Asianet Suvarna News Asianet Suvarna News

ಪಂದ್ಯ ಗೆದ್ದು ಮೈದಾನದಿಂದಲೇ ರಿಷಬ್ ಶೆಟ್ಟಿಗೆ ಆರ್‌ಸಿಬಿ ವೇಗಿ ಸಲ್ಯೂಟ್, ವಿಡಿಯೋ ವೈರಲ್!

ಆರ್‌ಸಿಬಿ ಪ್ಲೇ ಆಫ್ ಸಂಭ್ರಮ ಸದ್ಯಕ್ಕೆ ಮುಗಿಯುವ ಲಕ್ಷಣವಿಲ್ಲ. ಪಂದ್ಯ ಗೆದ್ದ ಬೆನ್ನಲ್ಲೇ ಆರ್‌ಸಿಬಿ ವೇಗಿ ಸಿರಾಜ್, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಸಲ್ಯೂಟ್ ಮಾಡಿದ್ದಾರೆ. ಇತ್ತ ರಿಷಬ್ ಕೂಡ ಅಭಿನಂದನೆ ಸಲ್ಲಿಸಿ ಫ್ಲೈಯಿಂಗ್ ಕಿಸ್ ನೀಡಿದ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
 

RCB mohammed siraj salute to Kannada Actor Rishabh Shetty after Victory against CSK in Palyoffs Birth ckm
Author
First Published May 19, 2024, 3:51 PM IST

ಬೆಂಗಳೂರು(ಮೇ.19) ಆರ್‌ಸಿಬಿ ರೋಚಕವಾಗಿ ಪ್ಲೇಆಫ್ ಪ್ರವೇಶಿಸಿದೆ. ಸಿಎಸ್‌ಕೆ ಮಣಿಸಿದ ಸಂಭ್ರಮ ಇನ್ನೂ ಮುಗಿದಿಲ್ಲ. ಬೀದಿ ಬೀದಿಯಲ್ಲಿ ಸಂಭ್ರಮ, ಮಾತು, ಚರ್ಚೆ ನಡೆಯುತ್ತಲೇ ಇದೆ. ಇನ್ನು ಆರ್‌ಸಿಬಿ ತಂಡ ಕೂಡ ಅಷ್ಟೇ ಎಂಜಾಯ್ ಮಾಡಿದೆ. ಸಿಎಸ್‌ಕೆ ವಿರುದ್ಧ ಅಂತಿಮ ಎಸೆತದಲ್ಲಿ ಆರ್‌ಸಿಬಿ ಗೆಲುವಿನ ಜೊತೆಗೆ ಪ್ಲೇಆಫ್ ಪ್ರವೇಶಿಸುತ್ತಿದ್ದಂತೆ ತಂಡದ ಮೈದಾನದಲ್ಲಿ ಭರ್ಜರಿ ಸೆಲೆಬ್ರೇಷನ್ ಮಾಡಿದೆ. ಕೊಹ್ಲಿ ಅಗ್ರೆಸ್ಸೀವ್ ಸಂಭ್ರಮ, ಸಹ ಆಟಗಾರರು ಅಭಿಮಮಾನಿಗಳ ಓಡೋಡಿ ಬಂದು ಧನ್ಯವಾದ ಹೇಳಿದ್ದಾರೆ. ಈ ವೇಳೆ ತಂಡದ ವೇಗಿ ಮೊಹಮ್ಮದ್ ಸಿರಾಜ್, ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಮೈದಾನದಿಂದಲೇ ಸಲ್ಯೂಟ್ ಹೊಡೆದು ಗೌರವ ಸೂಚಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಸಿಎಸ್‌ಕೆ ವಿರುದ್ಧ ಆರ್‌ಸಿಬಿ ರೋಚಕ ಗೆಲುವಿನೊಂದಿಗೆ ಪ್ಲೇ  ಆಫ್‌ಗೆ ಕಾಲಿಟ್ಟ ಬೆನ್ನಲ್ಲೇ ಮೈದಾನದಲ್ಲಿ ಸಂಭ್ರಮ ಶುರುವಾಗಿದೆ. ಆಟಗಾರರು ಅಭಿಮಮಾನಿಗಳ ಬದಿಯತ್ತ ಓಡೋಡಿ ಬಂದು ಸಂಭ್ರಮ ಆಚರಿಸಿದ್ದಾರೆ. ಇತ್ತ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಭರ್ಜರಿ ಸಂಭ್ರಮ ಆಚರಿಸಿದ್ದಾರೆ. ಈ ವೇಳೆ ಮೊಹಮ್ಮದ್ ಸಿರಾಜ್, ಗ್ಯಾಲರಿಯಲ್ಲಿ ಸಂಭ್ರಮಿಸುತ್ತಿದ್ದ ರಿಷಬ್ ಶೆಟ್ಟಿಗೆ ಮೈದಾನದಲ್ಲೇ ನಿಂತು ಸಲ್ಯೂಟ್ ಹೊಡೆದಿದ್ದಾರೆ.

