ಕೊರೋನಾ ವಾರಿಯರ್‌ಗೆ ಜೀವ ಬೆದರಿಕೆ..!

ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೊರೋನಾ ವಾರಿಯರ್‌ ಆರೋಗ್ಯ ಸಹಾಯಕಿಗೆ ಜೀವಬೆದರಿಕೆ ಒಡ್ಡಿದ ಘಟನೆ ಪಡುಬಿದ್ರಿಯ ಉಚ್ಚಿಲದಲ್ಲಿ ನಡೆದಿದೆ. 

 

Men threats corona warrior health care staff in mangalore

ಮಂಗಳೂರು(ಏ.23): ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೊರೋನಾ ವಾರಿಯರ್‌ ಆರೋಗ್ಯ ಸಹಾಯಕಿಗೆ ಜೀವಬೆದರಿಕೆ ಒಡ್ಡಿದ ಘಟನೆ ಪಡುಬಿದ್ರಿಯ ಉಚ್ಚಿಲದಲ್ಲಿ ಬುಧವಾರ ನಡೆದಿದೆ. 

ಪಡುಬಿದ್ರಿ ಆರೋಗ್ಯ ಉಪಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಶ್ಯಾಮಲಾ ಅವರು ಕರ್ತವ್ಯ ಮಾಡದಂತೆ ಅವರ ಪಕ್ಕದ ಮನೆಯ ಮಮ್ತಾಜ್‌ ಮತ್ತು ಆಕೆಯ ಸಹೋದರ ಮನ್ಸೂರ್‌ ಬೆದರಿಕೆ ಒಡ್ಡಿದ್ದಾರೆ.

11 ವಾರ್ಡ್‌ಗಳಿಗೆ ನೀರು ಪೂರೈಸುತ್ತಿದ್ದ ನದಿಗೆ ವಿಷ, ಮೀನುಗಳ ಮಾರಣ ಹೋಮ

ಜಿಲ್ಲೆಯಲ್ಲಿ ಲಾಕ್‌ಡೌನ್‌ ಇದ್ದರೂ ಮಮ್ತಾಜ್‌ ಅವರ ಮನೆಗೆ ನಿರಂತರವಾಗಿ ಅತಿಥಿಗಳು ಬರುತಿದ್ದರು. ಕೊರೋನಾ ರೆಡ್‌ ಝೋನ್‌ ಆಗಿರುವ ದ.ಕ. ಜಿಲ್ಲೆಯಿಂದಲೂ ಕೆಲವು ಅತಿಥಿಗಳು ಬಂದ ಬಗ್ಗೆ ಸಂಶಯದಿಂದ ಶ್ಯಾಮಲಾ ಅವರು, ಹೊರಗಿನ ಜನರು ಬಂದರೆ ಅಪಾಯ, ಸ್ವಲ್ಪ ಎಚ್ಚರಿಕೆ ವಹಿಸಿ ಎಂದು ಬುದ್ಧಿವಾದ ಹೇಳಿದರು.

ಇದಕ್ಕೆ ಸಿಟ್ಟುಗೊಂಡ ಮಮ್ತಾಜ್‌, ಮನ್ಸೂರ್‌ ಹಾಗೂ ಇನ್ನೊಂದಿಷ್ಟುಜನರು ಗುಂಪಾಗಿ ಬಂದು ಶ್ಯಾಮಲಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ನಿನ್ನನ್ನು ಬಿಡಲ್ಲ, ಫೀಲ್ಡಿಗೆ ಹೋಗುವಾಗ ನೋಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.

ಕೊರೋನಾ ವಾರಿಯರ್ಸ್‌ ಕುಟುಂಬಸ್ಥರ ಜೊತೆ ಕಮಿಷನರ್ ವಿಡಿಯೊ ಕಾನ್ಫರೆನ್ಸ್

ಈ ಬಗ್ಗೆ ಶ್ಯಾಮಲಾ ಅವರು ಪಡುಬಿದ್ರಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಕುಟುಂಬವನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿ, ನಂತರ ಪ್ರಕರಣ ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios