Asianet Suvarna News Asianet Suvarna News

ಬೆಂಗ್ಳೂರು ಕರಗದಲ್ಲಿ ಗೋವಿಂದನದ್ದೇ ಜಪ: ಸಿಎಂ ಭೇಟಿ ವೇಳೆ ಮೋದಿ, ಮೋದಿ... ಘೋಷಣೆ..!

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. ಕರಗದ ಅಕ್ಕಪಕ್ಕದಲ್ಲಿ ವೀರಕುಮಾರರು ಕರಗಕ್ಕೆ ಭದ್ರತೆ ಒದಗಿಸಿದರು. ಇತಿಹಾಸ ಪ್ರಸಿದ್ದ ಬೆಂಗಳೂರು ಕರಗ ಶಕ್‌ತ್ಯುತ್ಸವ (ದೌಪದಿ ದೇವಿಯ ಕರಗ) ಮಂಗಳವಾರ ಮಧ್ಯ ರಾತ್ರಿ ಆರಂಭವಾಗಿ, ಬುಧವಾರ ಬೆಳಗಿನ ಜಾವದ ವರೆಗೆ ನಗರದ ನಾನಾ ಭಾಗಗಳಲ್ಲಿ ಕರಗ ಸಾಗಿತು.

Historical Bengaluru Karaga Utsav Held on April 23rd grg
Author
First Published Apr 24, 2024, 11:47 AM IST

ಬೆಂಗಳೂರು(ಏ.24):  ಚೈತ್ರಮಾಸದ ಶುದ್ಧಪೌರ್ಣಿಮೆ ರಾತ್ರಿ ಬೆಳದಿಂಗಳ ಬೆಳಕಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಮಂಗಳವಾರ ಮಧ್ಯರಾತ್ರಿ ಗೋವಿಂದಾ... ಗೋವಿಂದಾ... ನಾಮಸ್ಮರಣೆ ಯೊಂದಿಗೆ ಲಕ್ಷಾಂತರ ಭಕ್ತರು ಕಣ್ಣುಂಬಿಕೊಂಡು ಪುನೀತರಾದರು. ಮಂಗಳವಾರ ಬೆಳಗ್ಗೆಯಿಂದಲೇ ಭಕ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ದೇವಾಲ ಯದ ಆವರಣ ಮಲ್ಲಿಗೆ, ಕರ್ಪೂರದ ಪರಿಮಳ ದೊಂದಿಗೆ ಫಮಗುಡುತ್ತಿತ್ತು. ನಗರ್ತಪೇಟೆಯಲ್ಲಿ ಇರುವ ಧರ್ಮರಾಯ ಸ್ವಾಮಿ ಮಹಾ ರಥೋತ್ಸವ ಹೊರಡುತ್ತಿದ್ದಂತೆ, ಅದರ ಹಿಂದೆಯೇ ಗರ್ಭಗುಡಿಯಿಂದ ದೌಪದಿದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. ಕರಗದ ಅಕ್ಕಪಕ್ಕದಲ್ಲಿ ವೀರಕುಮಾರರು ಕರಗಕ್ಕೆ ಭದ್ರತೆ ಒದಗಿಸಿದರು. ಇತಿಹಾಸ ಪ್ರಸಿದ್ದ ಬೆಂಗಳೂರು ಕರಗ ಶಕ್‌ತ್ಯುತ್ಸವ (ದೌಪದಿ ದೇವಿಯ ಕರಗ) ಮಂಗಳವಾರ ಮಧ್ಯ ರಾತ್ರಿ ಆರಂಭವಾಗಿ, ಬುಧವಾರ ಬೆಳಗಿನ ಜಾವದ ವರೆಗೆ ನಗರದ ನಾನಾ ಭಾಗಗಳಲ್ಲಿ ಕರಗ ಸಾಗಿತು.