Video: ಆರ್‌ಸಿಬಿ ಹುಡುಗಿಯರನ್ನು ಗೇಲಿ ಮಾಡಿದ ಸಿಎಸ್‌ಕೆ ಫ್ಯಾನ್ಸ್; ವಿಡಿಯೋ ವೈರಲ್ ಬೆನ್ನಲ್ಲೇ ಭಾರೀ ಆಕ್ರೋಶ

ರಿಷಬ್ ಶೆಟ್ಟಿಯತ್ತ ಕೈತೋರಿಸಿದ ಸಿರಾಜ್, ಇದು ನಿಮಗೆ ಎಂದು ಸಲ್ಯೂಟ್ ಹೊಡೆದಿದ್ದಾರೆ. ಇತ್ತ ರಿಷಬ್ ಶೆಟ್ಟಿ ಎದ್ದು ನಿಂತು ಮೊಹಮ್ಮದ್ ಸಿರಾಜ್ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಶುಭಹಾರೈಕೆಯನ್ನು ಕೈಸನ್ನೆಯಿಂದಲೇ ತಿಳಿಸಿದ್ದಾರೆ. ಜೊತೆಗೆ ಮೊಹಮ್ಮದ್ ಸಿರಾಜ್‌ಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಅತ್ತ ಸಿರಾಜ್ ಕೂಡ ಫ್ಲೈಯಿಂಗ್ ಕಿಸ್ ನೀಡಿದ್ದಾರೆ.

 

 

ರಿಷಬ್ ಶೆಟ್ಟಿ ನೋಡಿ ಸಲ್ಯೂಟ್ ಹೊಡೆದೆ ಸಿರಾಜ್ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ರೋಚಕ ಪಂದ್ಯ ವೀಕ್ಷಿಸಲು ರಿಷಬ್ ಶೆಟ್ಟಿ ಆಗಮಿಸಿದ್ದರು. ರಿಷಬ್ ಶೆಟ್ಟಿ ಹಾಗೂ ಆರ್‌ಸಿಬಿ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆಯಾಗಿ ಪಂದ್ಯ ವೀಕ್ಷಿಸಿದ್ದರು. ಇದೇ ವೇಳೆ ಇಬ್ಬರು ಜೊತೆಯಾಗಿ ಫೋಟೋಗೆ ಪೋಸ್ ನೀಡಿದ್ದರು. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಚೆನ್ನೈ ಎದುರು ಆರ್‌ಸಿಬಿ ಗೆಲುವಿನ ಬೆನ್ನಲ್ಲೇ ಆನಂದ ಭಾಷ್ಪ ಸುರಿಸಿದ ವಿರುಷ್ಕಾ ಜೋಡಿ..! ವಿಡಿಯೋ ವೈರಲ್

ರಿಷಬ್ ಶೆಟ್ಟಿ ಮಾತ್ರವಲ್ಲ, ಶಿವಾರಾಜ್ ಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು, ಸೆಲೆಬ್ರೆಟಿಗಳು ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ರೋಚಕ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದರು. 
 

Latest Videos
Follow Us:
Download App:
  • android
  • ios