Asianet Suvarna News Asianet Suvarna News

ನಿಮ್ಗೆ ಸೆಂಟ್ರಲ್ ಕೆವೈಸಿ ಬಗ್ಗೆ ಗೊತ್ತಾ? ಒಮ್ಮೆ ಮಾಡಿಸಿದ್ರೆ ಸಾಕು, ಬ್ಯಾಂಕಿಗೆ ಪದೇಪದೆ ದಾಖಲೆ ನೀಡೋ ರಗಳೆ ಇಲ್ಲ!

ಸೆಂಟ್ರಲ್ ಕೆವೈಸಿ ಅಥವಾ ಸಿಕೆವೈಸಿ ಮಾಡಿಸೋದ್ರಿಂದ ಬ್ಯಾಂಕ್ ಗ್ರಾಹಕರಿಗೆ ಅನೇಕ ಪ್ರಯೋಜನಗಳಿವೆ. ಇದು ಪದೇಪದೆ ಕೆವೈಸಿ ಮಾಡಿಸಬೇಕಾದ ಅನಿವಾರ್ಯತೆಯನ್ನು ತಪ್ಪಿಸುತ್ತದೆ. 

What Is Central KYC In Bank Know Benefits and How It Works anu
Author
First Published Apr 12, 2024, 12:24 PM IST

Business Desk:ಬ್ಯಾಂಕುಗಳಲ್ಲಿ  ನೋ ಯುವರ್ ಕಸ್ಟಮರ್ ಅಥವಾ ಕೆವೈಸಿ ಪ್ರಕ್ರಿಯೆಯನ್ನು ಆಗಾಗ ಮಾಡಬೇಕಾಗುತ್ತದೆ. ವೈಯಕ್ತಿಕ ಮಾಹಿತಿಗಳನ್ನು ಆಗಾಗ ಅಪ್ಡೇಟ್ ಮಾಡೋದು ಅಗತ್ಯ ಕೂಡ. ಆದರೆ, ಕೆವೈಸಿ ಹೆಸರಿನಲ್ಲಿ ಆಗಾಗ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡೋದು ಗ್ರಾಹಕರಿಗೆ ಕಷ್ಟದ ಕೆಲಸ ಕೂಡ ಹೌದು. ಕೆವೈಸಿ ಸಮರ್ಪಕವಾಗಿಲ್ಲ ಎಂಬ ಕಾರಣದಿಂದಲೇ ಕೆಲವು ಬ್ಯಾಂಕಿಂಗ್ ಸಂಬಂಧಿ ಕೆಲಸಗಳಲ್ಲಿ ವಿಳಂಬ ಮಾಡಲಾಗುತ್ತದೆ ಕೂಡ. ಆದರೆ, ಪದೇಪದೆ ಕೆವೈಸಿ ಮಾಡಿಸುವ ಹಾಗೂ ಅದಕ್ಕಾಗಿ ದಾಖಲೆಗಳನ್ನು ಸಲ್ಲಿಕೆ ಮಾಡುವ ಅಗತ್ಯವನ್ನು ಈ ಹೊಸ ಮಾದರಿ ಕೆವೈಸಿ ತಪ್ಪಿಸಿದೆ. ಸಿಕೆವೈಸಿ ಅಥವಾ ಸೆಂಟ್ರಲ್ ನೋ ಯುವರ್ ಕಸ್ಟಮರ್ ಪದೇಪದೆ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ತಪ್ಪಿಸಿದೆ. ಸಿಕೆವೈಸಿ ಅಡಿಯಲ್ಲಿ ನೀವು ಒಮ್ಮೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಸಾಕು, ನಿಮಗೆ 14 ಅಂಕೆಗಳ ವಿಶಿಷ್ಟ ಸಂಖ್ಯೆ ನೀಡಲಾಗುತ್ತದೆ. ನಿಮ್ಮ ಗುರುತು ದೃಢೀಕರಣಕ್ಕೆ ಅಧಿಕೃತ ಹಣಕಾಸು ಸಂಸ್ಥೆಗಳು ನಿಮ್ಮ ಸಿಕೆವೈಸಿ ಸಂಖ್ಯೆಯನ್ನು ಪಡೆಯುವ ಮೂಲಕ ಹೊಸ ಖಾತೆ ತೆರೆಯೋದು ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ.

