Asianet Suvarna News Asianet Suvarna News

ಮುಷ್ತಾಕ್‌ ಅಲಿ ಟಿ20: ರಾಜ್ಯಕ್ಕೆ ದಾಖಲೆ ಜಯ!

ಭಾರತ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕ ಕ್ರಿಕೆಟ್ ತಂಡ ಸತತ 15 ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಇದರ ಜತೆ ಮುಷ್ತಾಕ್ ಅಲಿ ಟೂರ್ನಿಯಲ್ಲಿ ರಾಜ್ಯ ತಂಡ ಶುಭಾರಂಭ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Syed Mushtaq Ali Trophy 2019 Karnataka beat Uttarakhand for record 15th T20 win on row
Author
Visakhapatnam, First Published Nov 9, 2019, 10:38 AM IST

ವಿಶಾ​ಖ​ಪ​ಟ್ಟ​ಣಂ(ನ.09): ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿ​ಯಲ್ಲಿ ಕರ್ನಾ​ಟಕ ತಂಡ ಶುಭಾ​ರಂಭ ಮಾಡಿದೆ. ಶುಕ್ರ​ವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾ​ಟಕ, ಉತ್ತ​ರಾ​ಖಂಡ ವಿರುದ್ಧ 9 ವಿಕೆಟ್‌ಗಳ ಗೆಲುವು ಸಾಧಿಸಿತು. ರಾಜ್ಯ ತಂಡ​ಕ್ಕಿದು ಟಿ20 ಮಾದ​ರಿ​ಯಲ್ಲಿ ಸತತ 15ನೇ ಗೆಲುವು. ಸತ​ತ​ವಾಗಿ ಅತಿ​ಹೆಚ್ಚು ಟಿ20 ಪಂದ್ಯ​ಗ​ಳನ್ನು ಗೆದ್ದ ಭಾರ​ತದ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಿ​ದ್ದ​ಲ್ಲದೆ ಜಾಗ​ತಿಕ ಮಟ್ಟ​ದಲ್ಲಿ ಜಂಟಿ 2ನೇ ಸ್ಥಾನ​ಕ್ಕೇ​ರಿದೆ. ನ್ಯೂಜಿ​ಲೆಂಡ್‌ನ ಒಟಾಗೋ ತಂಡ ಸಹ ಸತತ 15 ಪಂದ್ಯ​ಗ​ಳನ್ನು ಗೆದ್ದಿದೆ. ಪಾಕಿ​ಸ್ತಾ​ನದ ಸಿಯಾಲ್‌ಕೋಟ್‌ ಸ್ಟಾಲಿ​ಯನ್ಸ್‌ ತಂಡ 2006ರಿಂದ 2010ರ ಅವ​ಧಿ​ಯ​ಲ್ಲಿ ಸತತವಾಗಿ 25 ಪಂದ್ಯ​ಗ​ಳನ್ನು ಗೆದ್ದು ವಿಶ್ವ ದಾಖಲೆ ಬರೆ​ದಿತ್ತು.

2017-18ರ ಮುಷ್ತಾಕ್‌ ಅಲಿ ಟಿ20ಯ ಸೂಪರ್‌ ಲೀಗ್‌ ಹಂತದ ಕೊನೆ 2 ಪಂದ್ಯ​ಗ​ಳನ್ನು ಗೆದ್ದಿದ್ದ ಕರ್ನಾ​ಟಕ, 2018-19ರ ಟೂರ್ನಿ​ಯಲ್ಲಿ ಒಂದೂ ಪಂದ್ಯ ಸೋಲದೆ ಚಾಂಪಿ​ಯನ್‌ ಆಗಿತ್ತು. ಗುಂಪು ಹಂತ​ದಲ್ಲಿ 7, ಸೂಪರ್‌ ಲೀಗ್‌ ಹಂತ​ದಲ್ಲಿ 4, ಫೈನಲ್‌ನಲ್ಲಿ ಗೆಲುವು ಸಾಧಿ​ಸಿತ್ತು.

ಸುಲಭ ಗುರಿ: ಪಂದ್ಯ​ದಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಉತ್ತ​ರಾ​ಖಂಡ 20 ಓವ​ರಲ್ಲಿ 6 ವಿಕೆಟ್‌ ನಷ್ಟಕ್ಕೆ 132 ರನ್‌ ಗಳಿ​ಸಿತು. ನಾಯಕ ತನ್ಮಯ ಶ್ರೀವಾ​ಸ್ತವ 39 ರನ್‌ ಗಳಿ​ಸಿ​ದರು. ಸುಲಭ ಗುರಿ ಬೆನ್ನ​ತ್ತಿದ ಹಾಲಿ ಚಾಂಪಿ​ಯನ್‌ ಕರ್ನಾ​ಟಕ, ಆರಂಭ​ದಲ್ಲೇ ಆರ್‌.ಸ​ಮ​ರ್ಥ್​(07) ವಿಕೆಟ್‌ ಕಳೆ​ದು​ಕೊಂಡರೂ, ಕೇವಲ 15.4 ಓವರ್‌ಗಳ​ಲ್ಲಿ ಗುರಿ ತಲು​ಪಿತು. ರೋಹನ್‌ ಕದಂ 55 ಎಸೆ​ತ​ಗ​ಳಲ್ಲಿ 67 ರನ್‌ ಸಿಡಿ​ಸಿ​ದರೆ, ದೇವ​ದತ್‌ ಪಡಿ​ಕ್ಕಲ್‌ 33 ಎಸೆ​ತ​ಗಳಲ್ಲಿ 53 ರನ್‌ ಚಚ್ಚಿ​ದರು.

ಶನಿ​ವಾರ ನಡೆ​ಯ​ಲಿ​ರುವ 2ನೇ ಪಂದ್ಯದಲ್ಲಿ ಕರ್ನಾ​ಟಕ ತಂಡ, ಬರೋಡಾ ವಿರುದ್ಧ ಸೆಣ​ಸ​ಲಿದ್ದು ಗೆಲು​ವಿನ ಓಟ ಮುಂದು​ವ​ರಿ​ಸಲು ಎದುರು ನೋಡು​ತ್ತಿದೆ.

ಸ್ಕೋರ್‌: 
ಉತ್ತ​ರಾ​ಖಂಡ 20 ಓವ​ರಲ್ಲಿ 132/6 (ತ​ನ್ಮಯ್‌ 39, ಮಿಥುನ್‌ 2-20, ಶ್ರೇಯಸ್‌ 2-20)
ಕರ್ನಾ​ಟಕ 15.4 ಓವ​ರಲ್ಲಿ 133/1 (ರೋ​ಹನ್‌ 67, ದೇವ​ದತ್‌ 53)

Follow Us:
Download App:
  • android
  • ios