ಉದ್ಯೋಗಸ್ಥೆ ಅಮ್ಮನಿಗಿಂತ ಮನೇಲಿರೋ ಅಮ್ಮಂಗೆ ಎಷ್ಟು ಕಷ್ಟ ಗೊತ್ತಾ?
ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಒಂದು ಅಧ್ಯಯನ ನಡೆಯಿತು. ಅದರಲ್ಲಿ ಮನೆಯಲ್ಲಿರುವ ಮತ್ತು ಕೆಲಸಕ್ಕೆ ಹೋಗುವ ತಾಯಂದಿರನ್ನು ಅಧ್ಯಯನಕ್ಕೆ ಒಳಪಡಿಸಿದರು. ಆಗ ರಿವೀಲ್ ಆದ ಒಂದು ಅಂಶ ಕೇಳಿ ಅಧ್ಯಯನಕಾರರೇ ದಂಗಾದರು. ಮನೆಯಲ್ಲಿ ಇರುವ ಅಮ್ಮಂದಿರಿಗಿಂತ ಕೆಲಸಕ್ಕೆ ಹೋಗುವ ಅಮ್ಮಂದಿರೇ ಹೆಚ್ಚು ಖುಷಿಯಾಗಿರ್ತಾರೆ ಅಂತ ಗೊತ್ತಾಯಿತು.
ತಮ್ಮ ಮಕ್ಕಳನ್ನು ಕಂಡರೆ ಎಲ್ಲ ಹೆತ್ತವರಿಗೂ ಇಷ್ಟನೇ. ಹಾಗಂತ ಮಗುವನ್ನು ನೋಡ್ಕೊಳ್ಳೋದಕ್ಕೆ ಪ್ರೀತಿ ಒಂದಿದ್ದರೆ ಸಾಕಾಗಲ್ಲ. ಬೇರೆ ಒಂದಿಷ್ಟು ಗುಣಗಳೂ ಇರಬೇಕಾಗುತ್ತೆ. ಮಗು ಆದ ಮೇಲೆ ಅವಳನ್ನು ನೋಡ್ಕೊಳ್ಬೇಕು ಅಂತ ಕೆಲಸಕ್ಕೆ ಗುಡ್ ಬಾಯ್ ಹೇಳುವ ಎಷ್ಟೋ ಅಮ್ಮಂದಿರು ಆಮೇಲೆ ಪರಿತಾಪ ಪಡೋದು ಇದ್ದಿದ್ದೇ. ಮಗುವನ್ನು ನೋಡ್ಕೊಳ್ಳೋದು ಅಂದರೆ ಅದಕ್ಕೆ ಹಾಲುಣಿಸೋದು, ಸ್ನಾನ ಮಾಡಿಸೋದು, ಆಟ ಆಡಿಸೋದು ಅಷ್ಟೇ ಅಲ್ಲ, ಸದಾ ಕಾರಣವೇ ಇಲ್ಲದ ಅಳುತ್ತಿರುವ ಮಗುವನ್ನು ಸಮಾಧಾನ ಪಡಿಸೋದು, ತಪಸ್ಸಿನ ಹಾಗೆ ನಿದ್ದೆ, ಊಟ ಇತ್ಯಾದಿಗಳನ್ನು ತ್ಯಾಗ ಮಾಡೋದು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲ ಚಟುವಟಿಕೆಗಳಿಗೆ ಸಾಕಷ್ಟು ಎನರ್ಜಿ ಬೇಕು, ಹೊಸ ಅಮ್ಮಂದಿರಿಗೆ ಇದು ದೊಡ್ಡ ಟಾಸ್ಕ್. ಆದರೂ ಮಗುವಿನತ್ತ ಅಕಾರಣ ಪ್ರೀತಿ ಈ ಸ್ಟ್ರೆಸ್ ಅನ್ನು ಕಡಿಮೆ ಮಾಡೋದು ಸುಳ್ಳಲ್ಲ.
ಹೆಲ್ದೀ ಅಮ್ಮನಾಗಲು ಈ ಚಾರ್ಟ್ ಫಾಲೋ ಮಾಡಿ
ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಒಂದು ಅಧ್ಯಯನ ನಡೆಯಿತು. ಅದರಲ್ಲಿ ಮನೆಯಲ್ಲಿರುವ ಮತ್ತು ಕೆಲಸಕ್ಕೆ ಹೋಗುವ ತಾಯಂದಿರನ್ನು ಅಧ್ಯಯನಕ್ಕೆ ಒಳಪಡಿಸಿದರು. ಆಗ ರಿವೀಲ್ ಆದ ಒಂದು ಅಂಶ ಕೇಳಿ ಅಧ್ಯಯನಕಾರರೇ ದಂಗಾದರು. ಏಕೆಂದರೆ ಅವರು ಆವರೆಗೆ ಏನು ನಂಬಿದ್ದರೋ ಅದಕ್ಕೆ ಉಲ್ಟಾ ರಿಸಲ್ಟ್ ಬಂದಿತ್ತು. ಸುಮಾರು ೧೫೦೦ ಜನ ಮಕ್ಕಳ ಪೋಷಕರನ್ನು ಅವರು ಅಧ್ಯಯನಕ್ಕೆ ಒಳಪಡಿಸಿದ್ದರು. ವಿಭಿನ್ನ ಬಗೆಯ ಉತ್ತರಗಳು ಬಂದವು. ಆ ಪ್ರತಿಕ್ರಿಯೆಗಳು ಮಜಾ ಇವೆ.
