Asianet Suvarna News Asianet Suvarna News

Chow Chow Bath Review ಸಿಹಿ, ಖಾರ ಬೆರೆತಿರುವ ಸುಂದರ ಪ್ರೇಮ ಕಥನ

 ಅರುಣಾ ಬಾಲರಾಜ್‌, ಸುಶ್ಮಿತಾ ಭಟ್‌, ಸಾಗರ್‌ ಗೌಡ, ಧನುಷ್‌ ಎಸ್‌ ಬೈಕಂಪಾಡಿ, ಸಂಕಲ್ಪ ಶರ್ಮಾ, ಗೀತಾ ಬಂಗೇರ ನಟನೆಯ ಚೌ ಚೌ ಬಾತ್ ಸಿನಿಮಾ ರಿಲೀಸ್ ಆಗಿದೆ. 

Arun Balaji Sushmitha Bhat Chow Chow bath kannada movie review vcs
Author
First Published Mar 16, 2024, 12:29 PM IST

ಪ್ರೇಮ ಕತೆಯಲ್ಲಿರುವ ಮಾಧುರ್ಯ, ತಾರುಣ್ಯದ ಸೌಂದರ್ಯ, ಪ್ರೀತಿಯ ಆಹ್ಲಾದ, ಬದುಕಿನ ತಮಾಷೆ ಎಲ್ಲವೂ ಸೇರಿಕೊಂಡಿರುವ ಸರಳ ಸಂಕೀರ್ಣ, ಸುಂದರ ಕಥನ.

ಇಲ್ಲಿ ಮೂರು ಪ್ರೇಮ ಕತೆಗಳನ್ನು ಹೇಳುತ್ತಾರೆ ನಿರ್ದೇಶಕರು. ಆ ಮೂರು ಕತೆಗಳೂ ಒಂದಕ್ಕೊಂದು ಹೆಣೆದುಕೊಂಡಿವೆ. ಆ ಹೆಣಿಗೆಯೇ ಈ ಕತೆಯನ್ನು ಮತ್ತಷ್ಟು ಕುತೂಹಲಕರವನ್ನಾಗಿ ಮಾಡಿದೆ. ಹರೆಯದ ಪ್ರೇಮ ಮತ್ತು ಜೀವನದ ನಿಗೂಢತೆಯನ್ನು ಹದವಾಗಿ ಬೆರೆಸಿ ಒಂದು ಸೊಗಸಾದ ಚಿತ್ರಕತೆಯನ್ನು ರಚಿಸಲಾಗಿದೆ. ಆ ಮಟ್ಟಿಗೆ ಈ ಸಿನಿಮಾ ಲೈವ್ಲಿಯಾಗಿ ಸಾಗುತ್ತದೆ ಮತ್ತು ಸುಂದರವಾಗಿ ಕಾಣುತ್ತದೆ.

MEHABOOB REVIEW ಪ್ರೀತಿಯ ಹಿಂದೆ ಸಾವುಂಟು!

ನಿರ್ದೇಶನ: ಕೇಂಜ ಚೇತನ್‌ಕುಮಾರ್‌

ತಾರಾಗಣ: ಅರುಣಾ ಬಾಲರಾಜ್‌, ಸುಶ್ಮಿತಾ ಭಟ್‌, ಸಾಗರ್‌ ಗೌಡ, ಧನುಷ್‌ ಎಸ್‌ ಬೈಕಂಪಾಡಿ, ಸಂಕಲ್ಪ ಶರ್ಮಾ, ಗೀತಾ ಬಂಗೇರ

ರೇಟಿಂಗ್: 3

ಜೊತೆಗೆ ಇಲ್ಲಿ ಪ್ರೇಮ ಭಾವದ ಸಂಕೀರ್ಣತೆಯನ್ನೂ ತಣ್ಣಗೆ ದಾಟಿಸಲಾಗಿದೆ.ನಿರ್ದೇಶಕರು ಶ್ರದ್ಧೆಯಿಂದ ಕತೆ, ಚಿತ್ರಕತೆ ರಚಿಸಿ ಅದಕ್ಕೆ ಹೊಸ ಕಾಲದ ತರುಣ, ತರುಣಿಯರನ್ನು ಪಾತ್ರಗಳನ್ನಾಗಿಸಿದ್ದಾರೆ. ಆ ಎಲ್ಲಾ ಕಲಾವಿದರೂ ಇಲ್ಲಿನ ಪಾತ್ರಗಳಿಗೆ ಜೀವ ತುಂಬಿ ಕಥೆಗೊಂದು ಆಹ್ಲಾದತೆ ತಂದಿದ್ದಾರೆ. ಜೊತೆಗೆ ತಾಯಿ ಪಾತ್ರದಲ್ಲಿ ನಟಿಸಿರುವ ಅರುಣಾ ಬಾಲರಾಜ್ ಈ ಚಿತ್ರಕ್ಕೆ ಮತ್ತು ಕತೆಗೆ ಘನತೆ ತಂದಿದ್ದಾರೆ.

Somu Sound Engineer Review ತೀವ್ರ ಗಾಢ ಭಾವಗಳ ಆರ್ದ್ರ ಕಥನ

ಈ ಚಿತ್ರದ ಹೆಸರಲ್ಲೇ ಖಾರ ಮತ್ತು ಸಿಹಿ ಇರುವಂತೆ ಈ ಚಿತ್ರದಲ್ಲೂ ಸಿಹಿಯೂ ಖಾರವೂ ಬೆರೆತುಕೊಂಡಿದೆ. ಸಿಹಿಯಾದ ಭಾವಗಳೂ, ಖಾರ ಕಟು ವಾಸ್ತವವೂ ಸೇರಿಕೊಂಡು ಇದಕ್ಕೊಂದು ವಿಶಿಷ್ಟ ಫ್ಲೇವರ್ ಪ್ರಾಪ್ತವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಲಾವಿದರು, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್, ಛಾಯಾಗ್ರಾಹಕ ರುದ್ರಮುನಿ ಬೆಳಗೆರೆ, ನಿರ್ದೇಶಕರು ಸೇರಿದ ಈ ತಂಡದ ಪ್ರಯತ್ನ ಶ್ಲಾಘನೀಯ.

Follow Us:
Download App:
  • android
  • ios