Asianet Suvarna News Asianet Suvarna News

ರೇಪ್​ ಮಾಡಿಸಿಕೊಳ್ಳಲು ಹುಡುಗಿಯರ ಕ್ಯೂ: ಫಿಲ್ಮ್​ ಇಂಡಸ್ಟ್ರಿಯ ಭಯಾನಕ ರೂಪ ಎಕ್ಸ್​ಪೋಸ್​ ಮಾಡಿದ ರಾಖಿ!

ಚಿತ್ರ ನಟಿಯರಾಗಲು ಕೆಲವು ಯುವತಿಯರು ಯಾವ ಮಟ್ಟಿಗೆ ಇಳಿಯುತ್ತಿದ್ದಾರೆ ಎನ್ನುವ ಸಿನಿ ಇಂಡಸ್ಟ್ರಿಯ ಭಯಾನಕ ರೂಪವನ್ನು ಬಿಚ್ಚಿಟ್ಟಿದ್ದಾರೆ ನಟಿ ರಾಖಿ ಸಾವಂತ್​.
 

Rakhi Sawant  revealed the which extent some ladies are going to become film actresses suc
Author
First Published May 6, 2024, 2:52 PM IST

ಚಿತ್ರರಂಗ ಎಂದರೆ ಕಾಸ್ಟಿಂಗ್​ ಕೌಚ್​ ಎನ್ನುವುದನ್ನು ಇದುವರೆಗೆ ಕೇಳಿಕೊಂಡು ಬಂದಿದ್ದೇವೆ. ಯುವತಿಯರನ್ನು ನಟಿಯರನ್ನಾಗಿ ಮಾಡಬೇಕು ಎಂದರೆ ಡೈರೆಕ್ಟರ್​, ಪ್ರೊಡ್ಯೂಸರ್​... ಹೀಗೆ ಚಿತ್ರರಂಗದ ಕೆಲವರ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಅವರು ಮಂಚಕ್ಕೆ ಕರೆದಾಗ ಹೋಗಬೇಕು... ಇತ್ಯಾದಿ ಇತ್ಯಾದಿ. ಈ ಬಗ್ಗೆ ಇದಾಗಲೇ ಹಲವಾರು ಮಂದಿ ನಟಿಯರು ತಮಗಾಗಿರುವ ಕರಾಳ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ಬಟ್ಟೆ ಬಿಚ್ಚು ಎಂದರು, ಮಲಗಲು ಬಾ ಎಂದರು, ಅಡ್ಜೆಸ್ಟ್​ ಮಾಡ್ಕೋ ಎಂದರು... ಹಾಗೆ ಹೀಗೆ ಎಂದೆಲ್ಲಾ ನಟಿಯರು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ತಾವು ಯಾವುದೇ ರೀತಿಯ ಅಡ್ಜೆಸ್ಟ್​ ಮಾಡಿಕೊಳ್ಳಲು ತಯಾರಿಲ್ಲದ ಹಿನ್ನೆಲೆಯಲ್ಲಿ ತಮಗೆ ಛಾನ್ಸ್​ ಸಿಕ್ಕಿಲ್ಲ ಎಂದು ಕೆಲವರು ಹೇಳಿಕೊಂಡಿದ್ದರೆ, ತಮ್ಮ ಸ್ವಂತ ಪ್ರಯತ್ನದ ಬಲದಿಂದ ಕಷ್ಟಪಟ್ಟು ಮೇಲಕ್ಕೆ ಬಂದಿರುವುದಾಗಿ ಇನ್ನು ಕೆಲವರು ಹೇಳಿದ್ದಾರೆ. ಇದು ಸಿನಿ ಇಂಡಸ್ಟ್ರಿಯ ಒಂದು ಮುಖ.

ಆದರೆ ಇನ್ನೊಂದು ಮುಖದ ಬಗ್ಗೆಗಿನ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ ಕಾಂಟ್ರವರ್ಸಿ ಕ್ವೀನ್​ ರಾಖಿ ಸಾವಂತ್​. ರಾಖಿ ಸಾವಂತ್​ ಎಂದಾಕ್ಷಣ ಕಣ್ಣೆದುರಿಗೆ ಬರುವ ಚಿತ್ರಣವೇ ಬೇರೆ. ಸದಾ ಕಾಂಟ್ರವರ್ಸಿಗಳಿಂದಲೇ ಫೇಮಸ್​ ಆಗಿರೋ ಇವರು ಮಾಡಿದ್ದೆಲ್ಲಾ ನಾಟಕ, ಇವರಿಗೆ ಮಾನಸಿಕ ಸಮಸ್ಯೆ ಇದೆ ಎಂದೆಲ್ಲಾ ಅಂದುಕೊಳ್ಳುವವರೇ ಹೆಚ್ಚು. ಅದರಲ್ಲಿಯೂ ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾದ ಮೇಲೆ ನಡೆದಿರುವ ನಾಟಕಗಳು ಎಲ್ಲರಿಗೂ ತಿಳಿದದ್ದೇ.