- ಶೇ.31 ರಷ್ಟು ಜನ ಮನೆಯಲ್ಲಿ ಮಕ್ಕಳನ್ನು ನೋಡ್ಕೊಳ್ಳೋದು ತುಂಬ ಕಷ್ಟ. ಇದಕ್ಕೆ ಹೋಲಿಸಿದರೆ ಉದ್ಯೋಗ ಮಾಡುವುದು ಬಹಳ ಸುಲಭ ಅಂತ ಹೇಳಿದರು.
- ಶೇ.25 ಜನರಿಗೆ ಮಕ್ಕಳನ್ನು ನೋಡ್ಕೊಳ್ಳೋದು ಕಷ್ಟ ಅನಿಸಲಿಲ್ಲ.
- ಶೇ.40 ರಷ್ಟು ಜನ ಪೋಷಕರ ಮನಸ್ಸೇ ಪರಿವರ್ತನೆ ಆಯ್ತು. ಅಲ್ಲಿಯವರೆಗೆ ಅಪ್ಪ ಅಮ್ಮನನ್ನು ನಿಂದಿಸುತ್ತಿದ್ದವರು ಮಕ್ಕಳಾದ ಮೇಲೆ ಪೋಷಕರನ್ನು ದೂರೋದನ್ನು ಸಂಪೂರ್ಣ ನಿಲ್ಲಿಸಿಬಿಟ್ಟರು.
- ಶೇ.45 ರಷ್ಟು ಹೆಣ್ಮಕ್ಕಳಿಗೆ ಮಗುವನ್ನು ಸ್ವತಂತ್ರವಾಗಿ ನಿಭಾಯಿಸಲಾಗಲಿಲ್ಲ. ಅವರು ತಮ್ಮ ತಾಯಿ ಅಥವಾ ತಂದೆಯ ಹೆಲ್ಪ್ ತೆಗೆದುಕೊಳ್ಳಲೇ ಬೇಕಾಯ್ತು.
- ಶೇ.37 ರಷ್ಟು ಹೆತ್ತವರಿಗೆ ಸಾಕೋ ಸಾಕಪ್ಪ ಈ ಮಗುವಿನ ಸಹವಾಸ ಅಂತ ಅನಿಸಿತು.
- ಶೇ. 22ರಷ್ಟು ಪೋಷಕರು ಮಗುವಿಗೆ ಊಟ, ತಿಂಡಿ ತಿನ್ನಿಸುವಷ್ಟು ಕಷ್ಟದ ಕೆಲಸ ಇನ್ಯಾವುದೂ ಅಲ್ಲ ಅನ್ನೋ ಅಭಿಪ್ರಾಯಕ್ಕೆ ಬಂದರು.
- ಶೇ.42ರಷ್ಟು ಜನರಿಗೆ ಮಾತ್ರ ಮಗುವಿಗಾಗಿ ಮನೆಯಲ್ಲಿ ಉಳಿದಿದ್ದರಿಂದ ಪಾಪು ಬಗ್ಗೆ ಪ್ರೀತಿ ಹೆಚ್ಚಾಯಿತು.
ಶೇ.35ರಷ್ಟು ಅಮ್ಮಂದಿರು ತಮ್ಮ ಕೆಲಸದಲ್ಲಿ ತಮ್ಮ ಪತಿಯರೂ ಕೂಡ ಸಹಾಯ ಮಾಡುತ್ತಾರೆ, ಅವರಿಗೆ ಥ್ಯಾಂಕ್ಸ್ ಅದರು.
ಶೇ.46ರಷ್ಟು ನವ ತಂದೆ- ತಾಯಿಯರು, ಶಿಶು ಹುಟ್ಟಿದ ಮೇಲೆ ತಮ್ಮ ಲೈಂಗಿಕ ಜೀವನ ತುಂಬಾ ಸಫರ್ ಆಗಿದೆ ಅಂದರು.
ಶೇ.67 ಹೆತ್ತವರು, ಮಗು ಹುಟ್ಟಿದ ನಂತರ ತಮ್ಮ ಸ್ಟ್ರೆಸ್ ಲೆವೆಲ್ ಜಾಸ್ತಿ ಆಗಿದೆ. ಬದುಕು ತುಂಬಾ ಮಜವಾಗಿರುತ್ತದೆ ಅಂತ ಅಂದುಕೊಂಡಿದ್ದೆವು. ಆದರೆ ಹಾಗೆ ಆಗುತ್ತಿಲ್ಲ ಎಂದು ಗೋಳು ತೋಡಿಕೊಂಡರು.
ಶೇ.58 ತಾಯಿಯರು ಮಾತ್ರ, ತಮಗೆ ಎಷ್ಟೇ ಕಷ್ಟವಾಗಲಿ, ಮಗು ಮಾಡಿಕೊಂಡದ್ದಕ್ಕೆ ಖುಷಿಯನ್ನೇ ವ್ಯಕ್ತಪಡಿಸಿದರು. ಕಷ್ಟಗಳಿವೆ. ಆದರೆ ಅದು ಜೀವನದಲ್ಲಿ ಹತಾಶೆ ಮಾಡಿಸುವಷ್ಟೇನೂ ಇಲ್ಲ ಎಂದು ಹೇಳಿದರು
ಉದ್ಯೋಗಸ್ಥ ಮಹಿಳೆಯರಿಗೆ ಮುಂದೊಳ್ಳೆ ಕಾಲ ಇರುತ್ತೆ