಿ ಸನ್ನಿ ಲಿಯೋನ್‌ ಹವಾ.!

ಸನ್ನಿ ಲಿಯೋನ್ ಬೆಂಗಳೂರಿಗೆ ಬಂದ್ರೆ ಪ್ರತಿಭಟನೆ ಮಾಡೋದಾಗಿ ಕೆಲವು ಕನ್ನಡ ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದರು. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಆಯೋಜಕರು ಪೊಲೀಸ್ ಭದ್ರತೆಯೊಂದಿಗೆ ಶೋ ನಡೆಸಲಾಗುತ್ತಿದೆ.

ಮಾನ್ಯತಾ ಟೆಕ್ ಪಾರ್ಕ್ ಸುತ್ತ ಪೊಲೀಸರು ನಿಯೋಜನೆಯಾಗಿದ್ದು, 330 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.  2 ಎಸಿಪಿ, 6 ಇನ್ಸ್ ಪೆಕ್ಟರ್ ಮತ್ತು 15 ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 330 ಪೊಲೀಸರು ಭದ್ರತೆಗೆ ನೇಮಕಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios