Asianet Suvarna News Asianet Suvarna News

ಹರ್ಯಾಣ ಸರ್ಕಾರ ವಜಾಗೆ ಕಾಂಗ್ರೆಸ್‌ ಪಟ್ಟು: ಬಿಜೆಪಿ ಸಿಎಂ ನಯಬ್‌ ಸಿಂಗ್ ಹೇಳಿದ್ದೇನು?

3 ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದ ಕಾರಣ ಹರ್ಯಾಣ ಬಿಜೆಪಿ ಸರ್ಕಾರಕ್ಕೆ ಪತನದ ಭೀತಿ ಆವರಿಸಿದ್ದು, ಸತತ 2ನೇ ದಿನವಾದ ಬುಧವಾರ ಕೂಡ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿದೆ. ಬಿಜೆಪಿ ತನ್ನ ಸರ್ಕಾರ ಸುಭದ್ರವಾಗಿದೆ.

Haryana government sacked by Congress What BJP CM Nayab Singh Saini said gvd
Author
First Published May 9, 2024, 9:17 AM IST

ಚಂಡೀಗಢ (ಮೇ.09): 3 ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದ ಕಾರಣ ಹರ್ಯಾಣ ಬಿಜೆಪಿ ಸರ್ಕಾರಕ್ಕೆ ಪತನದ ಭೀತಿ ಆವರಿಸಿದ್ದು, ಸತತ 2ನೇ ದಿನವಾದ ಬುಧವಾರ ಕೂಡ ಅನಿಶ್ಚಿತ ಪರಿಸ್ಥಿತಿ ಮುಂದುವರಿದಿದೆ. ಬಿಜೆಪಿ ತನ್ನ ಸರ್ಕಾರ ಸುಭದ್ರವಾಗಿದೆ. ಕೆಲವು ವಿಪಕ್ಷ ನಾಯಕರು ನಮ್ಮ ಸಂಪರ್ಕಸಲ್ಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದರೆ, ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಕಾಂಗ್ರೆಸ್‌ ಒತ್ತಾಯಿಸಿದೆ.

ಮುಖ್ಯಮಂತ್ರಿ ನಯಬ್‌ ಸಿಂಗ್‌ ಸೈನಿ ಮಾತನಾಡಿ, ‘ನಮ್ಮ ಸರ್ಕಾರ ಸುರಕ್ಷಿತವಾಗಿದೆ. ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದೆ’ ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಮನೋಹರಲಾಲ್‌ ಖಟ್ಟರ್‌ ಮಾತನಾಡಿ, ಕೆಲವು ಕಾಂಗ್ರೆಸ್‌ ಹಾಗೂ ವಿಪಕ್ಷ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲಿ ಯಾರು ಎಂಬುದು ಬಯಲಾಗಲಿದೆ ಎಂದು ಬಾಂಬ್‌ ಸಿಡಿಸಿದ್ದಾರೆ.

ಸ್ನೇಹಿತರ ಬಗ್ಗೆಯೇ ಪ್ರಧಾನಿ ಮೋದಿ ಟೀಕೆ ಏಕೆ?: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

ಈ ನಡುವೆ, ವಿಪಕ್ಷ ಜೆಜೆಪಿ ಮುಖಂಡ ದುಷ್ಯಂತ್‌ ಚೌಟಾಲಾ ಮಾತನಾಡಿ, ‘ಕಾಂಗ್ರೆಸ್‌ ಪಕ್ಷ ಅವಿಶ್ವಾಸ ನಿರ್ಣಯ ಮಂಡಿಸಿದರೆ ನಮ್ಮ ಪಕ್ಷ ನಿರ್ಣಐ ಬೆಂಬಲಿಸಲಿದೆ. ಎಲ್ಲವೂ ಕಾಂಗ್ರೆಸ್‌ ಮೇಲೆ ಅವಲಂಬಿತವಾಗಿದೆ’ ಎಂದಿದ್ದಾರೆ. ಈ ನಡುವೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಉದಯ ಭಾನ್‌ ಮಾತನಾಡಿ, ‘ಸರ್ಕಾರ ಅಲ್ಪಮತಕ್ಕೆ ಇಳಿದಿದೆ. ಹೀಗಾಗಿ ಕೂಡಲೇ ಸರ್ಕಾರ ವಜಾ ಮಾಡಿ ವಿಧಾನಸಭೆ ವಿಸರ್ಜಿಸಬೇಕು ಹಾಗೂ ಹೊಸದಾಗಿ ಚುನಾವಣೆಗಳನ್ನು ಘೋಷಿಸಬೇಕು ಎಂದು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಪತ್ರ ಬರೆಯುತ್ತೇವೆ’ ಎಂದು ಹೇಳಿದ್ದಾರೆ.

ಮೂವರಿಂದ ಬೆಂಬಲ ವಾಪಸ್: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಪಕ್ಷಗಳು,ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಇದರ ನಡುವೆ ಹರ್ಯಾಣದಲ್ಲಿ ಬಿರುಗಾಳಿ ಎದ್ದಿದೆ. ಬಿಜೆಪಿ ನೇತೃತ್ವದ ನಯಬ್ ಸಿಂಗ್ ಸೈನಿ ಸರ್ಕಾರದ ಬುಡ ಅಲುಗಾಡುತ್ತಿದೆ. ಕಾರಣ ಮೂವರು ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿರುವ ಮೂವರು ಪಕ್ಷೇತರರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. 

ಕೋವಿಶೀಲ್ಡ್‌ ಅಡ್ಡಪರಿಣಾಮ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ

ಪಕ್ಷೇತರ ಶಾಸಕರಾದ ಸೊಂಬೀರ್ ಸಾಂಗ್ವಾನ್, ರಂಧೀರ್ ಗೊಲ್ಲೆನ್ ಹಾಗೂ ಧರ್ಮಪಾಲ್ ಗೊಂಡರ್  ಇದೀಗ ಕಾಂಗ್ರೆಸ್‌ನತ್ತ ವಾಲಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಮೂವರು ಪಕ್ಷೇತರ ಶಾಸಕರು ಬೆಂಬಲ ವಾಪಸ್ ಪಡೆದಿರುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಹರ್ಯಾಣ ಮಾಡಜಿ ಸಿಂ ಭೂಪೇಂದ್ರ ಪಟೇಲ್ ಹಾಗೂ ಕಾಂಗ್ರೆಸ್ ಇತರ ನಾಯಕರ ಜೊತೆ ಸುದ್ದಿಗೋಷ್ಠಿ ನಡೆಸಿದ್ದಾರೆ.

Follow Us:
Download App:
  • android
  • ios