CKYC ಅಂದ್ರೇನು?
ಸಿಕೆವೈಸಿ ಸರ್ಕಾರದ ಕಾರ್ಯಕ್ರಮವಾಗಿದ್ದು, ಇದು ಭಾರತದಲ್ಲಿ ನಿಮಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ. ಇದು ಕೇಂದ್ರೀಕೃತ ಡೇಟಾ ವ್ಯವಸ್ಥೆಯಾಗಿದ್ದು, ಹಣಕಾಸು ವಲಯದಲ್ಲಿ ಕೆವೈಸಿ ಮಾಹಿತಿಯನ್ನು ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ದೂರ ಮಾಡಿದೆ. 

EPF ಖಾತೆಗೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಲು ಹೊಸ ವಿಧಾನ; ಈ ಆನ್ಲೈನ್ ಪ್ರಕ್ರಿಯೆ ಬಲು ಸರಳ

ಸಿಕೆವೈಸಿ ರಿಜಿಸ್ಟ್ರಿ ಅಂದ್ರೇನು?
ಇದು ಹಣಕಾಸು ವಲಯದಲ್ಲಿ ಗ್ರಾಹಕರ ಕೆವೈಸಿ ದಾಖಲೆಗಳನ್ನು ನಿರ್ವಹಣೆ ಮಾಡುವ ಕೇಂದ್ರೀಕೃತ ವ್ಯವಸ್ಥೆಯಾಗಿದೆ. ಯುನಿಫಾರ್ಮ್ ಕೆವೈಸಿ ನೀತಿಗಳು ಹಾಗೂ ಕೆವೈಸಿ ದಾಖಲೆಗಳನ್ನು ಅಂತರ ಸಂಸ್ಥೆಗಳಲ್ಲಿ ಬಳಸಲು ಅನುವು ನೀಡುವ ಮೂಲಕ ಕೆವೈಸಿ ದಾಖಲೆಗಳನ್ನು ಪದೇಪದೆ ನೀಡಬೇಕಾದ ಹೊರೆಯನ್ನು ತಗ್ಗಿಸಿದೆ. ಹಾಗೆಯೇ ಹಣಕಾಸು ಸಂಸ್ಥೆಗಳ ಜೊತೆಗೆ ಹೊಸ ಸಂಬಂಧ ಬೆಳೆಸಲು ಈ ದಾಖಲೆಗಳನ್ನು ಪರಿಶೀಲನೆಗೊಳಪಡಿಸುತ್ತವೆ. 

ಯಾರು ಸಿಕೆವೈಸಿ ಬಳಸಬಹುದು?
ಭಾರತ ಸರ್ಕಾರ ಅಥವಾ ಆರ್ ಬಿಐ, ಸೆಬಿ, ಐಆರ್ ಡಿಎ ಹಾಗೂ ಪಿಎಫ್ ಆರ್ ಡಿಎ ಸೇರದಂತೆ ಯಾವುದೇ ಹಣಕಾಸು ನಿಯಂತ್ರಣ ಸಂಸ್ಥೆ ರೂಪಿಸಿರುವ  ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಥವಾ ನಿಯಮದ ಅಡಿಯಲ್ಲಿ ಅಧಿಕೃತ ಸಂಸ್ಥೆಗಳು ಅಥವಾ ಇತರ ಸಂಸ್ಥೆಗಳು ಸೆಂಟ್ರಲ್ ಕೆವೈಸಿ ಅರ್ಜಿಯನ್ನು ಪಡೆಯಬಹುದು. 

ಯಾಕೆ ಸಿಕೆವೈಸಿ ಅನುಷ್ಠಾನಗೊಳಿಸಲಾಗಿದೆ?
ಕೆವೈಸಿ ದಾಖಲೆಗಳನ್ನು ಪರಿಶೀಲನೆಗಾಗಿ ಪದೇಪದೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ತಪ್ಪಿಸೋದು ಸಿಕೆವೈಸಿ ಅನುಷ್ಠಾನದ ಮೂಲ ಉದ್ದೇಶವಾಗಿದೆ. 

ಕೇಂದ್ರೀಕೃತ ಡೇಟಾಬೇಸ್: ಸಿಕೆವೈಸಿ ಕೇದ್ರೀಕೃತ ವ್ಯವಸ್ಥೆಯಾಗಿದ್ದು, ಇದು ವ್ಯಕ್ತಿಗಳ ಕೆವೈಸಿ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಈ ಮೂಲಕ ಬ್ಯಾಂಕ್ಸ್, ಮ್ಯೂಚುವಲ್ ಫಂಡ್ಸ್, ವಿಮಾ ಕಂಪನಿಗಳು ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಗೆ ಪದೇಪದೆ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ತಪ್ಪಿಸಿದೆ.