ಬೆಂಗಳೂರು ಕರಗದಲ್ಲಿ ರಕ್ತ ಚರಿತ್ರೆಯಾಗಿ ಬದಲಾದ ಪ್ರೇಮ ಕಥೆ; 'ಕೈವ' ಸತ್ಯತೆಗಳ ಬಗ್ಗೆ ಧನ್ವೀರ್

ನಗರದ ಆಯ್ದ ರಸ್ತೆಗಳಲ್ಲಿ ಕರಗ ಸಂಚರಿಸಿದರೂ ಕೂಡ ಇಡೀ ಬೆಂಗಳೂರಿಗರು ಕರಗ ನಡೆಯುವ ಜಾಗಕ್ಕೇ ಬಂದು ರಸ್ತೆ ಇಕ್ಕೆಲ, ಕಟ್ಟಡ, ಕಾಂಪೌಂಡ್ ಗಳ ಮೇಲೂ ನಿಂತು ದೇವರ ದರ್ಶನ ಪಡೆದರು. ಹೀಗಾಗಿ ಇಡೀ ಬೆಂಗಳೂರೇ ಕರಗಕ್ಕೆ ಸಾಕ್ಷಿಯಾಗಿತ್ತು. ನೆರೆ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಭಕ್ತರು ಕರಗ ಸಲ್ಲಿಸಿದ ಬಳಿಕ * ಕುಂಭದಲ್ಲಿ ದುರ್ಗೆಯನ್ನು ಆಹ್ವಾ ವೀಕ್ಷಣೆಗೆ ಆಗಮಿಸಿದ್ದು ಕಂಡು ಬಂತು.

ಕರಗ ಸಾಗಿದ ಮಾರ್ಗ

ವಿವಿಧ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸುತ್ತ ಸಾಗಿದ ಕರಗ ಮುಂಜಾನೆವರೆಗೆ ನಗರದ ಅಲಸೂರು ಪೇಟೆ, ಗಾಣಿಗರಪೇಟೆ, ನಗರ್ತರ ಪೇಟೆ, ಕಬ್ಬನ್ ಪೇಟೆ, ಉಪ್ಪಾರಪೇಟೆ, ಅಕ್ಕಿ ಪೇಟೆ, ಅರಳೇಪೇಟೆ, ಬಳೇಪೇಟೆ, ಕುಂಬಾರ ಪೇಟೆ, ಗೊಲ್ಲರಪೇಟೆ, ಮಾಮೂಲುಪೇಟೆ, ತಿಗಳರ ಪೇಟೆ, ಸುಣ್ಣಕಲ್ ಪೇಟೆ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್‌ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಗಿದ ಹೂವಿನ ಕರಗ ಬೆಳಗಿನ ಜಾವದವರೆಗೂ ನಡೆಯಿತು.

ಸಾಂಪ್ರದಾಯಿಕ ಆಚರಣೆ: 

ಶಕ್ತಿ ದೇವತೆ ದೌಪದಿ ದೇವಿಯ ಹೆಸರಿನಲ್ಲಿ ನಡೆಯುವುದೇ ಹೂವಿನ ಕರಗ ಉತ್ಸವ ಅಂಗವಾಗಿ ಮಂಗಳವಾರ ಸಂಜೆ ಚಂದ್ರೋದಯವಾಗುತ್ತಿದ್ದಂತೆ ಶ್ರೀ ಧರ್ಮರಾಯ ದೇವಸ್ಥಾನದ ಆರ್ಚಕರಾದ ಜ್ಞಾನೇಂದ್ರ ಅವರು, ಗೌಡರು, ಗಣಾಚಾರಿ, ಗಂಟೆ ಪೂಜಾರಿಯ ಉಸ್ತು ವಾರಿಯಲ್ಲಿ ನೂರಾರು ವೀರಕುಮಾರರ ನಡುವೆ ಮಂಗಳವಾದ್ಯಗಳೊಂದಿಗೆ ಕಬ್ಬನ್ ಪಾರ್ಕ್‌ನಲ್ಲಿ ರುವ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಮಾಡಿ ಗಂಗಾ ಪೂಜೆ ನೆರವೇರಿಸಿದರು. ಅಲ್ಲಿಂದ ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹಿಂದಿರುಗಿದರು.

ಮಲ್ಲಿಗೆ ಹೂವಿನ ಅಲಂಕಾರ: 

ದೇವಾಲಯದಲ್ಲಿ ಪರಿವಾರ ಸಹಿತ ಧರ್ಮರಾಯಸ್ವಾಮಿಗೆ ಪೂಜೆನಿಸಿ, ಪೂಜಿಸಿ, ಅದಕ್ಕೆ ಹೂವಿನಿಂದ ಅಲಂಕಾರ3000 ಕೆ.ಜಿ. ಸೇಲಂ ಮೊಗ್ಗು ಕರಗಕ್ಕೆ ಸುಮಾರು 4 ಸಾವಿರ ಮಲ್ಲಿಗೆ ಹಾರಗಳು ಸೇರಿದಂತೆ 3 ಸಾವಿರ ಕೆ.ಜಿ. ಸೇಲಂ ಮಲ್ಲಿ ಗೆ ಹೂವು ಬಳಸಲಾಗಿದೆ. ಕರಗದಲ್ಲಿ ಪಾಲ್ಗೊಳ್ಳುವ ಸಹಸ್ರಾರು ವೀರಗಾರರಿಗೆ ಕರಗ ವಸ್ತ್ರ ಮತ್ತು ಪೇಟವನ್ನು ವಿತರಿಸಲಾಯಿತು. ಇದ ಲ್ಲದೆ ದೀಕ್ಷೆ ಪಡೆದ ಸಾವಿರಾರು ವೀರಕುಮಾರ ರಿಗೆ ದೀಕ್ಷಾಖಡ್ಗಗಳನ್ನೂ ಉಚಿತವಾಗಿ ನೀಡ ಲಾಯಿತು ಎಂದು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್ ಮಾಹಿತಿ ನೀಡಿದ್ದಾರೆ.

