Asianet Suvarna News Asianet Suvarna News

ತರಕಾರಿ ಹಣ್ಣು ತಿನ್ನಿ, ವಾಕ್ ಮಾಡಿ ಅನ್ನೋದೆಲ್ಲ ಹಳೇದಾಯ್ತು, ಹೊಸದೇನಿದೆ?

ಹೊಸ ವರ್ಷ ಶುರುವಾಗಿದೆ. ಈ ವರ್ಷವಿಡೀ ಆರೋಗ್ಯದಿಂದಿರುತ್ತೇನೆ ಅನ್ನುವ ನಿಯಮ ಹಾಕಿಕೊಳ್ಳೋಣ. ವಾಕ್ ಮಾಡೋದು, ಚೆನ್ನಾಗಿ ನೀರು ಕುಡಿಯೋದು ಇತ್ಯಾದಿಗಳು ನಿಮಗೆ ಗೊತ್ತಿದ್ದದ್ದೇ. ಇದರ ಜೊತೆಗೆ ಬಾಡಿ ಮೈಂಡ್‌ಗೆ ಹುರುಪು ತುಂಬುವಲ್ಲಿಕಾಳಜಿ ಮಾಡೋಣ. ನ್ಯೂ ಯಿಯರ್ ಹ್ಯಾಪಿಯಾಗಿರಲಿ.
 

5 health tips to follow to make 2020 life beautiful
Author
Bangalore, First Published Jan 6, 2020, 4:26 PM IST

ತಿನ್ನೋದು ಚಪಲಕ್ಕಲ್ಲ, ಜೀವಕ್ಕೆ!

ಗಬಗಬ ಮುಕ್ಕೋದು, ಕೆಲಸಕ್ಕೆ ಓಡೋದು ಅಥವಾ ಮೊಬೈಲ್ ಸ್ಕ್ರಾಲ್ ಮಾಡ್ತಾ ತಿನ್ನೋದು, ತಿಂದಿದ್ದು ಆಹಾರವಾ ಮಣ್ಣಾ ಒಂದೂ ಗೊತ್ತಾಗಲ್ಲ. ಇದರಿಂದ ಏನು ಪ್ರಯೋಜನ.. ತಿಂದದ್ದು ಯಾಂತ್ರಿಕವಾದಷ್ಟು ಅದು ನಮ್ಮ ಮೈ ಮಾತ್ರವಲ್ಲ ಮನಸ್ಸಿಗೂ ಹತ್ತಲ್ಲ, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆ ಇದರಿಂದ ಹೆಚ್ಚಾಗುತ್ತೆ. ಇಂಥದ್ದೊಂದು ಕೆಟ್ಟ ಅಭ್ಯಾಸವನ್ನು ಹಳೆ  ರ್ಷದ ತೆಕ್ಕೆಯೊಳಗೆ ಸೇರಿಸಿ ಬಿಡಿ. ಹೊಸ ವರ್ಷಕ್ಕೆ ತಿನ್ನೋದನ್ನು ಮನಸ್ಸಿಟ್ಟು ತಿನ್ನಿ. ಜಗತ್ತಿನಲ್ಲಿ ಎಷ್ಟೋ ಜನ ಒಂದು ತುತ್ತು ಊಟಕ್ಕೂ ಒದ್ದಾಡುತ್ತಿರುವಾಗ ನಿಮಗೆ ಅಷ್ಟು ರುಚಿ ರುಚಿಯಾದ ಆಹಾರ ಸಿಕ್ಕಿರೋದು ಎಷ್ಟು ಅದೃಷ್ಟ ಅಲ್ವಾ, ಆ ಬಗ್ಗೆ ಯೋಚಿಸಿ.

ಇದನ್ನ ತಿಂದ್ರೆ ಹ್ಯಾಂಗ್ ಓವರ್‌ನಿಂದ ಪಾರಾಗ್ತೀರ!

ಪಾಸಿಟಿವ್ ಆಗಿರಿ, ಜಗತ್ತೇ ನಿಮ್ಮ ಜೊತೆಗಿರುತ್ತೆ.