ಸರಳೀಕೃತ ಪ್ರಕ್ರಿಯೆ: ಒಮ್ಮೆ ನೀವು ಸಿಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ 14ಅಂಕೆಗಳ ವಿಶಿಷ್ಟ ಸಿಕೆವೈಸಿ (CKYC) ಸಂಖ್ಯೆ ಸಿಗುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ಭವಿಷ್ಯದ ಹಣಕಾಸಿನ ವಹಿವಾಟುಗಳಿಗೆ ಭೌತಿಕ ದಾಖಲೆಗಳನ್ನು ಸಲ್ಲಿಕೆ ಮಾಡುವ ಬದಲು ನೀವು ಈ ಸಂಖ್ಯೆ ಬಳಸಬಹುದು.

ಪ್ರಯೋಜನಗಳು: ಸಿಕೆವೈಸಿ ಗ್ರಾಹಕರು ಹಾಗೂ ಸಂಸ್ಥೆಗಳಿಗೆ ಪ್ರಯೋಜನ ಒದಗಿಸುತ್ತದೆ. ಅಲ್ಲದೆ, ಗ್ರಾಹಕರು ಅನೇಕ ಕೆವೈಸಿ ಪ್ರಕ್ರಿಯೆಗಳನ್ನು ಮಾಡಬೇಕಾದ ಅಗತ್ಯವಿಲ್ಲ. ಇದರಿಂದ ಅವರ ಸಮಯ ಹಾಗೂ ಪರಿಶ್ರಮ ಉಳಿಯುತ್ತದೆ. 

ಯುಪಿಐ ಬಳಸಿ ಕ್ಯಾಶ್ ಡೆಫಾಸಿಟ್ ಸೌಲಭ್ಯ ಘೋಷಿಸಿದ ಆರ್ ಬಿಐ; ಇದರ ಬಳಕೆ ಹೇಗೆ? ಇಲ್ಲಿದೆ ಮಾಹಿತಿ

ಸಿಕೆವೈಸಿ ಹೇಗೆ ಕಾರ್ಯನಿರ್ವಹಿಸುತ್ತದೆ?
ಸಿಕೆವೈಸಿ ರಿಜಿಸ್ಟ್ರಿ ಒಬ್ಬ ವ್ಯಕ್ತಿಯ ಅನೇಕ ವಿಳಾಸಗಳನ್ನು ಹೊಂದಿರುತ್ತದೆ. ನಿಮ್ಮ ಹೆಚ್ಚುವರಿ ವಿಳಾಸಗಳ ಮಾಹಿತಿಗಳನ್ನು ಬ್ಯಾಂಕ್ ಅಥವಾ ಇತರ ಸಂಸ್ಥೆಗಳಿಗೆ ನೀಡಲು ನೀವು ಅನೆಕ್ಷರ್ -ಎ1 ಅರ್ಜಿ ಬಳಸಬಹುದು. 
ಆ ಬಳಿಕ ಬ್ಯಾಂಕ್ ಸೆಂಟ್ರಲ್ ಕೆವೈಸಿ ಅರ್ಜಿಯಲ್ಲಿ ನಿಮ್ಮ ಸಿಕೆವೈಸಿ ಪ್ರೊಫೈಲ್ ಗೆ ಇತರ ವಿಳಾಸ ಲಿಂಕ್ ಮಾಡಲು ಅಪ್ಡೇಟ್ ಮನವಿ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ. ಉದಾಹರಣೆಗೆ ನಿಮ್ಮ ಪ್ರಾಥಮಿಕ ವಿಳಾಸ ಮುಂಬೈನಲ್ಲಿದ್ದು, ಎ1 ಅರ್ಜಿ ಮೂಲಕ ನಿಮ್ಮ ಇತರ ಬ್ಯಾಂಕ್ ವಿಳಾಸಗಳನ್ನು ಸೇರ್ಪಡೆಗೊಳಿಸಬಹುದು. ಇದರಿಂದ ಬ್ಯಾಂಕ್ ಹಾಗೂ ಸಿಕೆವೈಸಿ ವ್ಯವಸ್ಥೆಗಳಿಗೆ ನಿಮ್ಮ ಸಂಪರ್ಕ ಮಾಹಿತಿಯ ಸಂಪೂರ್ಣ ಚಿತ್ರಣ ಸಿಗಲಿದೆ. 


 

Follow Us:
Download App:
  • android
  • ios