Asianet Suvarna News Asianet Suvarna News

ಹಾಸಿಗೆಯಲ್ಲಿ ಸುಖ ಕೊಡೋದು ಹೇಗೆ? ಲೈಂಗಿಕ ರಾಯಭಾರಿಯಾಗಿ ಟಿಪ್ಸ್​ ಹೇಳಿದ ರಣವೀರ್​ ಸಿಂಗ್

ಹಾಸಿಗೆಯಲ್ಲಿ ಸುಖ ಕೊಡೋದು ಹೇಗೆ? ಲೈಂಗಿಕ ರಾಯಭಾರಿಯಾಗಿ ಟಿಪ್ಸ್​ ಹೇಳಿದ್ದಾರೆ ಕೇಳಿ ಬಾಲಿವುಡ್​​ ನಟ ರಣವೀರ್​ ಸಿಂಗ್  
 

Ranveer Singh Johnny Sins ad aims to introduce mens sexual health issues to mainstream suc
Author
First Published May 16, 2024, 5:22 PM IST

ತನಗೆ ಪತಿಯಿಂದ ಲೈಂಗಿಕ ಸುಖ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಪತ್ನಿ ಮನೆ ಬಿಟ್ಟು ಹೊರಡಲು ರೆಡಿಯಾಗುತ್ತಾಳೆ. ಆಗ ಬಾಲಿವುಡ್​ ನಟ ರಣವೀರ್​ ಸಿಂಗ್ ಆಗಮನವಾಗುತ್ತದೆ. ಪತಿಯ ಲೈಂಗಿಕತೆಯ ಬಗ್ಗೆ ಮನೆಯವರ ಎದುರೇ ಖುಲ್ಲಂ ಖುಲ್ಲಾ ಮಾಡುತ್ತಾಳೆ ಯುವತಿ. ಆತನಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುತ್ತಾಳೆ. ಇದನ್ನು ಕೇಳಿ ಮನೆಯವರಿಗೆ ಶಾಕ್​ ಆಗುತ್ತದೆ. ಆಕೆಯ ಮೇಲೆ ಕೈ ಮಾಡುತ್ತಾರೆ. ಅವಳು ಆಯತಪ್ಪಿ ಮಾಳಿಗೆಯ ಮೇಲಿನಿಂದ ಬೀಳುವ ಹಂತದಲ್ಲಿ ಇರುತ್ತಾಳೆ. ಆಗ ಅಲ್ಲಿಯೇ ಇರುವ ಬೋಲ್ಡ್​ ಕೇರ್​ ಉತ್ಪನ್ನವನ್ನು ರಣವೀರ್​ ಸಿಂಗ್​ ಗಂಡನಿಗೆ ನೀಡುತ್ತಾನೆ. ಅವನು ಮೇಲಿನಿಂದ ಹಾರಿ ಪತ್ನಿಯನ್ನು ರಕ್ಷಿಸುತ್ತಾನೆ, ಜೊತೆಗೆ ಅಲ್ಲಿ ಸುಖಕರವಾದ ಲೈಂಗಿಕ ಕ್ರಿಯೆಯೂ ನಡೆಯುತ್ತದೆ...!

ಇದೊಂದು ಜಾಹೀರಾತು. ಬೋಲ್ಡ್​ ಕೇರ್​ ಉತ್ಪನ್ನದ ರಾಯಭಾರಿಯಾಗಿ ಈಗ ರಣವೀರ್​ ಸಿಂಗ್​ ನೇಮಕಗೊಂಡಿದ್ದಾರೆ.  ವಯಸ್ಕ ಮನರಂಜನಾ ಜಾನಿ ಸಿನ್ಸ್ (ನಿಜವಾದ ಹೆಸರು ಸ್ಟೀವನ್ ವೋಲ್ಫ್) ಅವರ ಮುಂದಾಳತ್ವದಲ್ಲಿ ಬೋಲ್ಡ್ ಕೇರ್‌ನ ಔಟ್-ಆಫ್-ಬಾಕ್ಸ್ ಅಭಿಯಾನವು ಬಿಡುಗಡೆಯಾದ ಮೂರು ತಿಂಗಳ ನಂತರ ಇದೀಗ ನಟ ರಣವೀರ್​ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ಜಾನಿ ಸಿನ್ಸ್​ ಪ್ರಕಾರ,  ಸುಮಾರು 90 ಮಿಲಿಯನ್ ಪುರುಷರು ಕೆಲವು ರೀತಿಯ ಲೈಂಗಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಸಾರ್ವಜನಿಕ ಅಥವಾ ಖಾಸಗಿಯಾಗಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದ್ದರಿಂದ ಬೋಲ್ಡ್​ ಕೇರ್​ ಅಭಿಯಾನವನ್ನು ಶುರು ಮಾಡಲಾಗಿದೆ ಎಂದಿದ್ದಾರೆ.  

