Asianet Suvarna News Asianet Suvarna News

ಸುಪ್ರೀಂ ತೀರ್ಪಿನ ಮೇಲೆ ಶ್ರೀಶಾಂತ್ ಭವಿಷ್ಯ- BCCIಗೆ ಶುರುವಾಯ್ತು ಆತಂಕ!

ಬಿಸಿಸಿಐ ನಿಷೇಧ ತೆರೆವುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಕ್ರಿಕೆಟಿಗ ಶ್ರೀಶಾಂತ್ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಾದ ವಿವಾದದ ವಿವರ ಇಲ್ಲಿದೆ.

Supreme court reserve order on Sreesanth plea against life ban imposed by bcci
Author
Bengaluru, First Published Mar 1, 2019, 12:16 PM IST

ನವದೆಹಲಿ(ಮಾ.01): ಸ್ಫಾಟ್ ಫಿಕ್ಸಿಂಗ್ ಆರೋಪದಿಂದ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗ ಶ್ರೀಶಾಂತ್, ಬಿಸಿಸಿಐ ವಿರುದ್ಧ ಸುಪ್ರೀಂ ಕೋರ್ಟ್‌‌ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ನ್ಯಾಯಾಲಯ ಶ್ರೀಶಾಂತ್‌ಗೆ ಕ್ಲೀನ್ ಚಿಟ್ ನೀಡಿದ್ದರೂ ಬಿಸಿಸಿಐ ನಿಷೇಧ ತೆರೆವು ಮಾಡಿಲ್ಲ. ಇದೀಗ ಬಿಸಿಸಿಐ ವಿರುದ್ಧದ ಶ್ರೀಶಾಂತ್ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಪೂರ್ಣ ವಿರಾಮ ಹಾಕುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಮಾಂಡರ್ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಟೀಂ ಇಂಡಿಯಾ ಕ್ರಿಕೆಟಿಗರ ಪ್ರಾರ್ಥನೆ!

ನಿಷೇಧ ತೆರೆವುಗೊಳಿಸುವಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಶ್ರೀಶಾಂತ್ ಫೆ.28 ರಂದು ವಿಚಾರಣೆ ಹಾಜರಾಗಿದ್ದರು. ಶ್ರೀಶಾಂತ್ ಪರ ವಾದಿಸಿದ  ವಕೀಲ ಸಲ್ಮಾನ್ ಖುರ್ಷಿದ್, ಬಿಸಿಸಿಐ ನಡೆಯನ್ನ ಪ್ರಶ್ನಿಸಿದ್ದರು. ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ.

ಇದನ್ನೂ ಓದಿ: ಚೇತರಿಸಿಕೊಂಡ ಸ್ಮಿತ್-IPL ಟೂರ್ನಿಗೆ ಕಮ್‌ಬ್ಯಾಕ್?

ಫಿಕ್ಸಿಂಗ್ ಕುರಿತು  ಫೋನ್ ಕರೆಗಳು ಬರುತ್ತಿದ್ದರೂ ಬಿಸಿಸಿಐಗೆ ಅಥವಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಿಳಿಸಿಲಿಲ್ಲ. ಕ್ರೀಡೆಗೆ ಅಗೌರವ ನೀಡಿದ್ದಾರೆ. ಒಂದು ಓವರ್‌ನಲ್ಲಿ ಶ್ರೀಶಾಂತ್ 14 ರನ್ ನೀಡುವುದಾಗಿ ಹೇಳಿ, 14 ಲಕ್ಷ ರೂಪಾಯಿಗೆ ಪಡೆದುಕೊಂಡಿರುವ ಕುರಿತು ಫೋನ್ ಸಂಭಾಷಣೆ ಬಿಸಿಸಿಐ ಬಳಿ ಇದೆ. ಹೀಗಾಗಿ ಶ್ರೀ ವಿರುದ್ಧದ ನಿಷೇಧ ತೆರವು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಬಿಸಿಸಿಐ ವಾದಿಸಿದೆ. 

ಇದನ್ನೂ ಓದಿ: ವಿರಾಟ್ ಕೊಹ್ಲಿ ನೆಚ್ಚಿನ ಆಡಿ ಕಾರಿನ ಈಗಿನ ಪರಿಸ್ಥಿತಿ ಶೋಚನೀಯ- ಕಾರಣವೇನು?

ಫಿಕ್ಸಿಂಗ್ ಆರೋಪದಿಂದ ನಿಷೇಧಕ್ಕೊಳಗಾಗಿದ್ದ ಮೊಹಮ್ಮದ್ ಅಜರುದ್ದೀನ್ ಮೇಲಿ ನಿಷೇಧ ತೆರವು ಮಾಡಿದ್ದ ಬಿಸಿಸಿಐ, ಯಾವುದೇ ಆಧಾರವಿಲ್ಲದೆ ಶ್ರೀ ಮೇಲಿನ ನಿಷೇಧ ತೆರುವು ಯಾಕೆ ಮಾಡುತ್ತಿಲ್ಲ ಎಂದು ಸಲ್ಮಾನ್ ಖುರ್ಷಿದ್ ಪ್ರಶ್ನಿಸಿದ್ದಾರೆ. ಎರಡು ಕಡೆ ವಾದಗಳನ್ನೂ ಹಾಗೂ ದಾಖಲೆಗಳನ್ನ ಪರಿಶೀಲಿಸಿರುವ ಸುಪ್ರೀಂ ಕೋರ್ಟ್ ತೀಪ್ರು ಕಾಯ್ದಿರಿಸಿದೆ.

Follow Us:
Download App:
  • android
  • ios