ಸಣ್ಣಪುಟ್ಟ ನೋವು, ಅವಮಾನ ಇಂಥದ್ದು ಪ್ರತಿಯೊಬ್ಬರಿಗೂ ಆಗುತ್ತಿರುತ್ತೆ. ಆದರೆ ಅವುಗಳಿಗೆ ಜಗ್ಗಿದ್ರೋ ಮುಗೀತು, ನಿಮ್ಮ ಮನಸ್ಸು, ಸುತ್ತಮುತ್ತಲಿನವರು ಎಲ್ಲ ಅದನ್ನು ಹೆಚ್ಚಿಸುತ್ತಲೇ ಹೋಗುತ್ತಾರೆ. ಯಾವ ವಿಷಯವನ್ನೂ ಮನಸ್ಸಿಗೆ ತಗೋಬೇಡಿ. ದಾರಿಯಲ್ಲಿ ಹೋಗುವಾಗ ಮೈಗೆ ಧೂಳುತಾಗುತ್ತೆ, ಶ್ಶೀ ಅನಿಸುತ್ತೆ, ಕೊಡವಿಕೊಂಡು ಮುಂದೆ ಹೋಗಲ್ವಾ, ಹಾಗೇ. ಎಲ್ಲ ನೋವುಗಳನ್ನೂ ಧೂಳು ಕೊಡವಿದ ಹಾಗೆ ಕೊಡವಿಬಿಡಿ, ಖುಷಿಯನ್ನು ಎರಡೂ ಕೈ ಚಾಚಿ ಆಲಿಂಗಿಸಿಕೊಳಿ

ಕೋಲ್ಡ್‌ ಕೋಲ್ಡ್‌ ಪಾದಗಳನ್ನು ಬೆಚ್ಚಗಿಡೋದು ಹೇಗೆ?

ನಿದ್ದೆ ಮಾಡೋ ಟೈಮು ಬಹಳ ಮುಖ್ಯ

ನಿದ್ದೆ ಹೋಗೋ ಟೈಮ್‌ನಲ್ಲೇ ನಮಗೆ ಯಾವುದೋ ಮೆಸೇಜ್ ಚೆಕ್ ಮಾಡ್ಬೇಕು ಅನಿಸುತ್ತೆ, ಯಾವುದೋ ಪ್ರಾಡಕ್ಟನ್ ರೇಟ್ ತಿಳ್ಕೋಬೇಕು ಅನಿಸುತ್ತೆ, ಇನ್‌ಸ್ಟಾದಲ್ಲೊಮ್ಮೆ ಇಣುಕೋಣ ಅಂತನಿಸುತ್ತೆ.. ಹೀಗನಿಸಿದ್ದಕ್ಕೆಲ್ಲ ಎಸ್ ಎಸ್ ಅಂದ್ರೆ ಮುಗೀತು. ನಿದ್ದೆ ಮಾಡ್ಬೇಕಾದ ಟೈಮ್‌ನಲ್ಲಿ ಮಾಡಲ್ಲ, ಆಮೇಲೆ ಮಲಗಿದ್ರೆ ನಿದ್ದೆ ಬರಲ್ಲ. ಬೆಳಗಿನ ಜಾವ ಗಾಢ ನಿದ್ದೆ ಹತ್ತಿರುತ್ತೆ. ಅಷ್ಟೊತ್ತಿಗೇ ಅಲರಾಂ ಸಹ ಹೊಡ್ಕೊಳುತ್ತೆ. ನೀವು ಕರೆಕ್ಟ್ ಟೈಮ್‌ಗೆ ಮಲಗಿದ್ರೆ ಅಲರಾಂ ಅಗತ್ಯವೇ ಇರಲ್ಲ. ಪೂರ್ಣ ನಿದ್ದೆಯಾದ್ರೆ ಲವಲವಿಕೆ ಹೆಚ್ಚು. ಹೊಸ ವರ್ಷ ಸೌಂಡ್ ಸ್ಲೀಪ್ ಇರಲಿ. ದಿನದ ಲವಲವಿಕೆ ಹೆಚ್ಚಲಿ.

