Asianet Suvarna News Asianet Suvarna News

ಐಎಎಸ್‌ : ರಾಹುಲ್‌ ರಾಜ್ಯಕ್ಕೆ ಫಸ್ಟ್‌

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಯುಪಿಎಸ್‌ಸಿ 2019ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ನಮ್ಮ ರಾಜ್ಯದ 23 ಮಂದಿ ತೇರ್ಗಡೆಯಾಗಿದ್ದಾರೆ. 

23 Candidates from Karnataka shine in UPSC exams
Author
Bengaluru, First Published Apr 6, 2019, 11:01 AM IST

ಬೆಂಗಳೂರು : ಕೇಂದ್ರ ಲೋಕಸೇವಾ ಆಯೋಗ ನಡೆಸುವ ಯುಪಿಎಸ್‌ಸಿ 2019ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ದೇಶಾದ್ಯಂತ ಉತ್ತೀರ್ಣರಾಗಿರುವ 759 ಅಭ್ಯರ್ಥಿಗಳ ಪೈಕಿ ನಮ್ಮ ರಾಜ್ಯದ 23 ಸಾಧಕರೂ ಸೇರಿದ್ದಾರೆ.

ಈ ಪೈಕಿ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರು ಅವರ ತಮ್ಮನ ಮಗ ರಾಹುಲ್‌ ಶರಣಪ್ಪ ಸಂಕನೂರು 17ನೇ ರಾರ‍ಯಂಕ್‌ ಪಡೆದಿದ್ದು, ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಈಗಾಗಲೇ ಐಎಫ್‌ಎಸ್‌ ಅಧಿಕಾರಿಯಾಗಿರುವ ಎನ್‌.ಲಕ್ಷ್ಮಿ 45ನೇ ರಾರ‍ಯಂಕ್‌ ಪಡೆದಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಆಕಾಶ್‌ ಎಸ್‌. 78ನೇ ರಾರ‍ಯಂಕ್‌ ಪಡೆದಿದ್ದಾರೆ.

ಕೃತ್ತಿಕಾ 100, ಎಚ್‌.ಆರ್‌. ಕೌಶಿಕ್‌ 240, ಎಚ್‌.ಬಿ.ವಿವೇಕ್‌ 257, ನಿವೇದಿತಾ 303, ಗಿರೀಶ್‌ ಧರ್ಮರಾಜ್‌ ಕಾಲಗೊಂಡ್‌ 307, ಮಿರ್ಜಾ ಕದರ್‌ ಬೇಗ್‌ 336, ಯು.ಪಿ. ತೇಜಸ್‌ 338, ಬಿ.ಜೆ. ಹರ್ಷವರ್ಧನ್‌ 352, ಪಕೀರೇಶ್‌ ಕಲ್ಲಪ್ಪ ಬಾದಾಮಿ 372, ಡಾ

ನಾಗಾರ್ಜುನ ಗೌಡ 418, ಬಿ.ಬಿ. ಅಶ್ವಿಜಾ 423, ಆರ್‌. ಮಂಜುನಾಥ 495, ಎಸ್‌. ಬೃಂದಾ 496, ಹೇಮಂತ್‌ 612, ಎಂ.ಕೆ. ಶ್ರುತಿ 637, ವೆಂಕಟರಾಮ್‌ 694, ಎಸ್‌. ಅಶೋಕ್‌ ಕುಮಾರ್‌ 711, ಎನ್‌. ರಾಘವೇಂದ್ರ 739, ಎಚ್‌. ಸಂತೋಷ್‌ 753, ಶಶಿಕಿರಣ್‌ 754 ಇವರು ಕರ್ನಾಟಕದಿಂದ ಪಾಸಾದ ಅಭ್ಯರ್ಥಿಗಳಾಗಿದ್ದಾರೆ. ರಾಜಕುಮಾರ್‌ ಅಕಾಡೆಮಿಯಿಂದ ತರಬೇತಿ ಪಡೆದ 17 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕನಸು ನನಸಾಗಿದೆ: ಲಕ್ಷ್ಮಿ

ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿ ಒಂದು ವರ್ಷ ಐಟಿ ಕಂಪನಿಯಲ್ಲಿ ಕೆಲಸ ಮಾಡಿದ್ದ ಲಕ್ಷ್ಮೀ ಎನ್‌. ಅವರು ಮೂರನೇ ಪ್ರಯತ್ನದಲ್ಲಿ ಐಎಎಸ್‌ ಪಾಸಾಗಿದ್ದಾರೆ. 2ನೇ ಪ್ರಯತ್ನದಲ್ಲಿ ಐಎಫ್‌ಎಸ್‌ ಆಗಿದ್ದರು. ಈ ಮೂಲಕ ಐಎಎಸ್‌ ಕನಸು ನನಸಾಗಿದೆ ಎನ್ನುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, ಕೋಚಿಂಗ್‌ ಕ್ಲಾಸ್‌ಗೆ ಹೋಗದೆಯೇ ಮನೆಯಲ್ಲಿ ವ್ಯಾಸಂಗ ಮಾಡಿ ಐಎಎಸ್‌ ಉತ್ತೀರ್ಣನಾಗಿದ್ದೇನೆ. ಪ್ರತಿ ದಿನ 8-9 ಗಂಟೆಗಳ ಕಾಲ ವ್ಯಾಸಂಗ ಮಾಡುತ್ತಿದ್ದೆ. ಐಎಎಸ್‌ ಆಗಲೇಬೇಕು ಎಂಬ ಗುರಿಯಿಂದ ಮೂರನೇ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇನೆ. ನನ್ನ ಕನಸು ನನಸಾಗಿದೆ. ಇ-ಆಡಳಿತದಲ್ಲಿ ಮತ್ತಷ್ಟುಬದಲಾವಣೆ ತರುವ ಕನಸಿದೆ. ಯಾವುದೇ ರಾಜ್ಯದಲ್ಲೂ ಕೆಲಸ ಮಾಡಲು ಸಿದ್ಧಳಿದ್ದೇನೆ ಎಂದು ಸಂತಸ ಹಂಚಿಕೊಂಡರು.

ಆರೋಗ್ಯ, ಶಿಕ್ಷಣ ಆಸಕ್ತಿಯ ಕ್ಷೇತ್ರ : ಆಕಾಶ್‌

ವೃತ್ತಿಯಲ್ಲಿ ವೈದ್ಯರಾಗಿದ್ದ ಆಕಾಶ್‌ ಎಸ್‌. ಕೆಎಎಸ್‌ ಉತ್ತೀರ್ಣರಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 6ನೇ ಪ್ರಯತ್ನದಲ್ಲಿ ಐಎಎಸ್‌ ಗುರಿ ಮುಟ್ಟಿದ್ದಾರೆ.

ಈ ಕುರಿತು ಸಂತಸ ಹಂಚಿಕೊಂಡಿರುವ ಅವರು, ಟಾಪ್‌ 10ರೊಳಗೆ ರಾರ‍ಯಂಕ್‌ ಬರುತ್ತದೆ ಎಂದುಕೊಂಡಿದ್ದೆ. 78ನೇ ರಾರ‍ಯಂಕ್‌ ಬಂದಿರುವುದಕ್ಕೆ ಖುಷಿಯಾಗಿದೆ. ಪ್ರತಿನಿತ್ಯ 10-12 ಗಂಟೆ ವ್ಯಾಸಂಗ ಮಾಡುತ್ತಿದ್ದೆ. ದೆಹಲಿಯಲ್ಲಿ ಒಂದು ವರ್ಷ ತರಬೇತಿ ತೆಗೆದುಕೊಂಡಿದ್ದೆ. ಇನ್‌ಸೈಡ್ಸ್‌ ಕೋಚಿಂಗ್‌ ಸೆಂಟರ್‌ನಲ್ಲಿ ಮೂರು ವರ್ಷ ತರಬೇತಿ ಪಡೆದಿದ್ದೇನೆ. ವೃತ್ತಿಯಲ್ಲಿ ವೈದ್ಯರಾಗಿರುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಇದೆ. ಅದರ ಹೊರತಾಗಿ ಶಿಕ್ಷಣದಲ್ಲೂ ಆಸಕ್ತಿ ಇದೆ. ಹಲವಾರು ಪ್ರಯತ್ನಗಳ ಮೂಲಕ ಈ ವರ್ಷ ಆ ಕನಸು ನನಸಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Follow Us:
Download App:
  • android
  • ios