Asianet Suvarna News Asianet Suvarna News

ಭಾರತೀಯರ ನೆಮ್ಮದಿಗೆ ‌ಧರ್ಮಕ್ಕಂಟಿದ ಕುಟುಂಬ ವ್ಯವಸ್ಥೆಯೇ ಕಾರಣ: ಸ್ವರ್ಣವಲ್ಲೀ ಶ್ರೀ

ವಿದೇಶಿಗರು ಭಾರತಕ್ಕೆ ಬಂದು ವಿವಿಧ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯ ಫಲಿತಾಂಶದಲ್ಲಿ ಭಾರತೀಯರ ನೆಮ್ಮದಿಗೆ ಕುಟುಂಬ ವ್ಯವಸ್ಥೆ ಕಾರಣ ಎಂದಿದ್ದಾರೆ. ಭಾರತೀಯ ಮಾದರಿಯ ಕುಟುಂಬ ವ್ಯವಸ್ಥೆ ಬೇರೆ ದೇಶದಲ್ಲಿ ಸರಿಯಾಗಿ ಇಲ್ಲ, ಅನೇಕ ದೇಶದಲ್ಲಿ ಇಲ್ಲವೇ ಇಲ್ಲ. ಧರ್ಮಕ್ಕೆ ಆಧಾರ ಕುಟುಂಬ ವ್ಯವಸ್ಥೆ ಹಾಳಾಗಬಾರದು. ನಮ್ಮ ಕುಟುಂಬ ವ್ಯವಸ್ಥೆ ಹಾಳಾಗಬಾರದು ಎಂದರೆ ವಿವಾಹ ವಿಚ್ಛೇದನ ಆಗಬಾರದು ಎಂದು ಕರೆ ನೀಡಿದ ಸ್ವರ್ಣವಲ್ಲೀ ಶ್ರೀ 

Swarnavalli Sri Talks over Indians grg
Author
First Published Oct 4, 2023, 1:00 AM IST

ಶಿರಸಿ(ಅ.04):  ಪ್ರಪಂಚದ ಉಳಿದ ದೇಶಗಳಿಗಿಂತ ಭಾರತೀಯರು ನೆಮ್ಮದಿಯಾಗಿರಲು ಇಲ್ಲಿನ ಧರ್ಮಕ್ಕಂಟಿದ ಕುಟುಂಬ ವ್ಯವಸ್ಥೆಯೇ ಕಾರಣ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸೋಮವಾರ ನಗರದ ಮಾರಿಕಾಂಬಾ ದೇವಸ್ಥಾನದ ಸಹಕಾರದಲ್ಲಿ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಸರ್ವ ದಂಪತಿ ಶಿಬಿರದ ಸಮಾರೋಪದ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.

ವಿದೇಶಿಗರು ಭಾರತಕ್ಕೆ ಬಂದು ವಿವಿಧ ಸಮೀಕ್ಷೆ ನಡೆಸಿದ್ದಾರೆ. ಈ ಸಮೀಕ್ಷೆಯ ಫಲಿತಾಂಶದಲ್ಲಿ ಭಾರತೀಯರ ನೆಮ್ಮದಿಗೆ ಕುಟುಂಬ ವ್ಯವಸ್ಥೆ ಕಾರಣ ಎಂದಿದ್ದಾರೆ. ಭಾರತೀಯ ಮಾದರಿಯ ಕುಟುಂಬ ವ್ಯವಸ್ಥೆ ಬೇರೆ ದೇಶದಲ್ಲಿ ಸರಿಯಾಗಿ ಇಲ್ಲ, ಅನೇಕ ದೇಶದಲ್ಲಿ ಇಲ್ಲವೇ ಇಲ್ಲ. ಧರ್ಮಕ್ಕೆ ಆಧಾರ ಕುಟುಂಬ ವ್ಯವಸ್ಥೆ ಹಾಳಾಗಬಾರದು. ನಮ್ಮ ಕುಟುಂಬ ವ್ಯವಸ್ಥೆ ಹಾಳಾಗಬಾರದು ಎಂದರೆ ವಿವಾಹ ವಿಚ್ಛೇದನ ಆಗಬಾರದು ಎಂದು ಕರೆ ನೀಡಿದರು.

ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಬೇಕು: ಸ್ವರ್ಣವಲ್ಲೀ ಶ್ರೀ ಆಗ್ರಹ

ಹಿಂದೂ ಸಮಾಜದ ಇಂದಿನ ಜ್ವಲಂತ ಸಮಸ್ಯೆ ವಿವಾಹ ವಿಚ್ಛೇದನ ಆಗಿದೆ. ಮದುವೆ ಆದ ದಂಪತಿಗಳು ಕೆಲವೇ ತಿಂಗಳಲ್ಲಿ ನ್ಯಾಯಾಲಯಕ್ಕೆ ವಿವಾಹ ವಿಚ್ಛೇದನಕ್ಕೆ ಓಡಾಡುತ್ತಿದ್ದಾರೆ. ಇದರಿಂದ ಕುಟುಂಬ ವ್ಯವಸ್ಥೆ ಕುಸಿಯುತ್ತಿದೆ. ಧರ್ಮದ ಮುಖ್ಯ ಕೇಂದ್ರ ಕುಟುಂಬ ವ್ಯವಸ್ಥೆಯಾಗಿದೆ. ಇದೇ ಕುಸಿತಗೊಂಡರೆ ಧರ್ಮ ಅವನತಿಗೆ ಹೋಗುತ್ತದೆ ಎಂದು ಆತಂಕಿಸಿದ ಶ್ರೀಗಳು, ಅಗ್ನಿ ಸಾಕ್ಷಿಯಾಗಿ ವಿವಾಹ ನಡೆಯುತ್ತದೆ. ಅದನ್ನು ಬೇರೆ ಮಾಡಿಕೊಳ್ಳುವುದು ಧರ್ಮಕ್ಕೆ ವಿರುದ್ಧವಾದದ್ದು ಎಂದರು.

