Asianet Suvarna News Asianet Suvarna News

ಮೂಗಿನ ರಕ್ತ ಸ್ರಾವಕ್ಕೆ ದಾಳಿಂಬೆ ಎಂಬ ಮದ್ದು...

ಹೆಚ್ಚಿನ ಪೋಷಕಾಂಶವುಳ್ಳ ದಾಳಿಂಬೆಯಿಂದ ಹತ್ತು ಹಲವು ಪ್ರಯೋಜನಗಳಿವೆ. ಪಚನಕ್ರಿಯೆ ಉತ್ತಮಗೊಳ್ಳುವಂತೆ ಮಾಡುವ ಈ ದಾಳಿಂಬೆ ಮೂಗಿನ ರಕ್ತ ಸ್ರಾವಕ್ಕೂ ಮದ್ದಾಗಬಲ್ಲದು. ಹೇಗೆ?

10 health benefits of pomegranate
Author
Bangalore, First Published Apr 16, 2019, 12:58 PM IST

ದಾಳಿಂಬೆ ಹಣ್ಣನ್ನು ಔಷಧವಾಗಿ ಸುಶ್ರುತನ ಕಾಲದಿಂದಲೂ ಬಳಸಲಾಗುತ್ತಿದೆ. ಇಂದಿಗೂ ಹಲವು ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ಇದು ಸಹಕಾರಿ. ಆದರೆ ಕೇವಲ ದಾಳಿಂಬೆ ಮಾತ್ರವಲ್ಲ, ಅದರ ಹೂವು ಮತ್ತು ಎಲೆಯಲ್ಲೂ ಉತ್ತಮ ಔಷಧೀಯ ಗುಣಗಳಿವೆ. ಅವುಗಳ ಸೇವನೆಯಿಂದ ಏನೆಲ್ಲಾ ಲಾಭ ಇವೆ ನೋಡಿ..

 

  • ದಾಳಿಂಬೆ ಎಲೆಯನ್ನು ನುಣ್ಣಗೆ ಅರೆದು, ಅದರಿಂದ ಅಂಗಾಂಗವನ್ನು ತಿಕ್ಕಿ ಸ್ನಾನ ಮಾಡುವುದರಿಂದ ಶರೀರ ಕಾಂತಿಯುತವಾಗುತ್ತದೆ.
  • ಎಲೆಗಳನ್ನು ಅರಿದು ಮೈಗೆ ಹಚ್ಚಿ ಸ್ನಾನ ಮಾಡಿದರೆ, ಬೆವರಿನ ವಾಸನೆಯಿಂದ ಮುಕ್ತವಾಗುತ್ತದೆ.
  • ಬಿಳಿ ಮುಟ್ಟಿನ ಸಮಸ್ಯೆ ಇರುವವರು ದಾಳಿಂಬೆ ಮೊಗ್ಗಿನ ಜೊತೆ ಕರಿಮೆಣಸಿನ ಪುಡಿ ಹಾಕಿ ನೀರಲ್ಲಿ ಕುದಿಸಿ, ಸೇವಿಸಬೇಕು.
  • ದಾಳಿಂಬೆ ಹೂವನ್ನು ಅರೆದು ಮಿಕ್ಸ್ ಮಾಡಿ ಜಜ್ಜಿ ಮುಖದ ಮೇಲೆ ಮೊಡವೆಗೆ ಹಚ್ಚಿದರೆ ಅದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.
  • ಮೂಗಿನಲ್ಲಿ ರಕ್ತ ಸ್ರಾವವಾಗುತ್ತಿದ್ದರೆ, ದಾಳಿಂಬೆ ಹೂವು ಮತ್ತು ಗರಿಕೆ ಹುಲ್ಲಿನ ರಸ ತೆಗೆದು ಮೂಗಿಗೆ ಹಾಕಬೇಕು. ಇದರಿಂದ ರಕ್ತಸ್ರಾವ ಶೀಘ್ರ ಗುಣಮುಖವಾಗುತ್ತದೆ.

10 health benefits of pomegranate

  • ದಾಳಿಂಬೆ ಎಲೆಯ ಜ್ಯೂಸು ಮಾಡಿ ಮಲಗುವ ಮುನ್ನ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
  • ಜೊತೆಗೆ ಇದರ ಜ್ಯೂಸಿನಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ.
  • ದಾಳಿಂಬೆ ಹೂವಿಗೆ ಅರಿಶಿನ ಮತ್ತು ಅಮೃತ ಬಳ್ಳಿ ಸೇರಿಸಿ, ಕುದಿಸಿ ಸೇವಿಸಿದರೆ ಮಧುಮೇಹ ಸಮಸ್ಯೆ ನಿವಾರಣೆಯಾಗುತ್ತದೆ.
  • ಹೊಟ್ಟೆ ನೋವು ಅಥವಾ ಜಂತು ಹುಳದ ಸಮಸ್ಯೆಗೂ ಈ ರಸ ಒಳ್ಳೆ ಮದ್ದು.
  • ಕೆಮ್ಮು, ಗಂಟಲು ಕೆರೆತ ಮೊದಲಾದ ಸಮಸ್ಯೆಗೂ ಇದು ಸಹಕಾರಿ.
Follow Us:
Download App:
  • android
  • ios