Asianet Suvarna News Asianet Suvarna News

ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹4.21ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ ಸಿ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸೂಕ್ತ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ 4.21 ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Lok sabha election 2024 Illicit traffic Gold jewelery worth Rs 4.21 crore seized at chikkamagalur rav
Author
First Published Mar 26, 2024, 8:37 PM IST

ಚಿಕ್ಕಮಗಳೂರು (ಮಾ.26) : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ ಸಿ ಹಳ್ಳಿ ಚೆಕ್ ಪೋಸ್ಟ್ ನಲ್ಲಿ ಸೂಕ್ತ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ 4.21 ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರಿನ ಬಿವಿಸಿ ಸಾರಿಗೆ ಸಂಸ್ಥೆಯ ಮಹೇಂದ್ರ ವಾಹನವನ್ನು ಎಂ.ಸಿ.ಹಳ್ಳಿ ಚೆಕ್‌ಪೊಸ್ಟ್ ಬಳಿ ತಡೆದು ಶೋಧಿಸಿದಾಗ ಭಾರಿ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿವೆ. ನಾಲ್ಕು ಕೋಟಿ ರೂ ಬೆಳೆಯ 6 ಕೆ.ಜಿ 586 ಗ್ರಾಂ ತೂಕದ ಚಿನ್ನದ ಆಭರಣ, 2,47 ಲಕ್ಷ ರೂ ಬೆಲೆ ಬಾಳುವ ಒಂದು ಕೆ.ಜಿ 873 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ದೊರಕಿವೆ.17.47ಲಕ್ಷ ರೂಪಾಯಿ ಬೆಲೆಯ ಒಂದು ಕೆ.ಜಿ 77 ಗ್ರಾಂ ತೂಕದ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 

 

ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ 5.85 ಕೋಟಿ ನಗದು ಜಪ್ತಿ

ಪ್ರಕರಣ ಸಂಬಂಧ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ವ್ಯವಸ್ಥಾಪಕ ಗೋಪಾಲ್ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ನಾಡ ಬಂದೂಕು ವಶ:  

ಅಕ್ರಮವಾಗಿ ಪರವಾನಗಿ ಇಲ್ಲದೆ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯಲ್ಲಿ ನಡೆದಿದೆ. ಬಣಕಲ್ ಹೋಬಳಿಯ ಬಸನಿ ಹೆಗ್ಗುಡ್ಲು ಗ್ರಾಮದ ಲೋಕೇಶ್  ಯಾವುದೇ ಪರವಾನಗಿ ಇಲ್ಲದೇ ಮನೆಯಲ್ಲಿ ಅಕ್ರಮವಾಗಿ ನಾಡ ಬಂದೂಕು ಮತ್ತು ಚರೆಯನ್ನು ಇಟ್ಟುಕೊಂಡಿದ್ದ ಎನ್ನಲಾಗಿದೆ. 

ಬೀದರ್‌: ಔರಾದ್ ಬಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 15.50 ಕೋಟಿ ಮೌಲ್ಯದ ಗಾಂಜಾ ವಶ

ಖಚಿತ ಮಾಹಿತಿ ಪಡೆದ ಬಣಕಲ್ ಪೊಲೀಸರು ದಾಳಿ ನಡೆಸಿ ಒಂಟಿ ನಳಿಕೆಯ ನಾಡ ಬಂದೂಕು ಹಾಗೂ 12 ಚರೆಯನ್ನು ವಶಪಡಿಸಿಕೊಂಡು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ  ಪ್ರಕರಣ ದಾಖಲಿಸಿದ್ದಾರೆ.

Follow Us:
Download App:
  • android
  • ios