ಹೈದರಾಬಾದ್ ಪೊಲೀಸರನ್ನು ನೋಡಿ ಕಲಿರಿ: ಯುಪಿ ಪೊಲೀಸರಿಗೆ ಮಾಯಾವತಿ ಸಲಹೆ!
ದಿಶಾ ಹತ್ಯಾಚಾರ ಆರೋಪಿಗಳನ್ನು ನರಕಕ್ಕೆ ಕಳುಹಿಸಿದ ಪೊಲೀಸರು| ಪೊಲೀಸ್ ಎನ್‌ಕೌಂಟರ್‌ನಲ್ಲಿ ದಿಶಾ ಹತ್ಯಾಚಾರ ಆರೋಪಿಗಳು ಫಿನಿಷ್| ಪೊಲೀಸ್ ಕಾರ್ಯಾಚರಣೆಗೆ ದೇಶಾದ್ಯಂತ ಸಂಭ್ರಮಾಚರಣೆ| ಹತ್ಯಾಚಾರ ಆರೋಪಿಗಳನ್ನು ಕೊಂದ ಪೊಲೀಸರಿಗೆ ಧನ್ಯವಾದಗಳ ಮಹಾಪೂರ| ಹೈದರಾಬಾದ್ ಪೊಲೀಸರನ್ನು ನೋಡಿ ಕಲಿಯಿರಿ ಎಂದ ಮಾಯಾವತಿ| ಉತ್ತರಪ್ರದೇಶ ಪೊಲೀಸರಿಗೆ ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಸಲಹೆ| 'ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಉತ್ತರಪ್ರದೇಶ ಪೊಲೀಸರು ವಿಫಲ'| ಹೈದರಾಬಾದ್ ಪೊಲೀಸರಿಂದ ಸ್ಪೂರ್ತಿ ಪಡೆಯಲಿ ಎಂದ ಮಾಯಾವತಿ|
ಲಕ್ನೋ(ಡಿ.06): ದಿಶಾ ಹತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿರುವ ತೆಲಂಗಾಣ ಪೊಲೀಸರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ರಾಕ್ಷಸರನ್ನು ನರಕಕ್ಕೆ ಕಳುಹಿಸಿದ ಪೊಲೀಸರಿಗೆ ಧನ್ಯವಾದಗಳ ಸುರಿಮಳೆಯೇ ಆಗುತ್ತಿದೆ.
ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!
ಇನ್ನು ದಿಶಾ ಹತ್ಯಾಚಾರಿಗಳನ್ನು ಕೊಂದ ಹೈದರಾಬಾದ್ ಪೊಲೀಸರ ನಡೆಯನ್ನು, ಉತ್ತರಪ್ರದೇಶ ಮಾಜಿ ಸಿಎಂ ಹಾಗೂ ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಸಮರ್ಥಿಸಿಕೊಂಡಿದ್ದಾರೆ.
ಹೈದರಾಬಾದ್ ಪೊಲೀಸರ ಕ್ರಮ ಶ್ಲಾಘನೀಯವಾಗಿದ್ದು, ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಟ್ಟ ಹೈದರಾಬಾದ್ ಪೊಲೀಸರು ಅಭಿನಂದನಾರ್ಹರು ಎಂದು ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!
ಇದೇ ವೇಳೆ ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾಗಿರುವ ಉತ್ತರಪ್ರದೇಶ ಪೊಲೀಸರು, ಹೈದರಾಬಾದ್ ಪೊಲೀಸರಿಂದ ಪಾಠ ಕಲಿಯಬೇಕು ಎಂದು ಮಾಯಾವತಿ ಸಲಹೆ ನೀಡಿದ್ದಾರೆ.
ಹೈದರಾಬಾದ್ ಎನ್‌ಕೌಂಟರ್: ಎಲ್ಲೆಲ್ಲೂ ಸಂಭ್ರಮಾಚರಣೆ, ಪೊಲೀಸರ ಮೇಲೆ ಹೂಮಳೆ!
ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪೊಲೀಸರು ಹೈದರಾಬಾದ್ ಪೊಲೀಸರಿಂದ ಸ್ಫರ್ತಿ ಪಡೆಯಬೇಕು ಎಂದು ಮಾಯಾವತಿ ಹೇಳಿದ್ದಾರೆ.
ಕಾನೂನುಬಾಹಿರ ಎನ್‌ಕೌಂಟರ್ ಅಪಾಯ: ತರೂರ್, ಮನೇಕಾ ಅಭಿಪ್ರಾಯ!
ಡಿಸೆಂಬರ್ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