Asianet Suvarna News Asianet Suvarna News

Ghatkopar Hoarding: ಬಾಲಿವುಡ್‌ ಸ್ಟಾರ್‌ ನಟನ ನಿಕಟ ಸಂಬಂಧಿ ದುರ್ಮರಣ!


ಇತ್ತೀಚೆಗೆ ಮುಂಬೈನ ಘಾಟ್ಕೋಪರ್ ಹೋರ್ಡಿಂಗ್ ಕುಸಿತದ ಘಟನೆಯಲ್ಲಿ ಬಾಲಿವುಡ್‌ನ ಸ್ಟಾರ್‌ ನಟನ ನಿಕಟ ಸಂಬಂಧಿ ದುರ್ಮರಣಕ್ಕೆ ಈಡಾಗಿದ್ದಾರೆ ಎನ್ನುವ ಮಾಹಿತಿ ಬಂದಿದೆ.
 

Ghatkopar hoarding collapse Bollywood actor Kartik Aaryan uncle and aunt die san
Author
First Published May 17, 2024, 3:04 PM IST

ಮುಂಬೈ (ಮೇ.17): ಕೆಲ ದಿನಗಳ ಹಿಂದೆ ಭಾರೀ ಗಾಳಿಯ ಕಾರಣದಿಂದಾಗಿ ಮುಂಬೈನ ಘಾಟ್ಕೋಪರ್‌ನಲ್ಲಿ ಅತೀಎತ್ತರದ ಹೋರ್ಡಿಂಗ್ ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ ಈವರೆಗೂ 16 ಮಂದಿ ಸಾವು ಕಂಡಿದ್ದಾರೆ. ಬುಧವಾರ ಇದೇ ಸ್ಥಳದಿಂದ ಎರಡು ಶವಗಳನ್ನು ಪತ್ತೆ ಮಾಡಲಾಗಿದ್ದು, ಇವರು ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌ ಅವರ ಸಂಬಂಧಿಗಳಾದ ಮನೋಜ್ ಚಾನ್ಸೋರಿಯಾ (60) ಮತ್ತು ಅನಿತಾ (59) ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯರಾತ್ರಿಯ ನಂತರ, ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ನ ನಿವೃತ್ತ ಜನರಲ್ ಮ್ಯಾನೇಜರ್ ಮನೋಜ್ ಚಾನ್ಸೋರಿಯಾ ಮತ್ತು ಅವರ ಪತ್ನಿ ಅನಿತಾ ಅವರ ದೇಹಗಳನ್ನು ಹೊರತೆಗೆಯಲಾಗಿದೆ. ಹೋರ್ಡಿಂಗ್‌ ಇವರಿದ್ದ ಕಾರ್‌ನ ಮೇಲೆ ಬಿದ್ದಿದೆ. ಅಲ್ಲಿಯೇ ಅವರು ಸಾವು ಕಂಡಿದ್ದಾರೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು,  ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವಂತೆ ತೋರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಘಾಟ್ಕೋಪರ್  ಹೋರ್ಡಿಂಗ್ ಕುಸಿತದ ಸ್ಥಳದಲ್ಲಿ ಬ್ರಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಹಿಂತೆಗೆದುಕೊಂಡಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಸೋಮವಾರ ಸಂಜೆ ಬೀಸಿದ ಭಾರೀ ಗಾಳಿಯ  ಸಮಯದಲ್ಲಿ ಛೇಡಾ ನಗರ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ 120 ಅಡಿ x 120 ಅಡಿ ದೈತ್ಯ ಹೋರ್ಡಿಂಗ್ ಕುಸಿದು ಬಿದ್ದಿತ್ತು. ನಂತರ 66 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.  ದಂಪತಿಯ ದೇಹಗಳನ್ನು ರಕ್ಷಿಸಲು ಹೋರ್ಡಿಂಗ್‌ನ ಐದು ಅಂತರ್ಸಂಪರ್ಕಿತ ಗರ್ಡರ್‌ಗಳನ್ನು ಒಂದೊಂದಾಗಿ ಕತ್ತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿ ಕುಸಿದು 16 ಜನರ ಸಾವಿಗೆ ಕಾರಣವಾದ ದೈತ್ಯ ಹೋರ್ಡಿಂಗ್ ಅನ್ನು ಹಾಕಿದ್ದ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆ ಅವರನ್ನು ಶುಕ್ರವಾರ ಮುಂಜಾನೆ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   ಭವೇಶ್‌ ಭಿಂಡೆ ನಿರ್ದೇಶಕನಾಗಿರುವ M/s ಇಗೋ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ ಕಂಪನಿಯೇ ಈ ಪ್ರದೇಶದಲ್ಲಿ ಜಾಹೀರಾತು ಫಲಕವನ್ನು ಹಾಕಿತ್ತು. ಈತನನ್ನು ರಾಜಸ್ಥಾನದ ಉದಯಪುರದಿಂದ ಬಂಧಿಸಲಾಗದೆ ಎಂದು ತಿಳಿಸಿದ್ದಾರೆ.

ಮುಂಬೈ: ಏಷ್ಯಾದ ಅತಿದೊಡ್ಡ ಫಲಕ ಕುಸಿತಕ್ಕೆ 14 ಜನರ ಬಲಿ

ಘಾಟ್‌ಕೋಪರ್‌ನ ಇಂಟರ್‌ಸೆಕ್ಷನ್‌ ಪ್ರದೇಶದಲ್ಲಿ 120 ಅಡಿ x 120 ಅಡಿ ಹೋರ್ಡಿಂಗ್ ಹತ್ತಿರದ ಪೆಟ್ರೋಲ್ ಪಂಪ್‌ನ ಮೇಲೆ ಬಿದ್ದಿದ್ದು, ಇದರಲ್ಲಿ 16 ಜನ ಸಾವು ಕಂಡರೆ, 75 ಜನ ಗಾಯಗೊಂಡಿದ್ದರು. ದುರಂತದ ನಂತರ, ಭಿಂಡೆ, ಜಾಹೀರಾತು ಸಂಸ್ಥೆ ಇಗೋ ಮೀಡಿಯಾದ ಎಲ್ಲಾ ನಿರ್ದೇಶಕರು, ಅದರ ಅಧಿಕಾರಿಗಳು ಮತ್ತು ಉದ್ಯೋಗಿಗಳ ವಿರುದ್ಧ ಪಂತ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಅಡಿಯಲ್ಲಿ ಅಪರಾಧವಲ್ಲದ ನರಹತ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿ ದಿಢೀರ್‌ ದೂಳಿನ ಬಿರುಗಾಳಿ: 8 ಸಾವು

Latest Videos
Follow Us:
Download App:
  • android
  • ios