Asianet Suvarna News Asianet Suvarna News

ಪೇ ಆನ್ ಲೈನ್ ಚರ್ಚಾ ಸ್ಪರ್ಧೆ: ಗಂಗಾವತಿ ಬಾಲಕನಿಗೆ ಪ್ರಧಾನಿಯಿಂದ ಅಭಿನಂದನಾ ಪ್ರಮಾಣ ಪತ್ರ

ಗಂಗಾವತಿಯಲ್ಲಿರುವ ಗಿರೀಶ ವೆಂಕೋಬ ಆಚಾರ ಸಾಗರ್‌ ಅವರ ಪುತ್ರ ರಾಘವೇಂದ್ರ ಸಗರ್‌ ಈಗ ಕೊಪ್ಪಳದ ಶಾರದ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ) ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಾರ್ಚ್ 2023 ರಲ್ಲಿ ಪೇ ಆನ್ ಲೈನ್ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Certificate of Congratulation from PM Narendra Modi to Gangavathi Boy grg
Author
First Published Oct 17, 2023, 8:25 PM IST

ರಾಮಮೂರ್ತಿ ನವಲಿ

ಗಂಗಾವತಿ(ಅ.17): ಕಳೆದ ಮಾರ್ಚ್‌ 2023ನಲ್ಲಿ ನಡೆದ ಪರೀಕ್ಷಾ ಪೇ ಆನ್ ಲೈನ್ ಚರ್ಚಾ ಸ್ಪರ್ಧೆಯಲ್ಲಿ ರಾಘವೇಂದ್ರ ಸಗರ್‌ ಎನ್ನುವ ವಿದ್ಯಾರ್ಥಿ ಭಾಗವಹಿಸಿದ್ದ.  ಪ್ರಧಾನಿ ನರೇಂದ್ರ ಮೋದಿ ಇದೀಗ ವಿದ್ಯಾರ್ಥಿಗೆ ಅಭಿನಂದನಾ ಪ್ರಮಾಣ ಪತ್ರ ನೀಡಿದ್ದಾರೆ.

ಗಂಗಾವತಿಯಲ್ಲಿರುವ ಗಿರೀಶ ವೆಂಕೋಬ ಆಚಾರ ಸಗರ್‌ ಅವರ ಪುತ್ರ ರಾಘವೇಂದ್ರ ಸಗರ್‌ ಈಗ ಕೊಪ್ಪಳದ ಶಾರದ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ) ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಾರ್ಚ್ 2023 ರಲ್ಲಿ ಪೇ ಆನ್ ಲೈನ್ ಚರ್ಚಾ ಸ್ಪರ್ಧೆಯಲ್ಲಿ  ಭಾಗವಹಿಸಿದ್ದರು.

ಉಲ್ಟಾ ಹೊಡೆದ ಮಹಾಲಿಂಗೇಶ್ವರ ಸ್ವಾಮೀಜಿ: ಮೋದಿ ಆಯ್ಕೆ ಮಾಡಿಲ್ಲಾಂದ್ರೆ ಯಾರೂ ಉಳಿಯೊಲ್ಲವೆಂದು ನಾನು ಹೇಳಿಲ್ಲ

ಇದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರುವ  ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸನಾ ಪ್ರಮಾಣ ಪತ್ರವನ್ನು  ವಿದ್ಯಾರ್ಥಿ ರಾಘವೇಂದ್ರ ಸಗರ ಅವರಿಗೆ ಅಂಚೆ ಮೂಲಕ ಕಳಿಸಿಕೊಟ್ಟಿದ್ದಾರೆ.