5ಕೆ.ಜಿ ಕರ್ಪೂರ ಸೇವೆ: 

ಮುಂಜಾನೆ ಅರ್ಚಕರು ಹಾಗೂ ವೀರಕುಮಾರರು ಎಂದಿನಂತೆ ಧರ್ಮ ರಾಯ ದೇವಸ್ಥಾನದಿಂದ ಕರಗದ ಕುಂಟೆಗೆ ಸಾಗಿ ಗಂಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಹರಕೆ ಹೊತ್ತ ಭಕ್ತರು ದೇವಾಲಯದ ಮುಂದೆ ರಾಶಿಗಟ್ಟಲೆ (5 ಸಾವಿರ ಕೆ.ಜಿ. ಅಧಿಕ) ಕರ್ಪೂರ ಉರಿಸಿದರು.ಮಧ್ಯಾಹ್ನ 3ಕ್ಕೆ ದೇವಾಲಯದಲ್ಲಿ ಬಳೆ ತೊಡಿಸುವ ಶಾಸ್ತ್ರನೆರವೇರಿತು. ನಂತರ ಅರ್ಜುನ ಮತ್ತು ದೌಪ ದಿ ದೇವಿಗೆ ವಿವಾಹ ಶಾಸ್ತ್ರ ಮಾಡಲಾಯಿತು. ಸಂಜೆ ಶಾಂತಿ ಹೋಮ, ಗಣ ಹೋಮ ನಡೆಯಿತು.

ಬೆಂಗಳೂರು: ಕರಗ ಹೊರುವ ಜ್ಞಾನೇಂದ್ರ ಹತ್ಯಗೆ ಯತ್ನ ಅನುಮಾನ..!

ಸಿಎಂ ಭೇಟಿ ವೇಳೆ ಮೋದಿ, ಮೋದಿ... ಘೋಷಣೆ

ಕರಗ ಉತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀ ಧರ್ಮರಾಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಅವರಿಗೆ ಶಾಸಕ ಹ್ಯಾರೀಸ್ ಸ್ವಾಗತ ಕೋರಿದರು. ಪಿ.ಆರ್.ರಮೇಶ್ ಸೇರಿದಂತೆ ಮೊದಲಾದವರಿದ್ದರು. ಈ ವೇಳೆ ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗಲಾಯಿತು.

ಪಲ್ಲಕ್ಕಿ ಉತ್ಸವ: 

ಕರಗ ಶಕ್‌ತ್ಯೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ನಗರದ ನಾನಾ ಭಾಗಗಳಿಂದ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಅಣ್ಣಮ್ಮ ದೇವಿ ಸೇರಿ ನಗರದ ಸುತ್ತಮುತ್ತಲ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹೊತ್ತ ರಥಗಳು ರಾತ್ರಿ ವೇಳೆಗೆ ಮಾರುಕಟ್ಟೆ ಪ್ರದೇಶ ತಲುಪಿದವು. ಮಹಾರಾಜರ ಕಾಲದ ಬೆಂಗಳೂರಿನ ತಿಗಳರಪೇಟೆ, ರಾಣಾಸಿಂಗ್ ಪೇಟೆ, ಅರಳೆಪೇಟೆ, ಅಕ್ಕಿಪೇಟೆ, ಬಳೆಪೇಟೆ, ಕಬ್ಬನ್‌ಪೇಟೆ, ಚಿಕ್ಕಪೇಟೆ ಇತ್ಯಾದಿಗಳಲ್ಲೆಲ್ಲ ಅಧಿಕ ಸಂಖ್ಯೆಯಲ್ಲಿರುವ ಕುಲಬಾಂಧವರು ಕಳೆದ ಒಂಭತ್ತು ದಿನಗಳಿಂದ ಕರಗ ಉತ್ಸವ ಆಚರಣೆಯಲ್ಲಿ ತೊಡಗಿದ್ದಾರೆ.

Follow Us:
Download App:
  • android
  • ios