Asianet Suvarna News Asianet Suvarna News

Breaking: ಗದಗಿನ ಬಾಗೇವಾಡಿಯಲ್ಲಿ ಪಲ್ಟಿಯಾದ ಸರ್ಕಾರಿ ಬಸ್; ಬೆಳ್ಳಟ್ಟಿ-ಮುಂಡರಗಿ ಪ್ರಯಾಣಿಕರ ಗೋಳಾಟ

ಬೆಳ್ಳಟ್ಟಿಯಿಂದ ಮುಂಡರಗಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಮುಂಡರಗಿ ಡಿಪೋದ ಬಸ್ ಬಾಗೇವಾಡಿ ಗ್ರಾಮದಲ್ಲಿ ಉರುಳಿ ಬಿದ್ದಿದೆ. ಇದರಿಂದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ.

Gadag NWKRTC bus overturned in Bagewadi village and this is running Bellatti to Mundargi sat
Author
First Published Apr 13, 2024, 8:52 PM IST

ಗದಗ (ಏ.13): ಬೆಳ್ಳಟ್ಟಿಯಿಂದ ಮುಂಡರಗಿಗೆ ಹೊರಟಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಮುಂಡರಗಿ ಡಿಪೋದ ಬಸ್ ಬಾಗೇವಾಡಿ ಗ್ರಾಮದಲ್ಲಿ ಉರುಳಿ ಬಿದ್ದಿದೆ. ಇದರಿಂದ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಈ ಪೈಕಿ 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಗಾಯಾಳು ಪ್ರಯಾಣಿಕರನ್ನು ಕೂಡಲೇ ಆಂಬುಲೆನ್ಸ್‌ನಲ್ಲಿ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

ಹೌದು, ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಪಲ್ಟಿ 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದ ಬಳಿ ಘಟನೆ ನಡೆದಿದೆ. ಬೆಳ್ಳಟ್ಟಿಯಿಂದ ಮುಂಡರಗಿ ಹೋಗುತ್ತಿದ್ದಾಗ ನಡೆದ ಘಟನೆ ಸಂಭವಿಸಿದೆ. ಇನ್ನು ಬಸ್‌ ಸಂಚಾರಕ್ಕೂ ಯೋಗ್ಯವಲ್ಲದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹೋಗುವಾಗಲೇ ಪಾಟಾ ಕಟ್‌ ಆಗಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿದ್ದ ಹಳ್ಳಕ್ಕೆ ಬಿದ್ದು, ಪಲ್ಟಿಯಾಗಿದೆ. ಇನ್ನು ಬಸ್ ಪಲ್ಟಿ ಆಗುತ್ತಿದ್ದಂತೆ ಪ್ರಯಾಣಿಕರ ಕೂಗಾಟ, ಚೀರಾಟ ಕೇಳಿಬಂದಿದೆ. ಜೊತೆಗೆ, ಬಸ್ ಬಿದ್ದ ಶಬ್ದ ಬರುತ್ತಿದ್ದಂತೆ ಬಾಗೇವಾಡಿ ಗ್ರಾಮದ ಜನರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಸ್ಥಳೀಯರು ಬಸ್‌ನ ಮುಂಭಾಗದ ಗ್ಲಾಸ್‌ ಒಡೆದು ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ.

ಶೂಟಿಂಗ್ ಮುಗಿಸಿ ತಡವಾಗಿ ಮನೆಗೆ ಮರಳಿದ ಜೋಡಿ, 7ನೇ ಮಹಡಿಯಿಂದ ಜಿಗಿದು ದುರಂತ ಅಂತ್ಯ!

ಸಾರಿಗೆ ಬಸ್ ಪಕ್ಕದಲ್ಲಿದ್ದ ಹಳ್ಳದ ಮುಳ್ಳಿನ ಗಿಡಗಂಟಿಗಳಲ್ಲಿ ಬಿದ್ದಿದ್ದರಿಂದ ಎಲ್ಲ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಗ್ರಾಮಸ್ಥರು ಪ್ರಯಾಣಿಕರನ್ನು ರಕ್ಷಣೆ ಮಾಡಿ ರಸ್ತೆ ಬದಿ ಕೂರಿಸಿ ನೀರು ಕೊಟ್ಟು ವಿಶ್ರಾಂತಿ ಪಡೆಯುವಂತೆ ಮಾಡಿದ್ದಾರೆ. ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಂಬುಲೆನ್ಸ್‌ನಲ್ಲಿ ಗಾಯಾಳು ಪ್ರಯಾಣಿಕರನ್ನು ಮುಂಡರಗಿ ತಾಲೂಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ, ಸಾರಿಗೆ ಬಸ್ ಕಂಡಿಷನ್ ಇಲ್ಲದ ಕಾರಣ ಅಪಘಾತ ಸಂಭವಿಸಿದೆ ಎಂದು ಪ್ರಯಾಣಿಕರು ಆರೋಪ ಮಾಡಿದ್ದಾರೆ.

Follow Us:
Download App:
  • android
  • ios