ಎದೆ ಮೇಲಿಂದ ಜಾರಿ ಬೀಳ್ತಿರೋ ಶೆರ್ಲಿನ್​ ಬಟ್ಟೆ: ವಿಡಿಯೋ ನೋಡಿ ಬಂದು ಸರಿ ಮಾಡ್ಲಾ ಕೇಳ್ತಿದ್ದಾರೆ ಫ್ಯಾನ್ಸ್​!

ಆದರೆ ಇದೀಗ ನಟಿ ಯುವತಿಯರ ಭಯಾನಕ, ಕರಾಳ ರೂಪವನ್ನು ತೆರೆದಿಟ್ಟಿದ್ದಾರೆ. ನಟಿಯಾಗ ಬಯಸಲು ನಿರ್ದೇಶಕರು, ನಿರ್ಮಾಪಕರ ಬಳಿ ಇರುವ ಹಲವು ಯುವತಿಯರು ಹೇಗೆ ನಡೆದುಕೊಳ್ಳುತ್ತಾರೆ ಎಂದು ರಾಖಿ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಂಡಸ್ಟ್ರಿಯಲ್ಲಿ ರೇಪ್​ ನಡೆಯುವುದಿಲ್ಲ. ಬದಲಿಗೆ ರೇಪ್​  ಮಾಡಿಸಿಕೊಳ್ಳಲು ಯುವತಿಯರು ಮುಂದೆ ಬರುತ್ತಾರೆ. ತೀರಾ ಅಸಭ್ಯ, ಅಶ್ಲೀಲ ರೀತಿಯಲ್ಲಿ ನಡೆದುಕೊಂಡು, ಮುಂದೆ ಇರುವವರನ್ನು ಉತ್ತೇಜಿಸಿ ನಂತರ ಎಲ್ಲವನ್ನೂ ರಿಕಾರ್ಡ್​ ಮಾಡಿಕೊಂಡು ನಿರ್ದೇಶಕರು, ನಿರ್ಮಾಪಕರನ್ನೇ ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ಅವರಿಗೆ ಅಭಿನಯದ ಗಂಧಗಾಳಿಯೂ ಇರುವುದಿಲ್ಲ, ಎಬಿಸಿಡಿಯೂ ಗೊತ್ತಿರುವುದಿಲ್ಲ. ಆದರೆ ಆ ವಿಡಿಯೋ ಹಿಡಿದುಕೊಂಡು ಬ್ಲ್ಯಾಕ್​ಮೇಲ್​ ಮಾಡಿ, ಇದನ್ನು ನಿಮ್ಮ ಮನೆಯವರಿಗೆ ತೋರಿಸಲಾ ಅಥವಾ ನಟಿಯರನ್ನಾಗಿ ಮಾಡುತ್ತೀರಾ ಎಂದು ಬ್ಲ್ಯಾಕ್​ಮೇಲ್​ ಮಾಡುತ್ತಾರೆ. ಇದರಿಂದ ಬೇರೆ ದಾರಿ ಕಾಣದೇ  ಅವರನ್ನು ನಟಿಯರನ್ನಾಗಿ ಮಾಡಲಾಗುತ್ತದೆ ಎಂದಿದ್ದಾರೆ.

ಇದನ್ನು ನೋಡಿದ ಕೆಲವರು ಈಕೆ ದೀಪಿಕಾ ಪಡುಕೋಣೆಯವರನ್ನು ಟಾರ್ಗೆಟ್​  ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಅವರು ಯಾರನ್ನು ಟಾರ್ಗೆಟ್​ ಮಾಡಿದ್ದಾರೋ ಗೊತ್ತಿಲ್ಲ, ಆದರೆ ಕಾಸ್ಟಿಂಗ್​ ಕೌಚ್​ ಎಂದು ಹಲವು ನಟಿಯರು ಹೇಳಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಯುವತಿಯರೇ ಹೇಗೆ ಬ್ಲ್ಯಾಕ್​  ಮಾಡುವ ಸನ್ನಿವೇಶವೂ ಇದೆ ಎನ್ನುವುದು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಹಲ್​ಚಲ್​ ಸೃಷ್ಟಿಸುತ್ತಿದೆ.  

ಬೆಡ್​ರೂಮ್​ ಕಮಿಟ್​ಮೆಂಟ್​ ಇಲ್ಲದಿದ್ರೆ ಟಾಪ್​ ನಾಯಕಿಯಾಗೋದು ಕಷ್ಟ! ರಮ್ಯಾ ಕೃಷ್ಣನ್​ ಹೇಳಿಕೆ ವೈರಲ್​...

 
 
 
 
 
 
 
 
 
 
 
 
 
 
 

A post shared by Sneha Jangid (@sneha98095)

Follow Us:
Download App:
  • android
  • ios