ದಂಪತಿಗಳಲ್ಲಿ ಭಿನ್ನಾಭಿಪ್ರಾಯ ತೀವ್ರ ಆಗದಂತೆ ನೋಡಿಕೊಂಡರೆ ಗಲಾಟೆಯೇ ಇರುವುದಿಲ್ಲ. ಪರಸ್ಪರ ಆತ್ಮೀಯತೆ ಇಟ್ಟುಕೊಳ್ಳಬೇಕು ಎಂದೂ ಸಲಹೆ ಮಾಡಿದ ಶ್ರೀಗಳು, ಯಾವುದೇ ಕಾರಣಕ್ಕೂ ಭ್ರೂಣ ಹತ್ಯೆ ಮಾಡಬಾರದು. ಈಚೆಗಿನ ವರ್ಷದಲ್ಲಿ ಅನೇಕ ದಂಪತಿಗಳು ಬೆಳವಣಿಗೆಯ ಹಂತದಲ್ಲಿ ಇರುವ ಭ್ರೂಣ ತೆಗೆದರೆ ಕೊಲೆಗೆ ಸಮ. ಭ್ರೂಣ ಹತ್ಯೆ ಇನ್ನೂ ದೋಷ. ಪ್ರತ್ಯಕ್ಷ ಕೊಲೆಗಿಂತ ಹೆಚ್ಚು ಪಾಪ ಬರುತ್ತದೆ. ಭ್ರೂಣ ಹತ್ಯೆಗೆ ಸಮವಾದ ಪಾಪ ಇನ್ನೊಂದಿಲ್ಲ. ಹಾಗಾಗಿ ಅದನ್ನು ಮಾಡಬಾರದು. ಪ್ರತ್ಯಕ್ಷ ಹಾಗೂ ಪರೋಕ್ಷ ಭ್ರೂಣ ಹತ್ಯೆ ಮಾಡಬಾರದು ಎಂದು ಹೇಳಿದರು.

ಉತ್ತರ ಕನ್ನಡ: ನದಿ ಜೋಡಣೆ ಯೋಜನೆಗೆ ಸ್ವರ್ಣವಲ್ಲೀ ಶ್ರೀ ವಿರೋಧ

ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ, ಧರ್ಮದರ್ಶಿಗಳಾದ ಸುಧೀರ್ ಹಂದ್ರಾಳ, ಶಿವಾನಂದ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲ ಹೆಗಡೆ, ಗ್ರಾಮಾಭ್ಯುದಯದ ಅಧ್ಯಕ್ಷ ಎಂ.ಸಿ. ಹೆಗಡೆ, ಕಾರ್ಯದರ್ಶಿ ಸಂತೋಷ ಹೆಗಡೆ, ಎಂ.ಕೆ. ಗೋಳಿಕೊಪ್ಪ, ರಮೇಶ ಹೆಗಡೆ ದೊಡ್ನಳ್ಳಿ, ಸಿದ್ದು ಚೋರೆ, ಮಹೇಂದ್ರ ಹೆಗಡೆ, ಧೀರಜ್ ಹೆಗಡೆ ಇತರರು ಇದ್ದರು. ಮುಂಜಾನೆಯಿಂದ ವಿವಿಧ ವಿಷಯಗಳ ಮೇಲೆ ಉಪನ್ಯಾಸಗಳು ನಡೆದವು.

ದಂಪತಿಗಳ ಶಿಬಿರವು ಒಳ್ಳೆಯ ಫಲ ಕೊಡುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಹಿಂದೂ ಸಮಾಜದ ಅನೇಕ ಸಮಸ್ಯೆಗಳು ದಂಪತಿ ಶಿಬಿರದಲ್ಲಿ ಪರಿಹಾರ ಆಗುತ್ತದೆ. ಭವಿಷ್ಯದ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಈ ಶಿಬಿರ ಸಹಕಾರಿ ಆಗುತ್ತಿದೆ. ಈ ಫಲ ಇನ್ನೂ ಹೆಚ್ಚು ಜನರಿಗೆ ತಲುಪಬೇಕು ಎಂಬುದೇ ಶಿಬಿರದ ಮೂಲ ಆಶಯ ಎಂದು ಸ್ವರ್ಣವಲ್ಲೀ ಶ್ರೀ ತಿಳಿಸಿದ್ದಾರೆ. 

Follow Us:
Download App:
  • android
  • ios