ಆ್ಯಕ್ಟಿಂಗ್​ ನೋಡಿ ಎಂದ್ರೆ ಮೊದ್ಲು ದೇಹ ನೋಡ್ತೇನಂತ ನಿಲ್ಲಿಸಿದ್ರು: ನಿರ್ದೇಶಕನ ಕರಾಳ ಮುಖ ಬಿಚ್ಚಿಟ್ಟ ನಟಿ ಒನಿಮಾ

ಯಾರಾದರೂ ಲೈಂಗಿಕ ಆರೋಗ್ಯ-ಸಂಬಂಧಿತ ಸಮಸ್ಯೆಗಳನ್ನು ಹೊಂದಿದವರಿಗೆ ತಿಳಿಹೇಳುವ ಅಭಿಯಾನ ಇದಾಗಿದೆ. ಪುರುಷರು ತಮ್ಮ ಈ ದೌರ್ಬಲ್ಯದಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎನ್ನುತ್ತಾರೆ  ಬೋಲ್ಡ್ ಕೇರ್‌ನ ಸಹ-ಸಂಸ್ಥಾಪಕ ಮತ್ತು CEO ರಜತ್ ಜಾಧವ್. ಅವರು ಡಿಸೆಂಬರ್ 2019 ರಲ್ಲಿ ಕಂಪನಿಯನ್ನು ರೂಪಿಸಿದರು ಮತ್ತು ಜುಲೈ 2020 ರಲ್ಲಿ ಅದನ್ನು ಪ್ರಾರಂಭಿಸಿದರು.

ಲೈಂಗಿಕ ಸಮಸ್ಯೆಗಳ ಕುರಿತು ಮಾತನಾಡಿರುವ ಜಾಧವ್, ಪುರುಷರ ಲೈಂಗಿಕ ಆರೋಗ್ಯವು ಭಾರತದಲ್ಲಿ ವಿಚಿತ್ರವಾದ ಸ್ಥಿತಿಯಲ್ಲಿದೆ.  1997 ಮತ್ತು ನಂತರದಲ್ಲಿ ಜನಿಸಿದವರಲ್ಲಿ ಇದು ಹೆಚ್ಚು.  ಅನೇಕರು ತಮ್ಮ ಹಿಂದಿನವರಿಗಿಂತ ಬಹಳ ಹಿಂದೆಯೇ ಲೈಂಗಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 20 ರ ದಶಕದ ಮಧ್ಯದಿಂದ ಕೊನೆಯ ವಯಸ್ಸಿನ ಪುರುಷರು ಹಾಸಿಗೆಯಲ್ಲಿ ಪ್ರದರ್ಶನ ನೀಡಲು ಹೆಣಗಾಡುತ್ತಿದ್ದಾರೆ, ಇದು ಸ್ವಾಭಾವಿಕವಾಗಿ ಅವರ ಸ್ವಾಭಿಮಾನದ ಮೇಲೆ ಪರಿಣಾಮ ಬೀರುತ್ತದೆ. ನಿಮಿರುವಿಕೆಯಾಗದೇ ದಾಂಪತ್ಯ ಜೀವನದಲ್ಲಿ ಸಾಕಷ್ಟು ಸಮಸ್ಯೆ ಅನುಭವಿಸುತ್ತಾರೆ.  ಭಾರತದಲ್ಲಿ ಲೈಂಗಿಕತೆಯ ಕುರಿತಾದ ಸಂಭಾಷಣೆ ಬಂದಾಗ  ಮಹಿಳೆಯರ ಲೈಂಗಿಕ ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರೂ  ಪುರುಷರು ತಮ್ಮ ಲೈಂಗಿಕ ನ್ಯೂನತೆಗಳನ್ನು ವ್ಯಕ್ತಪಡಿಸಲು ಇನ್ನೂ ಹೆಣಗಾಡುತ್ತಾರೆ. ಆದ್ದರಿಂದ ಈ ಅಭಿಯಾನ ಶುರು ಮಾಡಲಾಗಿದೆ. ಇದಕ್ಕೆ ಬಾಲಿವುಡ್​ ನಟ ರಣವೀರ್​ ಸಿಂಗ್​ ಅವರನ್ನು ರಾಯಭಾರಿ ಮಾಡಲಾಗಿದೆ ಎಂದಿದ್ದಾರೆ. 

ರಾಖಿ ಸಾವಂತ್​ ಸ್ಥಿತಿ ಗಂಭೀರ? ಶಾಕಿಂಗ್​ ಹೇಳಿಕೆ ಕೊಟ್ಟ ಮಾಜಿ ಪತಿ- ನಟಿಗೆ ಆಗಿದ್ದೇನು?

Latest Videos
Follow Us:
Download App:
  • android
  • ios