ಚಾಲೆಂಜ್ ತಗೊಳ್ಳಿ

ನಾವು ನಮಗೇ ಒಂದು ಟಾರ್ಗೆಟ್ ಕೊಡದೇ ಹೋದರೆ ನಮ್ಮಿಂದ ಆ ಕೆಲಸ ಪೂರೈಸಲು ಆಗಲ್ಲ. ಹಾಗಾಗಿ ನಿಮಗೇ ನೀವು ಚಾಲೆಂಜ್ ಮಾಡೋದು ಬಹಳ ಇಂಪಾರ್ಟೆಂಟ್. ಇಷ್ಟು ಅವಧಿಯೊಳಗೆ ನಾನು ಈ ಕೆಲಸ ಮುಗಿಸಿಯೇ ತೀರುತ್ತೇನೆ. ಇದು ಚಾಲೆಂಜ್ ಅಂದ್ಕೊಳ್ಳಿ. ಆ ಮೇಲೆ ಅದನ್ನು ರೀಚ್ ಮಾಡೋದಕ್ಕೆ ಶ್ರಮಿಸಿ. ಎಂಡ್ ಆಫ್ದಿ ಡೇ ನೀವು ಒಂದು ಹಂತದ ಸಾಧನೆ ಮಾಡಿರುತ್ತೀರಾ. ಯಶಸ್ಸು ಸಿಗುತ್ತೋ ಬಿಡುತ್ತೋ ಅದಕ್ಕೆಲ್ಲ ತಲೆ ಕೆಡಿಸೋದು ಬೇಡ. ಚಾಲೆಂಜ್ ತಗೊಂದು ಮುಗಿಸಿ, ಫಲಿತಾಂಶ ಪಾಸಿಟಿವ್ ಆಗಿಯೇ ಇರುತ್ತೆ.

ಶುಗರ್‌ ಕಾಯಿಲೆ ಇದ್ದರೆ ಎಚ್ಚರ: ದಿನಕ್ಕೆರಡು ಬಾಳೆಹಣ್ಣು ತಿಂದರೆ ಅಪತ್ತು ತಪ್ಪಿದ್ದಲ್ಲ!

ಹತ್ತೇ ಹತ್ತು ನಿಮಿಷ ವಾಕ್ ಮಾಡ್ತೀನಿ ಅಂದ್ಕೊಳ್ಳಿ

ಮೊಬೈಲ್ ಪಕ್ಕಕ್ಕಿಟ್ಟು ಹತ್ತೇ ಹತ್ತು ನಿಮಿಷ ವಾಕ್ ಮಾಡ್ತೀನಿ ಅಂತ ಹೊರಡಿ. ಆ ಹತ್ತು ನಿಮಿಷದಲ್ಲಿ ನಿಮಗೆ ನಡಿಗೆ ನೀಡುವ ಖುಷಿ ಮನದಟ್ಟಾಗುತ್ತೆ. ಟೈಮ್ ಇದ್ರೆ ಮತ್ತೂ ಹತ್ತು ನಿಮಿಷ ನಡೆದೇ ನಡೀತೀರಿ. ಮತ್ತೆ ಟೈಮ್ ಸಿಗಲ್ಲ ಅಂತ ಗಡಿಬಿಡಿಯಲ್ಲಿ ಟೆನ್ಶನ್ ಮಾಡ್ಕೊಂಡು ನಡಿಯೋದರಲ್ಲಿ ಅರ್ಥ ಇಲ್ಲ. ಹತ್ತೇ ಹತ್ತು ನಿಮಿಷ ಎಲ್ಲ ಟೆನ್ಶನ್, ಚಿಂತೆ ಇತ್ಯಾದಿ ನೆಗೆಟಿವ್‌ಗಳನ್ನು ಪಕ್ಕಕ್ಕಿಟ್ಟು ಮನಸ್ಸು ಕೂಲಾಗಿಟ್ಟು ವಾಕ್ ಮಾಡಿ. ಶುರುಶುರುವಿಗೆ ಕಷ್ಟ. ಹಾಡು ಕೇಳ್ತಾ ವಾಕ್ ಮಾಡ್ತಿದ್ರೆ ಮನಸ್ಸು ಅಲ್ಲೇ ಕೇಂದ್ರೀಕೃತವಾಗುತ್ತೆ.


 

Follow Us:
Download App:
  • android
  • ios