ಮೋದಿ ಅವರ ಪ್ರಮಾಣ ಪತ್ರಃ

ಪ್ರೀತಿಯ ರಾಘವೇಂದ್ರ ಸಗರ್‌,
20 April, 2023
''ಪರೀಕ್ಷಾ ಪೇ ಚರ್ಚಾ'ದಲ್ಲಿ ಭಾಗವಹಿಸಿದ್ದಕ್ಕಾಗಿ ಮತ್ತು ಈ ವಿಷಯದ ಕುರಿತು ನಿಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು, ನಿಮ್ಮಂತಹ ಯುವಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು ನನಗೆ ವಿಶೇಷ ಸಂತೋಷ ತರುತ್ತದೆ. ಇಂದಿನ ಯುವ ಪೀಳಿಗೆಯ ಶಕ್ತಿ, ಆತ್ಮವಿಶ್ವಾಸ ಮತ್ತು ಸಾಮರ್ಥ್ಯಗಳನ್ನು ನೋಡಿ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಮ್ಮ ದೇಶದ ಭರವಸೆ ಮತ್ತು ಆಕಾಂಕ್ಷೆಗಳು ಈ ಯುವ ಶಕ್ತಿಯ ಮೇಲಿವೆ.
ಇಂದು ಯುವಜನತೆಯ ಮುಂದೆ ಅಪರಿಮಿತ ಸಾಧ್ಯತೆಗಳು ಮತ್ತು ಅವಕಾಶಗಳಿವೆ, ತಂತ್ರಜ್ಞಾನ, ಔಷಧ, ನಾವೀನ್ಯತೆ, ಕ್ರೀಡೆ, ಸ್ಟಾರ್ಟ್‌ಅಪ್‌ಗಳು ಇತ್ಯಾದಿಯಾಗಿ ನಿಮ್ಮ ಭವಿಷ್ಯವನ್ನು ನಿರ್ಮಿಸಲು ನೀವು ಬಯಸುವ ಯಾವುದೇ ಕ್ಷೇತ್ರದಲ್ಲಿ ಸೌಲಭ್ಯಗಳು ಮತ್ತು ಸಂಪನ್ಮೂಲಗಳ ಕೊರತೆಯಿಲ್ಲ.

ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ!

ಮುಂದಿನ 25 ವರ್ಷಗಳು ಭಾರತದ 'ಅಮೃತ ಕಾಲ', ಈ ಅವಧಿಯಲ್ಲಿ ನಾವು ಭವ್ಯವಾದ, ಅಭಿವೃದ್ಧಿ ಹೊಂದಿದ ಮತ್ತು ಸಮರ್ಥ ರಾಷ್ಟ್ರವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇವೆ. ನಿಮ್ಮ ಶಿಕ್ಷಣ, ವೃತ್ತಿ ಮತ್ತು ನಿಮ್ಮ ವ್ಯಕ್ತಿತ್ವ ನಿರ್ಮಾಣದ ದೃಷ್ಟಿಯಿಂದಲೂ ಮುಂದಿನ 25 ವರ್ಷಗಳು ಬಹಳ ಮುಖ್ಯವಾದವು, ನಿಮ್ಮ ಭವಿಷ್ಯವನ್ನು ನೀವು ರೂಪಿಸಿಕೊಂಡಂತೆ, ದೇಶವು ನಿಮ್ಮಿಂದ ಹೊಸ ದಿಕ್ಕನ್ನು ಪಡೆಯುತ್ತದೆ.
ಭಾರತದ ಯುವ ಶಕ್ತಿಯು ದೇಶದ ಕುರಿತಾದ ನಿರ್ಣಯಗಳನ್ನು ತಮ್ಮ ವೈಯಕ್ತಿಕ ನಿರ್ಣಯಗಳ ಜೊತೆ-ಜೊತೆಗೆ ಕೊಂಡೊಯ್ಯುವ ಮೂಲಕ ಉಷ್ಣವನ್ನು ಪ್ರಗತಿಯ ಹೊಸ ಎತ್ತರಕ್ಕೆ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ.

ಜೀವನದ ಪ್ರತಿಯೊಂದು ಪರೀಕ್ಷೆಯಲ್ಲೂ ನಿಮಗೆ ಯಶಸ್ಸು ಸಿಗಲಿ. ಈ ನಂಬಿಕೆಯೊಂದಿಗೆ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ.
ನಿಮ್ಮ.
(ನರೇಂದ್ರ ಮೋದಿ)

Follow Us:
Download App:
  • android
  • ios