ಕೊರೋನಾ ಸೋಂಕಿತ ಬಾಲಕನನ್ನ ಹಿಡಿದಿಟ್ಟುಕೊಳ್ಳುವುದೇ ವೈದ್ಯರಿಗೆ ಸವಾಲಿನ ಕೆಲಸ..!
ಆಸ್ಪತ್ರೆಯಲ್ಲಿ ಯಾರ ಜೊತೆಗೆ ಮಾತನಾಡಲು ಅವಕಾಶ ಇಲ್ಲದಿರುವುದು ಮತ್ತು ಬಾಲಕನ ವಯಸ್ಸಿನವರು ಯಾರು ಇಲ್ಲದೇ ಇರೋದೇ ವೈದ್ಯರ ತಲೆನೋವಿಗೆ ಕಾರಣ| ಬಾಲಕ ಆರೋಗ್ಯವಾಗಿದ್ದರೂ ಕೂಡ ಆಸ್ಪತ್ರೆಯಲ್ಲಿಯೇ ಇರೋ ಅನಿವಾರ್ಯತೆ| ಬಳ್ಳಾರಿ ಜಿಲ್ಲೆಯಲ್ಲೊಂದು ವಿಶೇಷ ಪ್ರಕರಣಕ್ಕೆ ಸಾಕ್ಷಿಯಾಗಿರುವ ವೈದ್ಯರು|
ಬಳ್ಳಾರಿ(ಮೇ.02): ಮಾರಕ ಕೊರೋನಾ ಭೀತಿ ಮಧ್ಯೆ ಆಸ್ಪತ್ರೆಯಲ್ಲಿ ಬಾಲಕನೊಬ್ಬನನ್ನ ಹಿಡಿದಿಟ್ಟುಕೊಳ್ಳುವುದೇ ವೈದ್ಯರಿಗೆ ದೊಡ್ಡ ಸವಾಲಾದ ಘಟನೆ ನಗರದ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಪಿ.113 ಬಾಲಕ ಕೊರೋನಾ ಸೋಂಕಿನಿಂದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆಸ್ಪತ್ರೆಯಲ್ಲಿ ಯಾರ ಜೊತೆಗೆ ಮಾತನಾಡಲು ಅವಕಾಶ ಇಲ್ಲದಿರುವುದು ಮತ್ತು ಬಾಲಕನ ವಯಸ್ಸಿನವರು ಯಾರು ಇಲ್ಲದೇ ಇರೋದೇ ಡಾಕ್ಟರ್‌ಗಳಿಗೆ ದೊಡ್ಡ ತಲೆನೋವಿಗೆ ಕಾರಣವಾಗಿದೆ. ಹೀಗಾಗಿ ಬಾಲಕ ಮಾನಸಿಕ ಖಿನ್ನತೆಗೆ ಒಳಗಾಗ ದಂತೆ ನೋಡಿಕೊಳ್ಳಲು ವೈದ್ಯರು ಆಟಿಕೆ ಸಾಮಾನುಗಳನ್ನು ನೀಡಿದ್ದಾರೆ.
ಕೊರೊನಾ ವಾರಿಯರ್ಸ್‌ಗೆ ಪುಟಾಣಿ ಸಾಥ್; ಸಿಎಂ ಪರಿಹಾರ ನಿಧಿಗೆ 5 ಸಾವಿರ ಹಣ
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹೊಸಳ್ಳಿ ಮೂಲದ ಪಿ.113 ಬಾಲಕ ಮೈಸೂರು ಜಿಲ್ಲೆಯ ನಂಜನಗೂಡಿನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಪೋಷಕರಿಂದ ಕೊರೋನಾ ಸೋಂಕು ತಗುಲಿಸಿಕೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಕಳೆದೊಂಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿರುವ ಈ ಬಾಲಕನಿಗೆ ಕೊರೋನಾ ರೋಗದ ರೋಗದ ಯಾವುದೇ ಲಕ್ಷಣಗಳು ಇಲ್ಲವಾದ್ರೂ ಟೆಸ್ಟ್ ವೇಳೆ ಪಾಸಿಟಿವ್ ತೋರಿಸುತ್ತಿದೆ.
ಈತನ ಜೊತೆಗೆ ಮತ್ತು ನಂತರ ಬಂದವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಈ ಬಾಲಕನಿಗೆ ಮಾತ್ರ ಇನ್ನೂ ಬಿಡುಗಡೆ ಭಾಗ್ಯ ದೊರೆತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 13 ಪ್ರಕರಣದ ಪೈಕಿ 7 ಜನ ಬಿಡುಗಡೆಗೊಂಡಿದ್ದಾರೆ. ಉಳಿದ ಆರು ಸೋಂಕಿತರ ಪೈಕಿ ಈ ಬಾಲಕನು ಒಬ್ಬನು. ಈ ಬಾಲಕನಿಂದ ಆಸ್ಪತ್ರೆಯ ವೈದ್ಯರಿಗೆ ಮಾತ್ರ ಎಲ್ಲಿಲ್ಲದ ತಲೆನೋವಿಗೆ ಕಾರಣವಾಗಿದೆ.