Asianet Suvarna News Asianet Suvarna News

ಉತ್ತಮ ನೆರೆಹೊರೆಯವರು ಎನಿಸಿಕೊಳ್ಳಲು ಹೀಗೆ ಮಾಡಿ

ಹೊಸ ಸ್ಥಳಗಳಿಗೆ ಹೋದಾಗ ನಮ್ಮ ನೆರೆಹೊರೆಯವರೇ ನಮ್ಮ ಮೊದಲ ಸ್ನೇಹಿತರು. ಅವರೊಂದಿಗೆ ನಮ್ಮ ಬಾಂಧವ್ಯ ಚೆನ್ನಾಗಿದ್ದರೆ ಹೊಸ ಜಾಗಗಳಲ್ಲಿ  ಒಗ್ಗಿಕೊಳ್ಳುವುದು ಕಷ್ಟ ಎನಿಸುವುದಿಲ್ಲ. ಉತ್ತಮ ನೆರೆಯವರು ಎನಿಸಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್’ಗಳು

Moving to a New Place  5 Tips on How to be Good Neighbours

ಬೆಂಗಳೂರು (ಸೆ.29): ಹೊಸ ಸ್ಥಳಗಳಿಗೆ ಹೋದಾಗ ನಮ್ಮ ನೆರೆಹೊರೆಯವರೇ ನಮ್ಮ ಮೊದಲ ಸ್ನೇಹಿತರು. ಅವರೊಂದಿಗೆ ನಮ್ಮ ಬಾಂಧವ್ಯ ಚೆನ್ನಾಗಿದ್ದರೆ ಹೊಸ ಜಾಗಗಳಲ್ಲಿ  ಒಗ್ಗಿಕೊಳ್ಳುವುದು ಕಷ್ಟ ಎನಿಸುವುದಿಲ್ಲ. ಉತ್ತಮ ನೆರೆಯವರು ಎನಿಸಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್’ಗಳು

  1. ಪರಸ್ಪರ ಒಬ್ಬರನ್ನು ಒಬ್ಬರು ತಿಳಿದುಕೊಳ್ಳಿ

ಮೊದಲು ನೆರೆಯವರೊಂದಿಗೆ ನಿಮ್ಮ ಪರಿಚಯ ಮಾಡಿಕೊಳ್ಳಿ. ಒಂದು ವೇಳೆ ಅವರು ಎಷ್ಟು ಬೇಕೋ ಅಷ್ಟೇ ಮಾತನಾಡುವವರಾಗಿದ್ದರೆ ನೀವೂ ಅಗತ್ಯಕ್ಕೆ ತಕ್ಕಷ್ಟು ಮಾತನಾಡಿ.  ಜಾಸ್ತಿ ಮಾತನಾಡಬೇಡಿ.

   2. ನೆರೆಹೊರೆಯವರನ್ನು ನಿಮ್ಮ ಮನೆಗೆ ಆಹ್ವಾನಿಸಿ

ಕಾಫಿ/ ಟೀಗೆ ಅವರನ್ನು ಆಹ್ವಾನಿಸಿ. ಇದರಿಂದಾಗಿ ನಿಮ್ಮ ಬಗ್ಗೆ ಅವರಿಗೆ ಒಳ್ಳೆಯ ಭಾವನೆ ಬರುತ್ತದೆ. ಬರ್ತ್’ಡೇ ಪಾರ್ಟಿ, ಹಬ್ಬ-ಹರಿದಿನಗಳಿಗೆ ಅವರ ಮನೆಗೆ ನೀವು ಹೋಗಿ. ನಿಮ್ಮ ಮನೆಗೆ ಅವರನ್ನೂ ಆಹ್ವಾನಿಸಿ. ಅವರಿಷ್ಟದ ಅಡುಗೆಯನ್ನು ಮಾಡಿ. ನಿಮ್ಮ ಬಗ್ಗೆ ಒಳ್ಳೆಯ ಇಂಪ್ರೇಶನ್ ಬರುತ್ತದೆ.

  3. ಹಂಚಿಕೊಳ್ಳಿ

ನೀವು ಹೊಸದೇನಾದರೂ ಅಡುಗೆ ಮಾಡಿದ್ದರೆ ನಿಮ್ಮ ಪಕ್ಕದ ಮನೆಯವರಿಗೂ ಟೇಸ್ಟ್ ನೋಡಲಿಕ್ಕೆ ಕೊಡಿ. ಹೊಸ ಅಡುಗೆಯನ್ನು ಮಾಡುವುದು ಹೇಗೆಂದು ರೆಸಿಪಿ ಹೇಳಿಕೊಡಿ.

 4. ನಿರಂತರ ಟಚ್'ನಲ್ಲಿರಿ

ಒಂದು ಸಲ ನಿಮ್ಮ ಪರಿಚಯ ಮಾಡಿಕೊಂಡು ಅಷ್ಟಕ್ಕೇ ಸುಮ್ಮನಾಗಬೇಡಿ. ಎದುರಿಗೆ ಸಿಕ್ಕರೆ ಹಾಯ್ ಹೇಳಿ. ಸ್ಮೈಲ್ ಕೊಡಿ. ವಿಚಾರ ವಿನಿಮಯ ಮಾಡಿಕೊಳ್ಳಿ. ಯಾರಿಗ್ಗೊತ್ತು ಇದೇ ನಿಮಗೆ ಸಹಾಯಕ್ಕೆ ಬರಬಹುದು.

5. ಔಟಿಂಗ್ ಪ್ಲಾನ್ಮಾಡಿ

ನೆರೆಹೊರೆಯವರೊಡನೆ ವೀಕೆಂಡ್ ಸಿನೆಮಾಗೋ, ಅಥವಾ ಪಿಕ್’ನಿಕ್, ಔಟಿಂಗ್ ಹೋಗೋ ಪ್ಲಾನ್ ಮಾಡಿ. ನಿಮ್ಮ ಮಕ್ಕಳು, ಅವರ ಮನೆ ಮಕ್ಕಳು ಎಲ್ಲರೂ ಒಟ್ಟಿಗೆ ಸೇರಿದರೆ ಅವರಿಗೂ ಒಳ್ಳೆಯ ಕಂಪನಿ ಸಿಕ್ಕಂತಾಗುತ್ತದೆ.

 

 

Follow Us:
Download App:
  • android
  • ios